ಸಮುದಾಯ ಸಹಕಾರದಿಂದ ಸುಸೂತ್ರ ಚುನಾವಣೆ: ಎಸ್‌ಪಿ ರವಿಕಾಂತೇ ಗೌಡ
Team Udayavani, May 17, 2018, 10:01 AM IST
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ನಾಲ್ಕು ತಿಂಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದವರು ಬಿ.ಆರ್. ರವಿಕಾಂತೇಗೌಡ. ಜಿಲ್ಲೆಗೆ ಹೊಸಬರಾಗಿದ್ದರೂ ಶಾಂತಿಯುತ ಚುನಾವಣೆ ನಡೆಯುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಚುನಾವಣೆ ಸುಗಮವಾಗಿ ನಡೆಯುವುದಕ್ಕೆ ಉತ್ತಮ ರೀತಿಯ ಸಹಕಾರ ಕೊಟ್ಟ ಇಲ್ಲಿನ ಜನತೆಯನ್ನು ಅವರು ಮುಕ್ತ ಕಂಠದಿಂದ ಶ್ಲಾ ಸಿದ್ದಾರೆ. ಬೆಳಗಾವಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದ ರವಿಕಾಂತೇ ಗೌಡ ಅವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಕೆಲವು ಕಡೆ ಸಂಘರ್ಷಮಯ ಸನ್ನಿವೇಶ ಇತ್ತು. ಸಹಜವಾಗಿ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದವು. ಆದರೆ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರ ಬಗ್ಗೆ ಸಂತಸದಿಂದಿರುವ ಎಸ್‌ಪಿ ರವಿಕಾಂತೇ ಗೌಡ ಅವರು ಗಣೇಶ್ ಮಾವಂಜಿ ಅವರ ಜತೆ ನಡೆಸಿದ ಮಾತುಕತೆ ಇಲ್ಲಿದೆ.
ಚುನಾವಣೆಯ ನಿರ್ವಹಣೆ ಬಗ್ಗೆ ಏನೆನ್ನುತ್ತೀರಿ?
ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ಪೂರ್ಣಗೊಂಡ ಬಗ್ಗೆ ನಿಜಕ್ಕೂ ಖುಷಿ ಇದೆ. ಈ ಯಶಸ್ಸಿನ ಹಿರಿಮೆ ಪೊಲೀಸ್ ಸಿಬಂದಿ, ಚುನಾವಣ ಅಧಿಕಾರಿಗಳಿಗೆ ಸಲ್ಲಬೇಕು. ಎಲ್ಲ ಪಕ್ಷಗಳ ನಾಯಕರು ತಮ್ಮ ಪಕ್ಷಗಳ ಕಾರ್ಯಕರ್ತರು ಎಲ್ಲೂ ಹದ್ದು ಮೀರಿ ವರ್ತಿಸದಂತೆ ನಿಗಾ ವಹಿಸಿದ್ದು ಕೂಡ ಇದಕ್ಕೆ ಕಾರಣವಾಯಿತು. ಚುನಾವಣೆ ಸುಸೂತ್ರವಾಗಿ ನಡೆಯುವಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸುವೆ.
ಚುನಾವಣೆಯ ವೇಳೆ ಯಾವ ಸಮಸ್ಯೆಗಳನ್ನು ಎದುರಿಸಿದಿರಿ?
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಹೇಳಿಕೊಳ್ಳುವಂತಹ ಸಮಸ್ಯಗಳೇನೂ ಉಂಟಾಗಿಲ್ಲ. ಬಂಟ್ವಾಳ ತಾಲೂಕು ಸೂಕ್ಷ್ಮ ಕ್ಷೇತ್ರವಾದ್ದರಿಂದ ಅಲ್ಲಿ ಹೆಚ್ಚು ನಿಗಾ ವಹಿಸಬೇಕಾಯಿತು. ಒಂದೆರಡು ಕಡೆ ಸಣ್ಣಪುಟ್ಟ ಅಹಿತರ ಘಟನೆಗಳು ನಡೆದರೂ ಆರಂಭದಲ್ಲೇ ಅವುಗಳನ್ನು ಹತ್ತಿಕ್ಕುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮತ ಎಣಿಕೆಯ ಅನಂತರ ಬಂಟ್ವಾಳ ದಲ್ಲಿ ರಾಜಕೀಯ ಪಕ್ಷವೊಂದನ್ನು ಬೆಂಬಲಿಸಿ ಕೆಲಸ ಮಾಡಿದ್ದಾನೆ ಎಂದು ಆರೋಪಿಸಿ ಇನ್ನೊಂದು ಪಕ್ಷಕ್ಕೆ ಸೇರಿದ ಕೆಲವರು ಆಟೋ ರಿಕ್ಷಾ ಚಾಲಕನೊಬ್ಬನನ್ನು ಥಳಿಸಲು ಮುಂದಾಗಿ ಆಟೋ ರಿಕ್ಷಾದ ಹಿಂಬದಿಯ ಗಾಜು ಒಡೆದು ಹಾನಿಗೊಳಿಸಿದ ಘಟನೆ ನಡೆದಿತ್ತು. ಆದರೆ ಸ್ಥಳೀಯ ಪೊಲೀಸರು ತತ್‌ಕ್ಷಣವೇ ಸ್ಥಳಕ್ಕೆ ತೆರಳಿ ದಾಳಿ ಮಾಡಿದ ಓರ್ವನನ್ನು ಬಂಧಿಸಿ, ಹಿಂಸೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಚುನಾವಣೆಯ ವೇಳೆ ದೊಂಬಿ, ಗಲಭೆ ಕಡಿಮೆ ಎಂಬುದು ಸಾಬೀತಾಗಿದೆ.
ಚುನಾವಣೆಯನ್ನು ಸುಸೂತ್ರವಾಗಿ ನಿರ್ವಹಿಸಿದ ಅನುಭವದ ಬಗ್ಗೆ ನಿಮ್ಮ ಅಭಿಪ್ರಾಯ?
ಜಿಲ್ಲೆಯ ಜನರು ಕಾನೂನಿಗೆ ಗೌರವ ನೀಡಿ, ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸುವವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸುಸೂತ್ರ ಚುನಾವಣೆಯಲ್ಲಿ ಪೊಲೀಸರ ಪಾತ್ರವೂ ಇದೆ ಎಂಬುದು ಹೆಮ್ಮೆಯ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.