ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ


Team Udayavani, Dec 21, 2017, 2:15 PM IST

21-Dec-11.jpg

ಸುಳ್ಯ : ಮುಂದಿನ ಸಾಲಿನ ಕ್ರಿಯಾಯೋಜನೆ ತಯಾರಿಸಿ ಅನುದಾನವನ್ನು ಸಮರ್ಪಕವಾಗಿ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಸಭೆಗೆ ಮುಂಚಿತವಾಗಿ ಅಗತ್ಯ ಕಾಮಗಾರಿಗಳಿಗೆ ಸೂಕ್ತ ಬಜೆಟ್‌ ಮೀಸಲಿಡಲು ಸದಸ್ಯರನ್ನೊಳಗೊಂಡ ಪೂರ್ವಭಾವಿ ಸಭೆ ನಡೆಸುವಂತೆ ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭೆ ನಿರ್ಧರಿಸಿದೆ. ಎಪಿಎಂಸಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿದ ಮಾಸಿಕ ಸಭೆಯಲ್ಲಿ ಸದಸ್ಯರು ಈ ಒಮ್ಮತದ ತೀರ್ಮಾನ ಕೈಗೊಂಡರು.

ಮೊತ್ತ ನಿಗದಿಪಡಿಸಿ
ಕ್ರಿಯಾಯೋಜನೆ ಸಭೆಗೆ ಮುಂಚಿತಾಗಿ ಅಗತ್ಯ ಕಾಮಗಾರಿಗಳ ಬಗ್ಗೆ ಚರ್ಚಿಸಿ ಅದಕ್ಕೆ ಅರ್ಹವಾದ ಮೊತ್ತ ನಿಗದಿಪಡಿಸಬೇಕು. ಕಾಮಗಾರಿಗಳಿಗೆ ಅಗತ್ಯ ಅನುದಾನ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅಭಿಯಂತರರನ್ನು ಸಭೆಗೆ ಕರೆಸಬೇಕು. ಎಲ್ಲ ಸದಸ್ಯರನ್ನೊಳಗೊಂಡ ಕ್ರಿಯಾಯೋಜನೆಯ ಪೂರ್ವಭಾವಿ ಸಭೆ ನಡೆಸಿ ಬಳಿಕ ಕ್ರಿಯಾಯೋಜನೆ ತಯಾರಿಸುವುದು ಸೂಕ್ತ ಎಂದು ಸದಸ್ಯ ಸಂತೋಷ್‌ ಜಾಕೆ ಪ್ರಸ್ತಾವಿಸಿದಾಗ ಸದಸ್ಯರೆಲ್ಲರೂ ಧ್ವನಿಗೂಡಿಸಿದರು.

ಒತ್ತುವರಿ- ಜಂಟಿ ಸರ್ವೆಗೆ ಸಲಹೆ
ಎಪಿಎಂಸಿ ಯಾರ್ಡ್‌ನ ಸರ್ವೆ ವೇಳೆ 5 ಸೆಂಟ್ಸ್‌ ಜಾಗ ಒತ್ತುವರಿಯಾಗಿರುವುದನ್ನು ಅಧ್ಯಕ್ಷರು ಸದಸ್ಯರ ಗಮನಕ್ಕೆ ತಂದರು. ಈ ಬಗ್ಗೆ ಸುದೀರ್ಘ‌ ಚರ್ಚಿಸಲಾಯಿತು. ಸದಸ್ಯ ವಿನಯ್‌ ಮುಳುಗಾಡು ಜಂಟಿ ಸರ್ವೆ ನಡೆಸಿ ಬಳಿಕ ಸಂಸ್ಥೆಯ ಆವರಣಕ್ಕೆ ಕಾಂಪೌಂಡ್‌ ಅಥವಾ ಬೇಲಿ ಅಳವಡಿಸುವಂತೆ ಸಲಹೆ ನೀಡಿದರು.

ಕಸವಿಲೇಗೆ ಅವಕಾಶವಿಲ್ಲ
ಯಾರ್ಡ್‌ನ ಆವರಣದ ಖಾಲಿ ಜಾಗದಲ್ಲಿ ನಗರದ ಕಸ ಮತ್ತು ಮಣ್ಣು ತಂದು ಸುರಿಯದಂತೆ ನಿರ್ಧರಿಸಲಾಯಿತು. ಯಾರ್ಡ್‌ನ ಒಂದು ಭಾಗದ ಆಳ ಜಾಗಕ್ಕೆ ಅಗತ್ಯ ಮಣ್ಣುತುಂಬಿ ಸಮತಟ್ಟು ಗೊಳಿಸಬೇಕಾದಲ್ಲಿ ನಗರ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಯ ಹೊಸ ಮಣ್ಣನ್ನು ಬಳಕೆ ಮಾಡುವಂತೆ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಂಡರು.

ಪ್ಲಾಸ್ಟಿಕ್‌ ನಿಷೇಧ
43 ಲಕ್ಷ ರೂ. ವೆಚ್ಚದ ಗೋಡೌನ್‌ ಮತ್ತು ಸಿಸಿ ರಸ್ತೆ ಕಾಮಗಾರಿಯ ಟೆಂಡರ್‌ ನಡೆದಿದ್ದರೂ ಕಾಮಗಾರಿಗೆ ಒಪ್ಪಿಗೆ ದೊರೆಯದೇ ಬಾಕಿ ಉಳಿದಿದೆ. ಶೀಘ್ರ ಚಾಲನೆಗೆ ಅಧಿಕಾರಿಗಳಗೆ ಒತ್ತಡ ಹಾಕಲು, ಪ್ಲಾಸ್ಟಿಕ್‌ ಬಳಕೆ ನಿಷೇಧ ಸಮರ್ಪಕವಾಗಿ ಜಾರಿತರಲು ನಿರ್ಧರಿಸಲಾಯಿತು.

ಕಳಪೆ ಕಾಮಗಾರಿ ಬಗ್ಗೆ ಮಾಹಿತಿ:
ಅತಿಥಿಗೃಹ ಕಾಮಗಾರಿ ಬಗ್ಗೆ ಸದಸ್ಯ ಬಾಲಕೃಷ್ಣ , ಸಂತೋಷ್‌ ಜಾಕೆ, ಅದಂ ಹಾಜಿ ಮಾಹಿತಿ ಬಯಸಿದಾಗ ಅಧಿಕಾರಿಗಳು
ಮಾಹಿತಿ ನೀಡಿದರು. ಕಳಪೆ ಕಾಮಗಾರಿ ಸಂಬಂಧಿಸಿದ ಚರ್ಚೆ ವೇಳೆ ಹೊಸ ಟೈಲ್ಸ್‌ ಖರೀದಿಗಾಗಿ ಗುತ್ತಿಗೆದಾರರು ಅಧ್ಯಕ್ಷರನ್ನು ಕರೆದುಕೊಂಡು ಹೋಗುವ ನಿರ್ಧಾರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನು ಆಕ್ಷೇಪಿಸಿದ ದೀಪಕ್‌ ಕುತ್ತಮೊಟ್ಟೆ ಈ ನಿರ್ಧಾರ ಸರಿಯಲ್ಲ. ಇದು ಅಧ್ಯಕ್ಷರ ಬಗೆಗಿನ ಅವಗಣನೆಯಾಗುತ್ತದೆ ಎಂದರು.

ಎಪಿಎಂಸಿ ಅಧಿಕಾರಿಗಳು ಕಾರ್ಯ ನಿಮಿತ್ತ ಕ್ಷೇತ್ರಕ್ಕೆ ತೆರಳುವಾಗ ತನ್ನ ಗಮನಕ್ಕೆ ತರುವಂತೆ ಅಧ್ಯಕ್ಷರು ಸೂಚಿಸಿದರು. ಅತಿಥಿಗೃಹ ಶುಲ್ಕ ಏರಿಕೆ, ಆರ್‌ಟಿಒ ಚಾಲನಾ ತರಬೇತಿಗೆ ಶುಲ್ಕ ವಿಧಿಸುವ ಬಗ್ಗೆ , ಯಾರ್ಡ್ ಗೆ  ವಲುಗಾರನ ನೇಮಕ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷೆ ಸುಕನ್ಯಾ ಭಟ್‌, ಕಾರ್ಯದರ್ಶಿ ವಿಮಲಾ, ಸದಸ್ಯರು ಉಪಸ್ಥಿತರಿದ್ದರು.

ಮಾರುಕಟ್ಟೆ ಸಪ್ತಾಹ: ಅಸಮಾಧಾನ
ಆಚರಣೆಯ ಆಮಂತ್ರಣ ಸರಿಯಾಗಿ ತಲುಪಿಸಿಲ್ಲ. ರೈತರಿಗೂ ಮಾಹಿತಿಯಿಲ್ಲ. ಹಿಂದಿನ ದಿನವಷ್ಟೇ ನೀಡಲಾಗಿದೆ. ಕಾಟಾಚಾರಕ್ಕಷ್ಟೇ ಮಾಡುವುದಲ್ಲ. ಕನಿಷ್ಠ ಮಾಧ್ಯಮ ಪ್ರಕಟನೆ ನೀಡಬಹುದಿತ್ತು ಎಂದು ಗಣೇಶ್‌ ಭಟ್‌ ಇಡ್ಯಡ್ಕ, ವಿನಯ ಕುಮಾರ್‌ ಮುಳುಗಾಡು, ಅದಂ ಹಾಜಿ ಮತ್ತಿತರರು ಪ್ರಸ್ತಾಪಿಸಿದರು. ಸದಸ್ಯ ದೀಪಕ್‌ ಕುತ್ತಮೊಟ್ಟೆ ಕಾರ್ಯಕ್ರಮ ಮಾಹಿತಿ ರೈತರಿಗೆ ಪ್ರಾಮಾಣಿಕವಾಗಿ ತಲುಪುವಂತಾಗಬೇಕು ಎಂದರೆ, ದಿನದ ಹಿಂದಷ್ಟೇ ತಿಳಿಸಿ ತಲಾ 5 ಮಂದಿಯನ್ನು ಕರೆತರುವಂತೆ ಮಾಹಿತಿ ನೀಡಲಾಗಿದೆ. ಹೀಗಾದರೆ ರೈತರನ್ನಲ್ಲ ಮನೆ ಮಂದಿಯನ್ನಷ್ಟೇ ಕರೆತರಬೇಕು ಎಂದು ಸದಸ್ಯ ಬಾಲಕೃಷ್ಣ ಹೇಳಿದರು. ಸಪ್ತಾಹಕ್ಕೆ ರೈತರು ಆಗಮಿಸುವಂತೆ ಪೂರ್ವನಿಯೋಜಿತವಾಗಿ ಕರೆಯಬೇಕು ಎಂದು ಸದಸ್ಯ ಪುರುಷೋತ್ತಮ ನಂಗಾರು ಹೇಳಿದರು. ಕಾರ್ಯಕ್ರಮ ಮಾತ್ರವಲ್ಲ ಎಪಿಎಂಸಿ ಕಚೇರಿಯಿಂದ ಒಂದೇ ಒಂದು ಸುತ್ತೋಲೆಗಳು ಬರುತ್ತಿಲ್ಲ ಎಂದು ಸದಸ್ಯ ಮೋನಪ್ಪ ಪಂಜ ದೂರಿದರು.

ಟಾಪ್ ನ್ಯೂಸ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2

Kadaba ತಾಲೂಕಿನಲ್ಲಿ ಸೋಲಾರ್‌ ಪಾರ್ಕ್‌?

1

Puttur: ಬಲ್ನಾಡು ಉಳ್ಳಾಲ್ತಿ ಸನ್ನಿಧಿಗೆ ಭಜನೆಯ ನಡಿಗೆಗೆ 100 ವರ್ಷದ ಸಂಭ್ರಮ!

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

Belthangady ಕಡಿರುದ್ಯಾವರ: ಮತ್ತೆ ಕಾಡಾನೆ ದಾಳಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

Sandalwood: ಮುಹೂರ್ತ ಕಂಡ ರಮೇಶ್‌ ಅರವಿಂದ್ ‌ʼದೈಜಿʼ

6-sirsi

Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ

15

Parvathy Movie: ಪಾರು ಪಾರ್ವತಿಯ ಕಾರ್‌ಬಾರು 

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.