ಅರಂಬೂರು ಸೇತುವೆ ಪೂರ್ಣಕ್ಕೆ ಜೂನ್‌ ಗಡುವು


Team Udayavani, Feb 24, 2019, 4:44 AM IST

24-february-2.jpg

ಸುಳ್ಯ : ಬಹು ಬೇಡಿಕೆಯ ಅರಂಬೂರು ಸೇತುವೆ ಕಾಮಗಾರಿ ನಿರೀಕ್ಷಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಮಳೆಗಾಲದಲ್ಲಿ ಓಡಾಟಕ್ಕೆ ಮುಕ್ತ ಆಗಲಿದೆಯೇ ಎನ್ನುವುದು ಇನ್ನೂ ಖಾತರಿ ಆಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಸೇತುವೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ವೇಗಕ್ಕೆ ಸೂಚನೆ ನೀಡಿದ್ದಲ್ಲದೆ ಜೂನ್‌ ಪ್ರಥಮ ವಾರದಲ್ಲಿ ಸಂಚಾರ ಮುಕ್ತವಾಗಬೇಕು ಎಂದು ಸೂಚಿಸಿದ್ದರು. ಕಳೆದ ಬಾರಿ ಮಳೆಗಾಲದ ಅನಂತರ ಸ್ಥಗಿತವಾಗಿದ್ದ ಕಾಮಗಾರಿ ಈಗ ಮತ್ತೆ ಆರಂಭಗೊಂಡಿದ್ದು, ಎರಡು ಪಿಲ್ಲರ್‌ಗಳಿಗೆ ಸ್ಲಾ éಬ್‌ ಜೋಡಿಸುವ ತಯಾರಿ ಕೆಲಸ ನಡೆಯುತ್ತಿದೆ.

4.90 ಕೋ.ರೂ. ವೆಚ್ಚ
ಆಲೆಟ್ಟಿ ಗ್ರಾಮದ ಪಯಸ್ವಿನಿ ನದಿಗೆ ಅರಂಬೂರು ಬಳಿ 4.90 ಕೋ.ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗುತ್ತಿದೆ. 2015-16ನೇ ಸಾಲಿನ ಆಯವ್ಯಯದಲ್ಲಿ 4.90 ಕೋಟಿ ರೂ. ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಗೊಂಡಿತ್ತು. ಸೇತುವೆಯ ಐದು ಅಂಕಣಗಳ ಕಾಮಗಾರಿ ಪೂರ್ತಿಗೊಂಡಿದ್ದು, ಕೊನೆ ಪಿಲ್ಲರ್‌ನ ಸ್ಲ್ಯಾಬ್‌ ಕೆಲಸ ಪ್ರಗತಿಯಲ್ಲಿದೆ. 82.54 ಮೀ. ಉದ್ದ, 7.5 ಮೀ. ಮೇಲ್ಭಾಗದ ಅಗಲ ಮತ್ತು 9 ಮೀ. ಎತ್ತರವಿದೆ. ನೀರು ಹರಿಯಲು 15 ಮೀ. ಅಗಲದ ಐದು ಕಿಂಡಿಗಳಿವೆ. ನಾಲ್ಕು ಪಿಯರ್‌ ಮತ್ತು ಎರಡು ಅಬೆಟ್‌ಮೆಂಟ್‌ ಒಳಗೊಂಡಂತೆ ಸುಸಜ್ಜಿತ ಆರ್ಸಿಸಿ ಟಿ ಬೀಮ್‌ ಬ್ರಿಡ್ಜ್ ಇದಾಗಿದೆ.

ವಿಸ್ತರಿತ ಅವಧಿ ಮುಗಿದಿದೆ
2017 ಜನವರಿ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾರ್ಚ್‌ ತಿಂಗಳಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಮುಗಿಸಲು 11 ತಿಂಗಳ ಅವಧಿ ನೀಡಲಾಗಿದ್ದು, ಅದರಂತೆ 2018 ಮಾರ್ಚ್ ಗೆ ಅವಧಿ ಮುಗಿದಿದೆ. ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2019ರ ಮಾರ್ಚ್‌ ತನಕ ಅವಧಿ ವಿಸ್ತರಿಸುವಂತೆ ಕೋರಿಕೆ ಸಲ್ಲಿಸಿದ್ದರು. ಈ ಅವಧಿ ಮುಗಿಯಲು ಇನ್ನೂ 1 ತಿಂಗಳಿದೆ. ಹಾಗಾಗಿ ಅದರೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ಇದು ಅನುಮಾನವೆನಿಸಿದೆ.

ಬಹುಕಾಲದ ಬೇಡಿಕೆ
ಆಲೆಟ್ಟಿ ಗ್ರಾಮದ ಅರಂಬೂರು, ನೆಡಿcಲ್‌, ಕೂಟೇಲು ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳು ನಗರದ ಸಮೀಪವೇ ಇದ್ದರೂ, ಸೇತುವೆ ಇಲ್ಲದ ಕಾರಣ ಸುಳ್ಯಕ್ಕೆ ಬರಬೇಕಾದರೆ ಆಲೆಟ್ಟಿಗೆ ತೆರಳಿ ಸುತ್ತು ಬಳಸಿ ಸುಮಾರು 16 ಕಿ.ಮೀ. ಪ್ರಯಾಣಿಸಬೇಕಿತ್ತು. ಇಲ್ಲದಿದ್ದರೆ ದೋಣಿ ಬಳಸಿ ನದಿ ದಾಟಬೇಕಿತ್ತು. ಪದ್ಮಶ್ರೀ ಪುರಸ್ಕೃತ ಗಿರೀಶ್‌ ಭಾರದ್ವಾಜ್‌ ಅವರು 1989ರಲ್ಲಿ ತೂಗು ಸೇತುವೆ ನಿರ್ಮಿಸಿ ಪಾದಚಾರಿ ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ದೋಣಿಯಲ್ಲಿ ದಾಟುವ ಪ್ರಮೇಯ ತಪ್ಪಿತ್ತು.

ಬವಣೆಗೆ ಮುಕ್ತಿ ಆದರೆ ವಾಹನ ಓಡಾಟಕ್ಕೆ ಸಾಧ್ಯವಾಗದ ಕಾರಣ ಜನರು ದೈನಂದಿನ ಅಗತ್ಯತೆಗಳಿಗೆ ಬೇಕಾದ ಎಲ್ಲ ವಸ್ತುಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟುವ ಸ್ಥಿತಿ ಈಗಲು ಮುಂದುವರಿದಿದೆ.

ಕೃಷಿಕರು ಕೃಷಿ ಉತ್ಪನ್ನಗಳನ್ನು ತಲೆಯಲ್ಲಿ ಹೊತ್ತು ತೂಗು ಸೇತುವೆ ದಾಟಿ ಪೇಟೆಗೆ ಬರಬೇಕು. ಅರಂಬೂರು ಸೇತುವೆ ಪೂರ್ಣಗೊಂಡರೆ ಈ ಬವಣೆಗೆ ಮುಕ್ತಿ ಸಿಗಲಿದೆ. ಆಲೆಟ್ಟಿ, ಪೆರಾಜೆ ಗ್ರಾಮಕ್ಕೆ, ಆಲೆಟ್ಟಿ ಮೂಲಕ ಬಡ್ಡಡ್ಕ-ಕಲ್ಲಪ್ಪಳ್ಳಿ, ಆಲೆಟ್ಟಿ-ಕೋಲ್ಚಾರ್‌ -ಬಂದಡ್ಕ, ಬಡ್ಡಡ್ಕ-ಕೂರ್ನಡ್ಕ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ.

ಪೂರ್ಣಕ್ಕೆ ಸೂಚನೆ
ಸೇತುವೆ ನಿರ್ಮಾಣ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದೇನೆ. ಜೂನ್‌ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಿಸಲು ಸಂಬಂಧಿಸಿದ ಎಂಜಿನಿಯರ್‌ ಅವರಿಗೆ ಸೂಚನೆ ನೀಡಿದ್ದೇನೆ.
– ಯು.ಟಿ. ಖಾದರ್‌,
ಜಿಲ್ಲಾ ಉಸ್ತುವಾರಿ ಸಚಿವ 

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Marsh-webster

Border-Gavaskar Trophy: ಮಿಚೆಲ್‌ ಮಾರ್ಷ್‌ ಗಾಯಾಳು; ವೆಬ್‌ಸ್ಟರ್‌ ಬ್ಯಾಕಪ್‌ ಆಟಗಾರ

Bajarang-Poonia

Doping Test: ಕುಸ್ತಿಪಟು ಬಜರಂಗ್‌ ಪೂನಿಯಾಗೆ ನಾಲ್ಕು ವರ್ಷ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Pro-kka

Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು

Hockey

Asia Cup Hockey: ಥಾಯ್ಲೆಂಡ್‌ ವಿರುದ್ಧ ಭಾರತಕ್ಕೆ 11-0 ಅಂತರದ ಜಯ

Ali-Trophy

Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ

Chess-Chmp

Singapore: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಮೂರನೇ ಪಂದ್ಯದಲ್ಲಿ ಗುಕೇಶ್‌ ಗೆಲುವು

Badminton

Badminton: ಸಯ್ಯದ್‌ ಮೋದಿ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.