ಸುಳ್ಯ ವಿಧಾನಸಭಾ ಕ್ಷೇತ್ರ: ಮಸ್ಟರಿಂಗ್‌ ಪೂರ್ಣ; ಇಂದು ಮತದಾನ

Team Udayavani, Apr 18, 2019, 6:00 AM IST

13

ಮತದಾನ ಪರಿಕರಗಳೊಂದಿಗೆ ವಾಹನಗಳತ್ತ ತೆರಳುತ್ತಿರುವ ಅರೆ ಸೇನಾ ಪಡೆ ಯೋಧರು.

ಸುಳ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಮಸ್ಟರಿಂಗ್‌ ಕಾರ್ಯ ಎನ್‌ಎಂಸಿ ಕಾಲೇಜಿನಲ್ಲಿ ಬುಧವಾರ ನಡೆಯಿತು. ಚುನಾವಣಾಧಿಕಾರಿಗಳಾದ ಮಂಜುನಾಥ್‌, ಅಹ್ಮದ್‌ ಕುಂಞಿ, ಚಂದ್ರಶೇಖರ ಪೇರಾಲು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು. ಮತಗಟ್ಟೆ ಸಿಬಂದಿಗೆ ಮತಯಂತ್ರ ಮತ್ತು ಚುನಾವಣ ಸಾಮಗ್ರಿ ವಿತರಿಸಿ ವಿವಿಧ ವಾಹನಗಳ ಮೂಲಕ ಮತಗಟ್ಟೆ ಕೇಂದ್ರಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯಿತು.

ಅಧಿಕಾರಿಗಳ ತಂಡ ಸಿದ್ಧ
ಕಡಬ ಮತ್ತು ಸುಳ್ಯ ತಾಲೂಕು ಒಳಗೊಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಿದ್ದು, 104 ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿವೆ. 18 ನಕ್ಸಲ್‌ ಬಾಧಿತ, 14 ಅತಿ ಹೆಚ್ಚು ಮತ ಚಲಾವಣೆ ಆಗಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಎಆರ್‌ಒ, ಎಪಿಆರ್‌ಒ, 3ನೇ ಪೋಲಿಂಗ್‌ ಮತ್ತು 4ನೇ ಪೋಲಿಂಗ್‌ ಆಫೀಸರ್‌, 1 ಡಿ-ಗ್ರೂಪ್‌ ಸಿಬಂದಿ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಓರ್ವ ಅರೆಸೇನಾ ಪಡೆ ಯೋಧ, 4 ಪೊಲೀಸರು, ಗೃಹರಕ್ಷಕ ದಳದ ಸಿಬಂದಿ, ಸೂಕ್ಷ್ಮ ಮತಗಟ್ಟೆಗಳಲ್ಲಿ ಓರ್ವ ಅರೆಸೇನಾ ಪಡೆ ಯೋಧ, ಮೂವರು ಪೊಲೀಸರು ಮತ್ತು ಓರ್ವ ಗೃಹ ರಕ್ಷಕ ದಳದ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು 1108 ಮತಗಟ್ಟೆ ಸಿಬಂದಿ ಇರಲಿದ್ದಾರೆ. ವಿವಿಧ ಹಂತದ ಕರ್ತವ್ಯ ನಿರ್ವಹಣೆಗಾಗಿ ಅಕೌಂಟಿಂಗ್‌ ಟೀಮ್‌, ಮಾಸ್ಟರ್‌ ಟ್ರೈನರ್ ಟೀಮ್‌, ಸ್ಟಾಟಿಕ್‌ ಸರ್ವೆಲೆನ್ಸ್‌ ಟೀಮ್‌, ವೀಡಿಯೊ ವ್ಯೂವಿಂಗ್‌ ಟೀಮ್‌, ವೀಡಿಯೊ ಸರ್ವೆ ಲೆನ್ಸ್‌ ಟೀಮ್‌, ಎಂಸಿಸಿ ನೋಡೆಲ್‌ ಆಫೀಸರ್‌ಗಳು, ಫ್ಲೆಯಿಂಗ್‌ ಸ್ಕ್ವಾಡ್‌ ಹೀಗೆ ವಿವಿಧ ತಂಡ ಸಿದ್ಧಗೊಂಡಿದೆ.

13 ಮತಗಟ್ಟೆ: ವೆಬ್‌ ಕಾಸ್ಟಿಂಗ್‌
ಒಟ್ಟು 13 ಮತಗಟ್ಟೆಗಳಲ್ಲಿ ಲೈವ್‌ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಇದೆ. ಇಲ್ಲಿ ಮತ ಕೇಂದ್ರದ ಹೊರಭಾಗದಲ್ಲಿ ಮತದಾನಕ್ಕೆ ಬರುವ ಮತದಾರರ ಚಿತ್ರಣದ ವಿಡಿಯೋ ದಾಖಲಾಗುತ್ತದೆ. ದೇವಚಳ್ಳ, ಅಮೈಮಡಿಯಾರು, ಕೊçಕುಳಿ, ಗಾಂಧಿನಗರ ಪ್ರೌಢಶಾಲೆ, ಅಜ್ಜಾವರ ಸರಕಾರಿ ಶಾಲೆ, ಅಜ್ಜಾವರ ಗ್ರಾ.ಪಂ., ಮುಳ್ಯ ಅಟೂರು, ಕಾಂತಮಂಗಲ, ಅಡ್ತಲೆ, ಪೆತ್ತಾಜೆ, ರಾಜಾಂರಾಪುರ ದೊಡ್ಡಡ್ಕ, ಕಲ್ಲುಗುಂಡಿ ಸವೇರಪುರ ಶಾಲೆ, ಕಲ್ಲುಗುಂಡಿ ಸಂಪಾಜೆ ಹಳೆ ಬಿಲ್ಡಿಂಗ್‌ ಮತಗಟ್ಟೆಯಲ್ಲಿ ವೆಬ್‌ ಕಾಸ್ಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. 27 ಬಸ್‌, 25 ಮಿನಿ ಬಸ್‌, 37 ಜೀಪು ಅನ್ನು ಚುನಾವಣಾ ಕಾರ್ಯಕ್ಕೆ ಬಳಸಲಾಗಿದೆ.

ವೀಲ್‌ ಚೇರ್‌
ಅರ್ಹ ಮತಗಟ್ಟೆಗಳಿಗೆ ಅಂಗವಿಕಲರಿಗಾಗಿ ವೀಲ್‌ ಚೇರ್‌, ಮತ ಚಲಾವಣೆ ಅನುಕೂಲಕ್ಕೆ ವಾಕಿಂಗ್‌ ಸ್ಟಿಕ್‌, ಕನ್ನಡಕ ಮೊದಲಾದ ಪರಿಕರ ಒದಗಿಸಲಾಗಿದೆ.

ಇಡಿಸಿ ಸೌಲಭ್ಯ
ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಮತ ಚಲಾಯಿಸಲು ಎಲೆಕ್ಷನ್‌ ಡ್ನೂಟಿ ಸರ್ಟಿಫಿಕೆಟ್‌ (ಇಡಿಸಿ) ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯೊಳಗಿನ ಮತಗಟ್ಟೆ ಸಿಬಂದಿ ತಾವು ಕರ್ತವ್ಯ ನಿರ್ವಹಿಸುವ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸುವುದೇ ಇಡಿಸಿ ಸೌಲಭ್ಯ. ಇದು ಪೊಲೀಸ್‌ ಸಿಬಂದಿ, ವಾಹನ ಚಾಲಕರಿಗೆ ಅನ್ವಯವಾಗುವುದಿಲ್ಲ. ಅವರು ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಬಹುದು. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಮಧ್ಯಾಹ್ನ ತನಕ 1,102 ಮಂದಿಗೆ ಇಡಿಸಿ ಹಾಗೂ 309 ಮಂದಿಗೆ ಅಂಚೆ ಮತದಾನದ ಸೌಲಭ್ಯ ಒದಗಿಸಲಾಗಿದೆ.

ಪಾರಂಪರಿಕ, ಪಿಂಕ್‌ ಮತಗಟ್ಟೆ
ಆಲೆಟ್ಟಿ ಗ್ರಾಮದ ಬಡ್ಡಡ್ಕ ಮತಗಟ್ಟೆ ಸಂಖ್ಯೆ 121ನ್ನು ಪಾರಂಪರಿಕ ಮತಗಟ್ಟೆ, ಗುತ್ತಿಗಾರು ಮತಗಟ್ಟೆ ಸಂಖ್ಯೆ 209 ರಲ್ಲಿ ಮತ್ತು ಕಡಬ ಹಿರಿಯ ಪ್ರಾಥಮಿಕ ಶಾಲಾ ಉತ್ತರ ಮತಗಟ್ಟೆಯಲ್ಲಿ ಪಿಂಕ್‌ ಮತಗಟ್ಟೆ ಸ್ಥಾಪಿಸಲಾಗಿದೆ.

2,00,579 ಮತದಾರರು
ಒಟ್ಟು 2,00,579 ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. 99,631 ಪುರುಷರು ಮತ್ತು 1,00,948 ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದಾರೆ.

 ಸಹಕರಿಸಿ
ಸುಳ್ಯದಲ್ಲಿ ಪ್ರತಿ ಚುನಾವಣೆಯು ಶಾಂತಿಯುತವಾಗಿ ನಡೆಯುತ್ತದೆ. ಎಲ್ಲರೂ ಶಾಂತಿಯುತ ಮತದಾನಕ್ಕೆ ಸಹಕರಿಸ‌ಬೇಕು. ಮತಗಟ್ಟೆಗಳಿಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಯಾವುದೇ ಸಮಸ್ಯೆ ಬಂದರೂ, ತತ್‌ಕ್ಷಣ ಸ್ಪಂದಿಸಲು ತಂಡ ಸಿದ್ಧವಾಗಿದೆ.
ಡಾ| ಮಂಜುನಾಥ ಚುನಾವಣಾಧಿಕಾರಿ, ಸುಳ್ಯ

ಟಾಪ್ ನ್ಯೂಸ್

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

dw

Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.