ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗ ಘಟಕ ಸಭೆ
Team Udayavani, Apr 18, 2018, 11:04 AM IST
ಸುಳ್ಯ : ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ವರ್ಗದ ಘಟಕ ಸಭೆ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಮಾತನಾಡಿ, ದಲಿತರಿಗೆ ಸಮಾನತೆ, ಸ್ವಾಭಿಮಾನದಿಂದ ಬದುಕಲು ಕಾಂಗ್ರೆಸ್ ಅವಕಾಶ ಕಲ್ಪಿಸಿದೆ. ಆದರೆ ಕೆಲವರು ಧರ್ಮ ಜಾತಿಯನ್ನು ಅವರವರ ಅನುಕೂಲತೆಗೆ ತಕ್ಕಂತೆ ಉಪಯೋಗಿಸುವವರು ಇದ್ದಾರೆ. ಅಂತಹ ಪಕ್ಷಗಳಿಂದ ದೂರ ಇದ್ದು, ಸರ್ವ ಸಮಾ ನತೆಯನ್ನು ಎತ್ತಿ ಹಿಡಿಯುವ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕೈ ಜೋಡಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿದರು. ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ ಅಂಬೆಕಲ್ಲು, ದೇವಪ್ಪ ನಾಯ್ಕ ಹೊನ್ನೆಡಿ ಶುಭ ಹಾರೈಸಿದರು. ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಗೀತಾ ಕೋಲ್ಚಾರು, ಸತ್ಯಕುಮಾರ್ ಅಡಿಂಜ, ಭೋಜಪ್ಪ ನಾಯ್ಕ ಅಡ್ಕಾರು, ರವಿಚಂದ್ರ ಕೋನಡ್ಕಪದವು, ಉದಯ ಕುಮಾರ ಕುಕ್ಕುಡೆಲು, ಧರ್ಮಣ್ಣ ನಾಯ್ಕ ಗರಡಿ, ಸೀತಾರಾಮ ಕಣಪಿಲ, ಚೆನ್ನಕೇಶವ ಕಣಪಿಲ, ಧನಂಜಯ ಕಲ್ಮಡ್ಕ, ಪುರುಷೋತ್ತಮ ಬಿ., ಶುಭಕರ ನಾಯ್ಕ, ಬಾಲಕೃಷ್ಣ ಭಟ್, ಗಂಗಾಧರ ಮೇನಾಲ, ಸೋಮಪ್ಪ ನಾಯ್ಕ, ಆದಿತ್ಯ, ದೀಕ್ಷಿತ್ ನಾಯ್ಕ, ಪುಷ್ಪಾವತಿ, ಲಕ್ಷ್ಮೀಶ ಪಾಟಾಳಿ, ಜಗನ್ನಾಥ ನಾಯ್ಕ, ಹರಿಪ್ರಸಾದ್ ಅಡ್ಕಾರು, ಅಶೋಕ ಮೂಲೆ ಬಡ್ಡಡ್ಕ, ಜೂಲಿಯನಾ ಕ್ರಾಸ್ತಾ, ಶಾಫಿ ಕುಟ್ಟಮೊಟ್ಟೆ, ಶಿವಕುಮಾರ ಕೌಡಿಚ್ಚಾರು, ಇಬ್ರಾಹಿಂ ಉಪಸ್ಥಿತರಿದ್ದರು. ಎಸ್.ಟಿ. ಘಟಕದ ಪದಾಕಾರಿಗಳನ್ನು ನೇಮಕ ಮಾಡಲಾಯಿತು. ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿದರು. ರವಿಚಂದ್ರ ಪದವು ವಂದಿಸಿದರು.
ಕಥುವಾ ಅತ್ಯಾಚಾರ ಪ್ರಕರಣ: ಸುಳ್ಯ ಕಾಂಗ್ರೆಸ್ ಆಕ್ರೋಶ
ಕಾಶ್ಮಿರದ ಕಥುವಾ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರ ಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಟೀಕಿಸಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಮಹಿಳೆ ಮತ್ತು ಮಕ್ಕಳ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಗುರುವಾರ ನಡೆದ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Tulu Film: ʼಮಿಡಲ್ ಕ್ಲಾಸ್ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು
TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.