ಸುಳ್ಯದಲ್ಲಿ ಮುಗಿಯದ ಚುನಾವಣಾ ಕಾವು
ಸದ್ಯದಲ್ಲೇ ಎದುರುಗೊಳ್ಳಲಿದೆ ನಗರ ಪಂಚಾಯತ್ ಚುನಾವಣೆ!
Team Udayavani, Apr 21, 2019, 6:00 AM IST
ಸುಳ್ಯ: ಲೋಕಸಭಾ ಚುನಾವಣೆ ಮತದಾನ ಮುಕ್ತಾಯ ಕಂಡಿದೆ. ಹಾಗಂತ ರಾಜಕೀಯ ಪಕ್ಷಗಳ ಪ್ರಚಾರ, ಮತದಾರರ ಮತದಾನಕ್ಕೆ ವಿರಾಮ ಸಿಕ್ಕಿತ್ತು ಎಂದಲ್ಲ. ಸುಳ್ಯ ನ.ಪಂ. ಚುನಾವಣೆ ಸದ್ಯದಲ್ಲೇ ಎದುರುಗೊಳ್ಳುತ್ತಿರುವುದು ಇದಕ್ಕೆ ಕಾರಣ. ಮಾರ್ಚ್ ತಿಂಗಳಲ್ಲಿ ಆಡಳಿತ ಅವಧಿ ಪೂರ್ಣಗೊಂಡು ಆಡಳಿತಾಧಿಕಾರಿ ನೇಮ ಕಕೊಂಡಿರುವ ನ.ಪಂ.ನ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದೆ. ವಾರ್ಡ್‌ವಾರು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ ಗೊಂಡು ಕೆಲವು ತಿಂಗಳು ಕಳೆದಿದ್ದು, ಚುನಾವಣೆ ದಿನಾಂಕ ಮಾತ್ರ ಘೋಷಣೆಗೆ ಬಾಕಿ ಉಳಿದಿದೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ನ.ಪಂ. ಚುನಾವಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.
ಆರು ವರ್ಷಗಳ ಅವಧಿ!
ಹಿಂದಿನ ಬಾರಿ 2013 ಮಾರ್ಚ್ 7ರಂದು ಚುನಾವಣೆ ನಡೆದು, ಮಾ. 11ರಂದು ಫಲಿತಾಂಶ ಪ್ರಕಟಗೊಂಡಿತ್ತು. ಅಂದರೆ 2019ರ ಮಾರ್ಚ್‌ಗೆ ಆರು ವರ್ಷ ತುಂಬಿದೆ. ನಿಯಮ ಪ್ರಕಾರ ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕು. 2013ರ ಚುನಾವಣೆ ಮತ ಎಣಿಕೆ ಆಗಿ, ಅಧ್ಯಕ್ಷ-ಉಪಾಧ್ಯಕ್ಷತೆಗೆ ಮೀಸಲಾತಿ ನಿಗದಿ ವಿಳಂಬವಾದ ಕಾರಣ, ಒಂದು ವರ್ಷ ನ.ಪಂ.ನಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ. 2014 ಮಾ. 11ರಂದು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಅಲ್ಲಿಂದ ಚುನಾಯಿತ ಸದಸ್ಯರ ಅವಧಿ ಆರಂಭ ಗೊಳ್ಳುವ ಕಾರಣ, 2019 ಮಾ. 11ಕ್ಕೆ ಐದು ವರ್ಷ ತುಂಬುತ್ತದೆ. ಅದೇ ಲೆಕ್ಕದಲ್ಲಿ ಚುನಾವಣೆ ನಡೆಯಲಿದೆ.
ವಾರ್ಡ್ ಸಂಖ್ಯೆ ಹೆಚ್ಚಳ
ಈ ಬಾರಿ ವಾರ್ಡ್‌ಗಳ ಪುನರ್ ವಿಂಗ ಡನೆ ನಡೆದು, 2 ವಾರ್ಡ್‌ಗಳನ್ನು ಹೊಸದಾಗಿ ರಚಿಸಲಾಗಿದೆ.
ಈಗಿರುವ 18 ವಾರ್ಡ್‌ಗಳ ಜತೆಗೆ ಹೊಸದಾಗಿ ಎರಡು ಸೇರ್ಪಡೆಗೊಂಡು, 20ಕ್ಕೆ ಏರಿಕೆ ಕಂಡಿದೆ. ಈ ಹಿಂದಿನ ಆಡಳಿತದ 18 ಸ್ಥಾನಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 5 ಹಾಗೂ ಎಸ್‌ಡಿಪಿಐ 1 ಸ್ಥಾನ ಹೊಂದಿ, ಬಿಜೆಪಿ ಆಡಳಿತ ಪಡೆದಿತ್ತು.
ಪುರಸಭೆ ಬೇಡಿಕೆ ಈಡೇರಿಲ್ಲ
ನಗರ ಪಂಚಾಯತ್ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಅರ್ಹತೆ ಹೊಂದಿದ್ದರೂ ಅನುಷ್ಠಾನವಾಗಿಲ್ಲ. ಪುರಸಭೆ ಆಗಲು ಬೇಕಾದ ಎಲ್ಲ ಮಾನದಂಡಗಳನ್ನು ಹೊಂದಿದ್ದರೂ, ಸರಕಾರದ ಮಟ್ಟದಲ್ಲಿ ಒತ್ತಡ ಹೇರುವ ಕಾರ್ಯ ಪ್ರಬಲವಾಗಿ ಆಗದ ಕಾರಣ, ಈ ಬಾರಿಯು ನ.ಪಂ. ಆಡಳಿತಕ್ಕೆ ಚುನಾವಣೆ ನಡೆಯಲಿದೆ.
13,880 ಮತದಾರರು:
20 ವಾರ್ಡ್‌ಗಳಲ್ಲಿ ಒಟ್ಟು 13,880 ಮತದಾರರು ಇದ್ದು, 6,854 ಪುರುಷ ಮತ್ತು 7,026 ಮಹಿಳಾ ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಹೊಂದಿದ್ದಾರೆ. ಒಟ್ಟು ಮತಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ವಾರ್ಡ್ ಸಂಖ್ಯೆ 14ರಲ್ಲಿ (ಸ್ನೇಹ ಹಿ.ಪ್ರಾ. ಶಾಲೆ ಕಲ್ಲುಮುಟ್ಲು ಮತಗಟ್ಟೆ) ಗರಿಷ್ಠ 1,065 ಮತದಾರರಿದ್ದಾರೆ. ವಾರ್ಡ್ ಸಂಖ್ಯೆ 9ರಲ್ಲಿ (ಎನ್‌ಎಂಸಿ ಕಾಲೇಜು ಮತಗಟ್ಟೆ) ಕನಿಷ್ಠ 341 ಮತದಾರರು ಇದ್ದಾರೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.