ಸುಳ್ಯ: ಉಚಿತ ಅಕ್ಕಿಗೆ ಖರ್ಚು ಖಚಿತ 


Team Udayavani, Oct 3, 2018, 10:12 AM IST

3-october-2.gif

ಸುಳ್ಯ : ಇಲ್ಲಿ ತಿಪ್ಪರಲಾಗ ಹಾಕಿದರೂ ಇಂರ್ಟನೆಟ್‌ಗೆ ನೆಟ್‌ವರ್ಕ್‌ ಸಿಗಲ್ಲ. ಇದರಿಂದ 13 ಪಡಿತರ ಅಂಗಡಿ ವ್ಯಾಪ್ತಿ ಫಲಾನುಭವಿಗಳಿಗೆ ಪಡಿತರ ಸಾಮಗ್ರಿ ಪಡೆಯಬೇಕಿದ್ದರೆ ಪಂಚಾಯತ್‌ ತೆರಳಿ ಕೂಪನ್‌ ತರಲೇಬೇಕು!

ಇದು ಕೇವಲ ಸುತ್ತಾಟದ ಪ್ರಶ್ನೆಯಲ್ಲ. ಬಯೋಮೆಟ್ರಿಕ್‌ ಸಿಸ್ಟಮ್‌ಗೆ ಇಂರ್ಟನೆಟ್‌ ಇಲ್ಲದ ಕಾರಣ ಉಚಿತ ಅಕ್ಕಿ ಪಡೆಯಲು ಬಡ ಕುಟುಂಬ ವೆಚ್ಚ ಮಾಡಬೇಕಾದ ಮೊತ್ತವೇ ದುಬಾರಿ. ಕೂಲಿ ಕೆಲಸ ಬಿಟ್ಟು ಕೂಪನ್‌ ಪಡೆಯಲೆಂದು ಒಂದು ದಿನ, ಜತೆಗೆ ಸಾಮಗ್ರಿ ಪಡೆಯಲು ಇನ್ನೊಂದು ದಿನ ವ್ಯಯ ಮಾಡುವ ಅನಿವಾರ್ಯತೆ.

ಇದು ಸುಳ್ಯ ತಾಲೂಕು ಒಂದರ ಕಥೆಯಲ್ಲ. ಜಿಲ್ಲೆಯ ಎಲ್ಲ ತಾಲೂಕುಗಳ ಸಮಸ್ಯೆ. ಹಾಗಾಗಿ ಪಡಿತರ ಅಂಗಡಿಯಲ್ಲಿಯೇ ಕೂಪನ್‌ ನೀಡಬೇಕು ಅಥವಾ ನೆಟ್‌ವರ್ಕ್‌ ಸುಧಾರಿಸುವ ತನಕ ಈ ಹಿಂದಿನಂತೆ ಕೂಪನ್‌ ರಹಿತವಾಗಿ ಪಡಿತರ ಸಾಮಗ್ರಿ ಒದಗಿಸಬೇಕು ಎಂಬ ಫಲಾನುಭವಿಗಳ ಬೇಡಿಕೆಗೆ ಆಹಾರ ಸಚಿವರು ಸ್ಪಂದನೆ ನೀಡಬೇಕು.

ಪಾಯಿಂಟ್‌ ಆಫ್‌ ಸೇಲ್‌
ಪಡಿತರ ಸಾಮಗ್ರಿ ಪಡೆಯುವ ಕುಟುಂಬಗಳಿಗೆ ಸಮರ್ಪಕ ಸೌಲಭ್ಯ ಒದಗಿಸುವ ಸಲುವಾಗಿ ಹಿಂದಿನ ಸರಕಾರದ ಅವಧಿಯಲ್ಲಿ ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಬಳಸುವ ಪ್ರಕ್ರಿಯೆ ಆರಂಭಗೊಂಡಿತ್ತು. ಇದು ಇಂಟರ್‌ನೆಟ್‌, ಬಯೋಮೆಟ್ರಿಕ್‌ ಆಧಾರಿತ ಯಂತ್ರ. ಇಲ್ಲಿ ಫಲಾನುಭವಿ ಸಾಮಗ್ರಿ ಪಡೆಯುವ ಮೊದಲು ಬೆರಳಚ್ಚು ದಾಖಲಿಸಬೇಕು. ರೇಷನ್‌ ಕಾರ್ಡ್‌ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್‌ ಮೂಲಕ ಪ್ರಕಟಗೊಳ್ಳುತ್ತದೆ. ಅನಂತರ ಫಲಾನುಭವಿಗೆ ಸಾಮಗ್ರಿ ಪಡೆಯಲು ಅರ್ಹತೆ ಹೊಂದಿರುತ್ತಾನೆ. ಇದರಿಂದ ದುರ್ಬಳಕೆ ತಪ್ಪುತ್ತದೆ ಎನ್ನುವುದು ಸರಕಾರದ ಉದ್ದೇಶ.

ಬೆರಳಚ್ಚು ಅಥವಾ ಕೂಪನ್‌
ನೆಟ್‌ವರ್ಕ್‌ ಇಲ್ಲದೆ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲದಿರುವ ಕಡೆಗಳಲ್ಲಿ ಕೂಪನ್‌ ನೀಡಿ ಸಾಮಗ್ರಿ ಪಡೆಯಬಹುದಾಗಿದೆ. ಬೆರಳಚ್ಚು ಅಥವಾ ಕೂಪನ್‌ ಎರಡು ಇಲ್ಲದಿದ್ದರೆ ಪಡಿತರ ಸಿಗದು. ಆದರೆ ಈ ಕೂಪನ್‌ ಪಡಿತರ ಅಂಗಡಿಯಲ್ಲಿ ದೊರೆಯುವುದಿಲ್ಲ. ಅದನ್ನು ಪಡೆಯಲು ಗ್ರಾ.ಪಂ.ಗೆ ತೆರಳಬೇಕು. ಕೂಪನ್‌ ಸಿಗಬೇಕಾದರೆ ಅದಕ್ಕೆ ಇಂರ್ಟನೆಟ್‌ ಬೇಕು. ಹೀಗಾಗಿ ಗ್ರಾ.ಪಂ.ಗೆ ತೆರಳಿ ಅಲ್ಲಿಂದ ಪಡೆದುಕೊಳ್ಳುವುದು ಅನಿವಾರ್ಯವಾಯಿತು. ಈ ನಿಯಮವೇ ಫಲಾನುಭವಿಗೆ ಹೊರೆ ಆಗಿದೆ. ಪ್ರತಿ ತಿಂಗಳ ಒಂದು ದಿನ ಪಂಚಾಯತ್‌ಗೆ ತೆರಳಬೇಕು. ಅಲ್ಲಿ ಇಂಟರ್‌ನೆಟ್‌ ಕೈ ಕೊಟ್ಟರೆ ಮರುದಿನ ಬರಬೇಕು. ಕೆಲವೆಡೆ ಆರೇಳು ಕಿ.ಮೀ. ದೂರದಲ್ಲಿ ಗ್ರಾ.ಪಂ. ಕಚೇರಿ ಇದೆ. ವಾಹನ ಸಂಚಾರ ಇಲ್ಲದಿದ್ದರೆ ಬಾಡಿಗೆ ಮಾಡಿಕೊಂಡು ತೆರಳಬೇಕು. ಇಂತಹ ಸಂದರ್ಭದಲ್ಲಿ 100 ರೂ.ಗೆ ಸಿಗುವ ಪಡಿತರ ಸಾಮಗ್ರಿಯ ಕೂಪನ್‌ಗೆ 200 ರೂ. ಖರ್ಚು ಮಾಡಬೇಕಾದ ಸ್ಥಿತಿ ಇದೆ.

ಎಲ್ಲೆಲ್ಲಿ ಇಲ್ಲ?
ಸುಳ್ಯ ತಾಲೂಕಿನಲ್ಲಿ 59ರಲ್ಲಿ 16 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ. ಇವುಗಳಲ್ಲಿ ಕೋಲ್ಚಾರು, ದುಗಲಡ್ಕ-2 ಕೇಂದ್ರಗಳಲ್ಲಿ ನೆಟ್‌ವರ್ಕ್‌ ದೊರೆಯುತ್ತದೆ ಎಂದು ಬಿಎಸ್ಸೆನ್ನೆಲ್‌ ವರದಿ ನೀಡಿದೆ. ಉಳಿದೆಡೆ ರೇಂಜ್‌ ಸಿಗುವುದಿಲ್ಲ. ಇಲ್ಲಿ ಬಿಎಸ್ಸೆನ್ನೆಲ್‌ ಬದಲಾಗಿ ಬೇರೆ ನೆಟ್‌ವರ್ಕ್‌ ಕಲ್ಪಿಸುವುದು ಅಥವಾ ಆ ಪರಿಸರದಲ್ಲಿ ಹೊಸ ಟವರ್‌ ನಿರ್ಮಾಣ ಮಾಡಿದರೆ ಮಾತ್ರ ಪರಿಹಾರ ಸಾಧ್ಯ.

ಸಚಿವರೇ ಮನಸ್ಸು ಮಾಡಿ!
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರು ಅ. 3ರಂದು ಸುಳ್ಯ ಪ್ರವಾಸ ಕೈಗೊಂಡಿದ್ದಾರೆ. ಅವರ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಇದು. ಇಲ್ಲಿ ಕೂಪನ್‌ ಅನ್ನು ಪಡಿತರ ಅಂಗಡಿಯಲ್ಲೇ ನೀಡುವುದು ಅಥವಾ ಬೇರೆ ನೆಟ್‌ವರ್ಕ್‌ ಬಳಸಿ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸುವುದು ಅಥವಾ ಸಮಸ್ಯೆ ಬಗೆಹರಿಯುವ ತನಕ ಹಳೆ ಮಾದರಿ ಬಳಸಿ ಪಡಿತರ ಸೌಲಭ್ಯ ನೀಡುವುದಾಗಿದೆ. ಸಚಿವರು ಸ್ಪಂದಿಸುವ ಬಗ್ಗೆ ನಿರೀಕ್ಷೆ ಇದೆ. 

ಕಿರಣ್‌ ಪ್ರಸಾದ್‌ ಕುಂಡಡ್ಕ 

ಟಾಪ್ ನ್ಯೂಸ್

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-us

Dating Apps; ಯುಎಸ್ ಮಾಡೆಲ್ ಎಂದು 700ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದವ ಕೊನೆಗೂ ಬಲೆಗೆ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Vimana 2

Air India Express; ಮಂಗಳೂರು-ಪುಣೆ ನೇರ ವಿಮಾನ ಆರಂಭ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.