ಮೊಗರ್ಪಣೆ ಸೇತುವೆ: ಮೇಲ್ಪದರ ಮತ್ತಷ್ಟು ಶಿಥಿಲ!

Team Udayavani, Nov 17, 2018, 11:37 AM IST

17-november-6.gif

ಸುಳ್ಯ : ಅಂತಾರಾಜ್ಯ ರಸ್ತೆಯ ಕಾಂತಮಂಗಲ ಸೇತುವೆ ದುರಸ್ತಿ ಆಗಿ ಪ್ರಯಾಣಿಕರು ನಿಟ್ಟುಸಿರುವ ಬಿಡುವ ಹೊತ್ತಲ್ಲೇ ಮಾಣಿ-ಮೈಸೂರು ಹೆದ್ದಾರಿಯ ಮೊಗರ್ಪಣೆ ಸೇತುವೆ ಮೇಲ್ಪದರ ಮತ್ತಷ್ಟು ಶಿಥಿಲಗೊಂಡು, ಆತಂಕಕ್ಕೆ ಕಾರಣವಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಸೇತುವೆಯ ನಿರ್ವಹಣೆ ಹೊಣೆ ಹೊತ್ತಿರುವ ಕೆಆರ್‌ಡಿಸಿಎಲ್‌ಗೆ ಸಮಸ್ಯೆ ಗೊತ್ತಿದ್ದರೂ ಸ್ಪಂದಿಸಲು ಮೀನ- ಮೇಷ ಎಣಿಸುತ್ತಿದೆ. ಪ್ರತಿ ತಾ.ಪಂ. ಸಭೆಗೆ ಇದೇ ಸೇತುವೆ ದಾಟಿ ಬರುವ ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿ ಬಗ್ಗೆ ಆಸಕ್ತಿಯೇ ವಹಿಸದಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.

ಪ್ರಮುಖ ಸೇತುವೆ
ಮಾಣಿ-ಮೈಸೂರು ಹೆದ್ದಾರಿಯಲ್ಲಿ ಈ ಸೇತುವೆ ಇದ್ದು, ಸುಳ್ಯ ನ.ಪಂ. ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿದೆ. ಪಯಸ್ವಿನಿ ನದಿಗೆ ಜೋಡಣೆಗೊಳ್ಳುವ ಕಂದಡ್ಕ ಹೊಳೆಗೆ ಈ ಸೇತುವೆ ನಿರ್ಮಿಸಲಾಗಿದೆ. ಹೊಸ ಸೇತುವೆ ಕಾಮಗಾರಿ ಸಂದರ್ಭ ಗುಣಮಟ್ಟಕ್ಕೆ ಆಕ್ಷೇಪ ಕೇಳಿ ಬಂದಿತ್ತು. ಅನಂತರ ಹೇಗೋ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿತ್ತು.

ಕೆಲ ಸಮಯಗಳ ಹಿಂದೆ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಹಸ್ತಾಂತರ ಆಗುವ ಹಂತದಲ್ಲಿದೆ. ಹೊಸ ಸೇತುವೆ ನಿರ್ಮಾಣದ ಆರಂಭದಲ್ಲಿ ಕಾಮಗಾರಿ ಬಗ್ಗೆ ಮೂಡಿದ ಅನುಮಾನ ಈಗಿನ ದುಃಸ್ಥಿತಿ ದೃಢೀಕರಿಸಿದೆ. ಸೇತುವೆ ಮೇಲ್ಪದರ ಕಳಚಿ, ತಳ ಭಾಗದತ್ತ ಮುಖ ಮಾಡುವ ಮೊದಲು ದುರಸ್ತಿಗೆ ಅವಕಾಶ ಇದ್ದರೂ ಕಾಮಗಾರಿ ಅನುಷ್ಠಾನದ ಬಗ್ಗೆ ಅನುಮಾನ ಮೂಡಿದೆ.

ಎರಡೇ ದಿನಗಳಲ್ಲಿ ಕಿತ್ತುಹೋದ ತೇಪೆ!
ಸೇತುವೆ ಅವ್ಯವಸ್ಥೆ ಬಗ್ಗೆ ಜು. 2ರಂದು ‘ಉದಯವಾಣಿ ಸುದಿನ’ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆ ಜು. 3ರಂದು ಮೇಲ್ಪದರ ಶಿಥಿಲ ಸ್ಥಳಕ್ಕೆ ಜಲ್ಲಿಮಿಶ್ರಿತ ಪರಿಕರ ತುಂಬಿಸಿ ತೇಪೆ ಕಾಮಗಾರಿ ಮಾಡಿತ್ತು.  ಅದು ಒಂದೇ ವಾರದಲ್ಲಿ ಕಿತ್ತು ಹೋಗಿ, ಅದರ ಗಟ್ಟಿತನ ಬಹಿರಂಗಗೊಂಡಿತ್ತು. ಅದಾದ ಬಳಿಕ ತೇಪೆ ಹಾಕುವ ಪ್ರಯತ್ನ ನಡೆಯಿತಾದರೂ ಅದು ನಿಲ್ಲಲಿಲ್ಲ. ವಿಪರೀತ ಮಳೆ ಕಾರಣ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಇಲಾಖೆ ದುರಸ್ತಿಯನ್ನು ಬೇಸಗೆ ಕಾಲಕ್ಕೆ ಮುಂದೂಡಿತ್ತು. ಈಗ ಮಳೆ ನಿಂತು ತಿಂಗಳೇ ಕಳೆದಿದೆ. ಆದರೆ ಕೆಆರ್‌ಡಿಸಿಎಲ್‌ಗೆ ಮಳೆ ನಿಂತಿಲ್ಲ. ಬೇಸಗೆಯ ದರ್ಶನವಾಗಿಲ್ಲ. ಪರಿಣಾಮ ಕಾಮಗಾರಿ ಆರಂಭಗೊಳ್ಳದೇ ಶಿಥಿಲವೇ ಹೆಚ್ಚಾಗುತ್ತಿದೆ.

ಸರಳು ಮೇಲೆದ್ದಿವೆ..!
ಸೇತುವೆ ಮೇಲ್ಭಾಗದಲ್ಲಿ 6 ಕಡೆಗಳಲ್ಲಿ ಮೇಲ್ಪದರ ಕಿತ್ತು ಹೋಗಿ, ಕಬ್ಬಿಣದ ಸರಳುಗಳು ಕಾಣುತ್ತಿವೆ. ದಿನಂಪ್ರತಿ ನೂರಾರು ವಾಹನಗಳು ಸಂಚರಿಸುವ ಕಾರಣ ಮೇಲ್ಪದರಕ್ಕೆ ಮತ್ತಷ್ಟು ಹಾನಿ ಉಂಟಾಗಿ, ಸಮಸ್ಯೆ ಬಿಗಡಾಯಿಸಿದೆ. ಸೇತುವೆ ಒಳ ಭಾಗದಲ್ಲಿರುವ ಎರಡು ಬದಿಗಳಲ್ಲಿನ ಫುಟ್‌ಪಾತ್‌ನಲ್ಲಿ ಸ್ಲಾಬ್‌ಗಳು ಮುರಿದು ಬಿದ್ದು ವರ್ಷಗಳೇ ಕಳೆದಿವೆ. ನಿರ್ವಹಣೆ ಕೊರತೆಯ ಕಾರಣದಿಂದ ಕೋಟ್ಯಂತರ ರೂ. ವೆಚ್ಚದ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ.

ದುರಸ್ತಿಗೆ ಸೂಚನೆ
ಮೊಗರ್ಪಣೆ ಸೇತುವೆ ಮೇಲ್ಪದರ ಹಾನಿಗೊಂಡಿರುವ ಬಗ್ಗೆ ಗಮನಕ್ಕೆ ಬಂದಿದೆ. ಅದರ ದುರಸ್ತಿಗೆ ತತ್‌ಕ್ಷಣ ಎಂಜಿನಿಯರ್‌ ಗಳಿಗೆ ಸೂಚಿಸಲಾಗುವುದು.
-ಗಣೇಶ್‌, ಚೀಫ್‌ ಎಂಜಿನಿಯರ್‌,
ರಾ.ಹೆ. ಪ್ರಾಧಿಕಾರ, ಬೆಂಗಳೂರು

ಸಂಚಾರ ಕಷ್ಟ
ಶಿಥಿಲಗೊಂಡು ಹಲವು ತಿಂಗಳು ಕಳೆದರೂ ದುರಸ್ತಿ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಕೊಡುವ ಅಗತ್ಯವಿಲ್ಲ. ಪ್ರತಿ ನಿತ್ಯ ಇದೇ ಸೇತುವೆ ದಾಟಿ ಅವೆರಲ್ಲರೂ ಸಂಚರಿಸುತ್ತಾರೆ. ಆದರೂ, ಸ್ಪಂದಿಸಿಲ್ಲ. ಮೇಲ್ಪದರ ಬಿರುಕು ಬಿಟ್ಟಿರುವ ಕಾರಣ ದ್ವಿಚಕ್ರ ವಾಹನ ಸಂಚಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
– ನಾಗೇಶ ಸುಳ್ಯ ವಾಹನ ಸವಾರ

ಟಾಪ್ ನ್ಯೂಸ್

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

E-Khata: ಖಾತೆ ಇರದ ಆಸ್ತಿಗಳಿಗೆ ಇನ್ನು ಬಿಬಿಎಂಪಿ ಮಾದರಿ ಇ-ಖಾತಾ

1-horoscope

Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಗೆದ್ದ ವಿಜ್ಞಾನಿ!

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.