ನಗರಕ್ಕೆ  ನೀರೊದಗಿಸಲು ಮರಳಿನ ಕಟ್ಟ

Team Udayavani, Feb 25, 2019, 5:17 AM IST

25-february-3.jpg

ಸುಳ್ಯ: ಪಯಸ್ವಿನಿಯಲ್ಲಿ ನೀರಿನ ಹರಿವು ಇಳಿಮುಖಗೊಂಡ ಕಾರಣ ನಗರಕ್ಕೆ ನೀರೊದಗಿಸಲು ಕಲ್ಲುಮುಟ್ಲು ಪಂಪ್‌ ಹೌಸ್‌ ಬಳಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಮರಳು ಕಟ್ಟ ನಿರ್ಮಿಸಲಾಗಿದೆ.

ಕಳೆದ ಕೆಲ ದಿನಗಳಲ್ಲಿ ಬಿಸಿಲ ಬೇಗೆಗೆ ಬಸವಳಿದಿರುವ ತಾಲೂಕಿನಲ್ಲಿ ಬಹುತೇಕ ನೀರಿನ ಮೂಲಗಳು ಬತ್ತಿವೆ. ಹರಿವು ಇಳಿಕೆ ಕಂಡಿರುವ ಕಾರಣ ಮರಳು ಚೀಲ ಬಳಸಿ ಕಟ್ಟ ನಿರ್ಮಿಸಿ ನೀರು ಸಂಗ್ರಹಿಸಲಾಗಿದೆ.

4 ಲಕ್ಷ ರೂ. ವೆಚ್ಚ
ನಾಲ್ಕು ಲಕ್ಷ ರೂ. ವೆಚ್ಚದ ಕಾಮಗಾರಿ ಇದಾಗಿದೆ. ನದಿ ಭಾಗದಲ್ಲಿ 50 ಕೆ.ಜಿ. ಪ್ಲಾಸ್ಟಿಕ್‌ ಚೀಲದಲ್ಲಿ ಮರಳು ತುಂಬಿಸಲಾಗುತ್ತದೆ. ಇಂತಹ ಮೂರು ಸಾವಿರಕ್ಕೂ ಮಿಕ್ಕಿದ ಚೀಲ ಬಳಸಲಾಗಿದೆ. ನೀರು ಸಂಗ್ರಹಕ್ಕೆ ಮೊದಲು ಪಂಪ್‌ ಹೌಸ್‌ ಬಳಿ ಬಾವಿ ಹೂಳೆತ್ತಿ ಸ್ವಚ್ಛಗೊಳಿಸಲಾಗಿದೆ. ಕೊಡಗಿನ ಪ್ರಾಕೃತಿಕ ಅವಘಡದ ಪರಿಣಾಮ ಹೂಳಿನ ಪ್ರಮಾಣ ದುಪ್ಪಟ್ಟಾಗಿತ್ತು.

ನಗರದ ನೀರಿನ ಬೇಡಿಕೆ
ಕಲ್ಲುಮುಟ್ಲು ಪಂಪ್‌ಹೌಸ್‌ಗೆ ಬೇಸಗೆಯಲ್ಲಿ ತಾತ್ಕಾಲಿಕ ಕಟ್ಟದ ನೀರೇ ಆಧಾರ. 365 ದಿನ 24 ಗಂಟೆ ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. 50 ಎಚ್‌ಪಿಯ 1 ಮತ್ತು 45 ಎಚ್‌ಪಿಯ 2 ಪಂಪ್‌ ಗಳಿದ್ದು, ನೀರನ್ನು ಸಂಗ್ರಹಿಸಿ ಪಂಪ್‌ ಹೌಸ್‌ ಬಾವಿಗೆ, ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ.

ಕಲ್ಲುಮಟ್ಲು ನೀರು ಶುದ್ಧೀಕರಣ ಘಟಕದ ಬಳಿ ಇರುವ ಒಟ್ಟು 1.50 ಲಕ್ಷ ಗ್ಯಾಲನ್‌ ಸಾಮರ್ಥಯದ 2 ಟ್ಯಾಂಕ್‌ಗಳ ಮೂಲಕ ನಗರಕ್ಕೆ ನೀರು ಹರಿದರೆ, ಇನ್ನೊಂದು ಪೈಪ್‌ ಮೂಲಕ ಕುರುಂಜಿಗುಡ್ಡೆಯ ಟ್ಯಾಂಕಿಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ನಗರದ ಮನೆ ಹಾಗೂ ಗೃಹೇತರ ಕಟ್ಟಡಗಳಿಗೆ ನಳ್ಳಿ ಸಂಪರ್ಕ ಒದಗಿಸಲಾಗಿದೆ. ಈಗ 5 ಸಾವಿರಕ್ಕೂ ಮಿಕ್ಕಿ ನಳ್ಳಿ ಸಂಪರ್ಕ ಇದ್ದು, ನದಿ ನೀರಿನ ಜತೆಗೆ 41 ಕೊಳವೆಬಾವಿ ಬಳಸಲಾಗುತ್ತಿದೆ.

ಶುಚಿತ್ವಕ್ಕೆ ಫಲಕ ಅಳವಡಿಸಲಿ
ಮರಳಿನ ಕಟ್ಟದ ನೀರಿನ ಸ್ವಚ್ಛತೆಗೆ ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಎರಡು ವರ್ಷದ ಹಿಂದೆ ಸಂಗ್ರಹಗೊಂಡಿರುವ ನೀರಿನಲ್ಲಿ ಈಜಾಟಕ್ಕೆಂದು ಇಳಿದ ಘಟನೆಗಳು ನಡೆದಿತ್ತು. ಮೀನು ಬೇಟೆಗೆ ವಿಷ ಪದಾರ್ಥ ಬಳಕೆ ಮಾಡಿದ ಉದಾಹರಣೆಗಳಿವೆ.

ಇದರಿಂದ ಮಲೀನ ನೀರನ್ನು ಕುಡಿಯಲು ಬಳಸಬೇಕಾದ ಸ್ಥಿತಿ ಉಂಟಾಗಿತ್ತು. ಹೀಗಾಗಿ ಮರಳಿನ ಕಟ್ಟದ ಮೇಲ್ಭಾಗದಲ್ಲಿ ಈಜಾಟ, ಮೀನು ಬೇಟೆ ನಿಷೇಧ, ನದಿಗೆ ತ್ಯಾಜ್ಯ ಎಸೆಯದಂತೆ ನ.ಪಂ. ವತಿಯಿಂದ ನದಿ ತಟದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕಿದೆ. 

ನೀರಿನ ಕೊರತೆ ಸಾಧ್ಯತೆ?
2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಅದೀಗ 25 ಸಾವಿರ ದಾಟಿರಬಹುದು. ದಿನವೊಂದಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್‌.ಡಿ. ವ್ಯಕ್ತಿಯೊಬ್ಬರಿಗೆ ನೀಡುತ್ತಿರುವ ನೀರು 90 ಲೀಟರ್‌. ಅಂದರೆ, 45 ಲೀ. ನೀರು ಕೊರತೆಯಿದೆ. ಈ ಬಾರಿ ನದಿ ಮೂಲಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಪಯಸ್ವಿನಿ ನದಿಯಲ್ಲಿ ಪ್ರಾಕೃತಿಕ ವಿಕೋಪ ಉಂಟಾದ ಬಳಿಕ ಬಹುತೇಕ ಆಳಗಳು ಕಣ್ಮರೆ ಆಗಿವೆ. ಮರಳು ಮಿಶ್ರಿತ ಕಪ್ಪು ಮಣ್ಣು ತುಂಬಿದೆ. ಅಲ್ಲಲ್ಲಿ ಮರಳು ಮಿಶ್ರಿತ ಮಣ್ಣಿನ ಹೂಳಿನ ದಿಬ್ಬಗಳಿವೆ. ಕೆಳಭಾಗದ ಹರಿವು ಮೇಲ್ಭಾಗಕ್ಕೆ ಬಂದ ಕಾರಣ, ನದಿ ನೀರಿನ ಹರಿವು ಕೂಡ ಇಳಿಮುಖ ಕಂಡಿದೆ. ಹೀಗಾಗಿ ಎಪ್ರಿಲ್‌ನಲ್ಲಿ ಮಳೆ ಬಾರದಿದ್ದರೆ ನಗರಕ್ಕೆ ನೀರಿನ ಬರ ಬರುವ ಸಾಧ್ಯತೆ ಕೂಡ ಹೆಚ್ಚಿದೆ.

ವೆಂಟೆಡ್‌ ಡ್ಯಾಂ ಮರೀಚಿಕೆ
ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರಕಾರಕ್ಕೆ ಸಲ್ಲಿಸಿದ 65.5 ಕೋ. ರೂ. ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಪಂಪ್‌ಹೌಸ್‌ ಸನಿಹದ ನಾಗಪಟ್ಟಣದಲ್ಲಿ ವೆಂಟೆಡ್‌ ಡ್ಯಾಂ, ಜಾಕ್‌ವೆಲ್‌ ಪಂಪ್‌ ಹೌಸ್‌, ವಾಟರ್‌ ಟ್ರೀಟ್‌ ಪ್ಲಾಂಟ್‌ ರಚನೆ ಸಹಿತ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಪ್ರಸ್ತಾವಿಸಲಾಗಿತ್ತು. ಎಂಟು ವರ್ಷ ಕಳೆದರೂ ಅದು ಅನುಷ್ಠಾನಗೊಂಡಿಲ್ಲ.

ಎತ್ತರ ಹೆಚ್ಚಿಸಲಾಗುವುದು
ತಾತ್ಕಾಲಿಕ ಮರಳು ಕಟ್ಟ ನಿರ್ಮಿಸಲಾಗಿದೆ. ಇದರ ಎತ್ತರವನ್ನು ಇನ್ನೂ ಹೆಚ್ಚಿಸಲಾಗುವುದು. ನೀರು ಶುದ್ಧೀಕರಣಗೊಂಡ ಬಳಿಕ ಅದನ್ನು ಪೂರೈಸಲಾಗುತ್ತಿದೆ.
– ಮತ್ತಡಿ ಮನೋ
 ಮುಖ್ಯಾಧಿಕಾರಿ, ನ.ಪಂ. ಸುಳ್ಯ 

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

1 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾದನೆ ಗುರಿ: ಕೇಂದ್ರ ಜವುಳಿ ಸಚಿವ ಗಿರಿರಾಜ್‌ ಸಿಂಗ್‌

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

Udupi: ಗೀತಾರ್ಥ ಚಿಂತನೆ-41: ಭಗವಂತನ ಜತೆ ಜೀವಿಗಳ ನಿತ್ಯಸಂಬಂಧ

1-wewewqeqwewqe

Edible oil; ದಾಸ್ತಾನಿದ್ದರೂ ಖಾದ್ಯ ತೈಲ ಬೆಲೆ ಏರಿಸಿದ್ದೇಕೆ: ಸರಕಾರ ಪ್ರಶ್ನೆ

Madikeri ಭಾಗದ ಅಪರಾಧ ಸುದ್ದಿಗಳು

Madikeri ಭಾಗದ ಅಪರಾಧ ಸುದ್ದಿಗಳು

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Congress: ನನ್ನನ್ನು ಸಿಲುಕಿಸಲು ಹಳೇ ಪ್ರಕರಣಗಳಿಗೆ ಜೀವ: ಕುಮಾರಸ್ವಾಮಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.