ಹೂವಿನ ರಾಶಿಯಲ್ಲಿ ಕಂಗೊಳಿಸಿದ ಪೆರುವಾಜೆ ಜಲದುರ್ಗಾ ದೇವಾಲಯ


Team Udayavani, Jan 19, 2019, 5:00 AM IST

19-january-1.jpg

ಸುಳ್ಯ : ಜಾತ್ರಾ ಸಂಭ್ರಮದಲ್ಲಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನವಿಡಿ ಹೂವಿನ ರಾಶಿ ಹೊದ್ದು ಭಕ್ತ ಸಮೂಹದ ಗಮನ ಸೆಳೆಯುತ್ತಿದೆ! ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲ ಭಾಗಗಳೂ ಬಣ್ಣ-ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸುತ್ತಿವೆ. ಅಬ್ಟಾ..ಅಬ್ಟಾ.. ಅನ್ನುವಷ್ಟು ಹೂವಿನ ರಾಶಿಯೇ ತುಂಬಿದೆ. ಕ್ಷೇತ್ರದ ಭಕ್ತರೊಬ್ಬರು ಹಲವು ವರ್ಷದಿಂದ ಸೇವಾ ರೂಪದಲ್ಲಿ ಈ ಹೂವಿನ ಅಲಂಕಾರ ಅರ್ಪಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದರ ಪ್ರಮಾಣ ಹೆಚ್ಚಾಗುತ್ತಿರುವುದಿಂದ ಇಡಿ ದೇವಾಲಯದಲ್ಲಿ ಹೂವುಗಳ ತೋಟವೇ ಮೈದಳೆದಂತಿದೆ.

ಭಕ್ತನ ಭಕ್ತಿಯ ಸೇವೆ
ಪೆರುವಾಜೆ ಶ್ರೀ ಜಲದುರ್ಗಾ ದೇವಿಯ ಭಕ್ತ, ಪೆರುವಾಜೆ ಗ್ರಾಮದ ನಿವಾಸಿ, ಮಂಗಳೂರಿನ ಐರಿಷ್‌ ಫ್ಲವರ್‌ ಸ್ಟಾಲ್‌ ಮಾಲಕ ಉಮೇಶ್‌ ಕೊಟ್ಟೆಕಾೖ ಮತ್ತು ಅವರ ಮನೆ ಮಂದಿ ಪ್ರತಿ ವರ್ಷ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸುತ್ತಾರೆ. ಹಲವು ವರ್ಷಗಳಿಂದ ಸೇವೆ ಮಾಡುವ ಉಮೇಶ್‌ ಮತ್ತು ಅವರ ಕುಟುಂಬ ಶ್ರೀ ಕ್ಷೇತ್ರದ ಪರಮ ಭಕ್ತರು.

ಉಮೇಶ್‌ ಅವರು ಹೂವಿನ ಮಾರುಕಟ್ಟೆಯಲ್ಲಿ ಕೆಲಸ ಆರಂಭಿಸಿ, ಬಳಿಕ ಮಂಗಳೂರು ಮತ್ತು ಉಡುಪಿಯಲ್ಲಿ ಐರಿಷ್‌ ಫ್ಲವರ್‌ ಸ್ಟಾಲ್‌ ಸ್ವಂತ ಮಾರಾಟ ಕೇಂದ್ರ ಸ್ಥಾಪಿಸಿದ್ದರು. 100ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ವ್ಯವಹಾರದಲ್ಲಿ ಯಶಸ್ಸು ಗಳಿಸಿರುವ ಇವರು, ಇದಕ್ಕೆ ಜಲದುರ್ಗಾದೇವಿಯ ಕೃಪೆಯೇ ಕಾರಣ ಎಂದು ಭಕ್ತನ ನೆಲೆಯಲ್ಲಿ ದೇವಿಗೆ ಹೂವಿನ ಅಲಂಕಾರ ಮಾಡುತ್ತಾರೆ.

8 ಲಕ್ಷ ರೂ. ಮೌಲ್ಯದ ಹೂವು ಬಳಕೆ
2006ರಿಂದ ಈ ಸೇವೆ ಆರಂಭಿಸಿದ್ದು, 2016ರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕೂಡ ದೇವಾಲಯವನ್ನು ಹೂವಿನಿಂದ ಶೃಂಗರಿಸಿದ್ದರು. ಪ್ರತಿ ವರ್ಷವು ಹೆಚ್ಚು-ಹೆಚ್ಚು ಹೂವು ಅರ್ಪಿಸುತ್ತಾರೆ. ಈ ಬಾರಿಯ ಜಾತ್ರೆಗೆ ಮಾರುಕಟ್ಟೆ ಮೌಲ್ಯದ ಪ್ರಕಾರ 7ರಿಂದ 8 ಲಕ್ಷ ರೂ.ಮೌಲ್ಯದ ಹೂವು ಬಳಸಲಾಗಿದೆ.

ಸ್ಟಾಲ್‌ ಮಾಲಕರಾದ ಕಾರಣ, ರಖಂ ದರದಲ್ಲಿ ಇವರಿಗೆ ಹೂವು ಸಿಕ್ಕಿದೆ. ಸೇವಂತಿಗೆ, ಚೆಂಡು ಹೂವು – ಹೀಗೆ ಹಲವು ವಿಧದ ಹೂವುಗಳಿವೆ. ಇವರು ಬರಿ ಹೂವು ಕೊಟ್ಟು ಸುಮ್ಮನಾಗುವುದಿಲ್ಲ. ಬದಲಿಗೆ ತಮ್ಮ ಸ್ಟಾಲ್‌ನ ಕಾರ್ಮಿಕರನ್ನು ಕಳುಹಿಸಿ ಅಲಂಕಾರದ ಕೆಲಸ ನಿರ್ವಹಿಸುತ್ತಾರೆ. ಹೂವಿನಿಂದ ಹಿಡಿದು, ಅದರ ಜೋಡಣೆಗೆ ತಗಲುವ ಎಲ್ಲ ಖರ್ಚುಗಳನ್ನು ತಾವೇ ಭರಿಸುತ್ತಾರೆ.

ಹೂವುಗಳ ರಾಶಿಯಿಂದ ಸೇವೆ ಬೆಳಕಿಗೆ
ಪ್ರಚಾರ ಬಯಸದ ಉಮೇಶ್‌ ಕೊಟ್ಟೆಕಾೖ ಅವರ ಸೇವೆ ಹೂವಿನ ರಾಶಿಗಳಿಂದ ಗಮನ ಸೆಳೆದಿದೆ. ಇಷ್ಟೊಂದು ಹೂವು ಎಲ್ಲಿಂದ ಎಂಬ ಭಕ್ತರ ಕಣ್ಣರಳಿಸುವ ನೋಟಕ್ಕೆ ಉಮೇಶ್‌ ಕೊಟ್ಟೆಕಾೖ ಅವರ ಸೇವೆ ಬೆಳಕಿಗೆ ಬಂದಿದೆ. ‘ನಾನು ಇಲ್ಲಿನ ಭಕ್ತ. ಪ್ರತಿ ವರ್ಷ ಭಕ್ತಿಯಿಂದ ಹೂವು ಅರ್ಪಿಸುತ್ತೇನೆ. ಜಾತ್ರೆಯ ದಿನ ಇಲ್ಲೇ ಇರುತ್ತೇನೆ’ ಎನ್ನುತ್ತಾರೆ ಹೂವಿನ ಸೇವೆಗೈದ ಉಮೇಶ್‌ ಕೊಟ್ಟೆಕಾೖ.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.