ಸುಳ್ಯದಲ್ಲಿ ಮಳೆ ಆರ್ಭಟ: ಹಾನಿ
Team Udayavani, Apr 13, 2017, 1:52 PM IST
ಸುಳ್ಯ: ತಾಲೂಕಿನಲ್ಲಿ ಮಂಗಳವಾರ ಸಂಜೆ ಉಂಟಾದ ಭಾರೀ ಗಾಳಿ ಸಹಿತ ಅಕಾಲಿಕ ಮಳೆಗೆ ವ್ಯಾಪಕ ಹಾನಿಯಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಕೃಷಿಸೊತ್ತುಗಳು ಹಾನಿಗೊಂಡಿವೆ. 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾನಿಗೀಡಾಗಿ ಮೆಸ್ಕಾಂಗೆ 15ಲಕ್ಷ ರೂ. ನಷ್ಟವುಂಟಾಗಿದೆ.
ಸುಳ್ಯ ಕಸಬಾ ಮತ್ತು ಪಂಜ ಪರಿಸರದಲ್ಲಿ ತಲಾ 3 ಮನೆಗಳ ಸಹಿತ ತಾಲೂಕಿನಲ್ಲಿ ಒಟ್ಟು 10 ಮನೆಗಳಿಗೆ ಮರಬಿದ್ದು ಹಾನಿಯಾಗಿದೆ. ಅಮರಮಟ್ನೂರು ಗ್ರಾಮದ ಪೈಲಾರು ಮೋಂಟಿ ಎಂಬವರ ಮನೆಗೆ ಮರಬಿದ್ದು ಶೇ. 50 ಹಾನಿಯಾಗಿದ್ದರೆ, ಇದೇ ಪರಿಸರದ ಅಂಗಾರ ಪೈಲಾರು ಅವರ ಮನೆ ಶೇ.30 ರಷ್ಟು ಹಾನಿಗೊಂಡಿದೆ. ಒಟ್ಟು 3 ಕೃಷಿ ಜಾಗಗಳಲ್ಲಿ ಕೃಷಿಸೊತ್ತು ಹಾನಿಗೀಡಾದ ಬಗ್ಗೆ ಕಂದಾಯ ಇಲಾಖೆಗೆ ವರದಿಯಾಗಿದ್ದರ ಹೊರತಾಗಿಯೂ ವಿವಿಧೆಡೆ ರಬ್ಬರ್, ಕಂಗಿನ ಮರಗಳು ಧರೆಗುರುಳಿ ನಷ್ಟಗೊಂಡ ಬಗ್ಗೆ ವರದಿಯಾಗಿದೆ.
ವಿದ್ಯುತ್ ಕಂಬಗಳಿಗೆ ಹಾನಿ
ಜಾಲೂÕರು, ಬೆಳ್ಳಾರೆ, ಗುತ್ತಿಗಾರು ಹಾಗೂ ಸುಳ್ಯ ಪರಿಸರದಲ್ಲಿ 50ಕ್ಕೂ ವಿದ್ಯುತ್ ಕಂಬಗಳು ಧರೆಗುರುಳಿದ್ದು , 2 ಟ್ರಾನ್ಸ್ ಫಾರ್ಮರ್ ಕಂಬಗಳು ಹಾನಿಗೊಂಡು ಒಟ್ಟು 15 ಲಕ್ಷ ರೂ. ನಷ್ಟವಾಗಿರುವುದಾಗಿ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಸುಳ್ಯ ತಾಲೂಕಿನಲ್ಲಿ ಒಟ್ಟು 24.4 ಮಿ.ಮೀ. ಮಳೆಯಾಗಿದೆ. ಬುಧವಾರ ಸಂಜೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಮಳೆಯಾದ ಬಗ್ಗೆ ವರದಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.
Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ
Subhramanya: 9 ತಿಂಗಳ ಹಿಂದೆ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದನೇ ವಿಕ್ರಂ ಗೌಡ?
Puttur: ಕಾಸರಗೋಡು ಮೂಲದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಪೋಕ್ಸೊ ಕೇಸು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.