ಸಂರಕ್ಷಿತ ಸ್ಮಾರಕ ಸುಲ್ತಾನ್ ಬತ್ತೇರಿಗೆ ಹೊಸ ಸ್ಪರ್ಶ
Team Udayavani, Nov 29, 2021, 5:45 AM IST
ಮಹಾನಗರ: ನೂರಾರು ವರ್ಷಗಳ ಇತಿಹಾಸ ಹೊಂದಿದ ಬ್ರಿಟಿಷರ ಕಾಲದ ಸುಲ್ತಾನ್ ಬತ್ತೇರಿ ಕೋಟೆಯನ್ನು ಇದೀಗ ಪುರಾತತ್ವ ಇಲಾಖೆ ಅಭಿವೃದ್ಧಿಗೊಳಿಸಲು ಮುಂದಾಗಿದೆ.
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸುಲ್ತಾನ್ ಬತ್ತೇರಿ ಕೋಟೆಯನ್ನು ಅಭಿವೃದ್ಧಿಗೊಳಿಸಲು ಪುರಾತತ್ವ ಇಲಾಖೆಯೂ ಇದೀಗ ಮೊದಲನೇ ಹಂತದ ಯೋಜನೆ ಯನ್ನು ಕೈಗೊಂಡಿದೆ. ಇದರಂತೆ ಕೋಟೆಯ ಬಿಳಿ ಬಣ್ಣದ ಪೈಂಟಿಂಗ್ ನಿಂದ ಕಂಗೊಳಿಸುತ್ತಿದೆ. ಕೋಟೆಯ ಹೊರ ಭಾಗ ಮತ್ತು ಒಳಭಾಗಕ್ಕೆ ಸುತ್ತಲೂ ಪೈಂಟಿಂಗ್ ಮಾಡ ಲಾಗಿದ್ದು, ಸುತ್ತಲೂ ಕಲ್ಲಿನ ಹಾಸು ಅಳವಡಿಸಿ ಪ್ರವಾಸಿಗ ರನ್ನು ಮತ್ತಷ್ಟು ಆಕರ್ಷಿಸುವಂತೆ ಮಾಡಲಾಗಿದೆ.
ಸುಲ್ತಾನ್ ಬತ್ತೇರಿ ಕೋಟೆಯನ್ನು ಪ್ರವೇಶಿಸ ಬೇಕಾದರೆ ಈ ಹಿಂದೆ ಯಾವುದೇ ತಪಾಸಣೆಯಿರಲಿಲ್ಲ. ಕೋಟೆಗೆ ಭದ್ರತೆ ಸಿಬಂದಿ ಪ್ರತೀ ದಿನ ಇರುತ್ತಿರಲಿಲ್ಲ. ಯಾರ ಅನುಮತಿಯೂ ಇಲ್ಲದೆ, ಸರಾಗವಾಗಿ ಕೋಟೆ ಹತ್ತಬಹುದಿತ್ತು. ಇದೀಗ ಸ್ಥಳದಲ್ಲಿ ಭದ್ರತ ಸಿಬಂದಿ ನಿಯೋಜಿಸಲಾಗಿದೆ. ಕೋಟೆಯ ಗೋಡೆಯಲ್ಲಿ ಅಶ್ಲೀಲ ಶಬ್ದಗಳನ್ನು ಗೀಚಿ, ಪ್ಲಾಸ್ಟಿಕ್ ಬಾಟಲ್, ಚೀಲಗಳು ಅಲ್ಲಲ್ಲಿ ಬಿದ್ದಿದ್ದವು. ಇದೀಗ ಅವುಗಳನ್ನು ತೆರವುಗೊಳಿಸಿ ಸ್ವತ್ಛಗೊಳಿಸಲಾಗಿದೆ. ಕೋಟೆಗೆ ಹೊಸ ಸ್ಪರ್ಶ ನೀಡಲಾಗಿದೆ.
ಈ ಹಿಂದೆ ಇಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚ್ ವ್ಯವಸ್ಥೆ ಇತ್ತು. ಆದರೆ, ಅವು ಮುರಿದು ಅಪಾಯ ಸೂಚಿಸುತ್ತಿತ್ತು. ಇದೀಗ ಆ ಬೆಂಚ್‌ಗಳನ್ನು ತೆಗೆಯಲಾಗಿದ್ದು ಮತ್ತೆ ಬೆಂಚ್ ವ್ಯವಸ್ಥೆ ಅಳವಡಿಸಲಿಲ್ಲ.
ರಸ್ತೆ ಸರಿಯಾಗಬೇಕಿದೆ
ಮಂಗಳೂರು ಕಡೆಯಿಂದ ಸುಲ್ತಾನ್‌ಬತ್ತೇರಿಗೆ ಬರಲು ಮಣ್ಣಗುಡ್ಡೆ ಬಸ್ ತಂಗುದಾಣದಲ್ಲಿ ತಿರುಗಿ ಉರ್ವ ಮಾರುಕಟ್ಟೆ ಮುಖೇನ ಪ್ರವೇಶ ಪಡೆಯಬೇಕು. ಉರ್ವ ಮಾರುಕಟ್ಟೆಯಿಂದ ಸುಲ್ತಾನ್ ಬತ್ತೇರಿಗೆ ತೆರಳುವ ರಸ್ತೆ ಗುಂಡಿಬಿದ್ದಿದೆ.
ಈ ರಸ್ತೆಯ ಮೂಲಕ ದಿನಂಪ್ರತಿ ಹತ್ತಾರು ವಾಹನಗಳು ಬರುತ್ತಿದ್ದು, ರಸ್ತೆಯ ಅರೆ ಬರೆ ಕಾಮಗಾರಿ ನಡೆದಿದೆ. ಚರಂಡಿ ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟದಿಂದ ಮೇಲೆ ಇದೆ. ಒಂದು ಮಳೆ ಬಂದರೆ ರಸ್ತೆ ತುಂಬೆಲ್ಲ ಕೃತಕ ನೆರೆಆವರಿಸುತ್ತದೆ. ಈ ಭಾಗದಲ್ಲಿ ಸದ್ಯ ಕಾಮಗಾರಿಯೂ ನಡೆಯುತ್ತಿದೆ.
ಉದಯವಾಣಿ “ಸುದಿನ ವರದಿ ಮಾಡಿತ್ತು
ಪುರಾತತ್ವ ಇಲಾಖೆಯಡಿ ಬರುವ ಸುಲ್ತಾನ್ ಬತ್ತೇರಿ ನಿರ್ಲಕ್ಷಕ್ಕೆ ಒಳಗಾಗಿದ್ದು, “ಸಂರಕ್ಷಿತ ಸ್ಮಾರಕ ತಾಣ ಸುಲ್ತಾನ್ ಬತ್ತೇರಿಗೆ ಬೇಕಿದೆ ರಕ್ಷಣೆ’ ಎಂಬ ಶೀರ್ಷಿಕೆಯಡಿ “ಸುದಿನ’ ವಿಶೇಷ ವರದಿ ಪ್ರಕಟಿಸಲಾಗಿತ್ತು. ಆ ವೇಳೆ ಕೋಟೆಯ ಅಭಿವೃದ್ಧಿಗೆ ಗಮನಹರಿಸಲಾಗುವುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದರು. ಅದರಂತೆ ಸದ್ಯ ಸುಲ್ತಾನ್ ಬತ್ತೇರಿ ಸುತ್ತಮುತ್ತ ಸ್ವತ್ಛಗೊಳಿಸಿ, ಕೋಟೆಯನ್ನು ಪ್ರವಾಸಿಗರ ಆಕರ್ಷಣೆಗೊಳಪಡಿಸಲಾಗಿದೆ.
ಕೋಟೆ ಸುರಕ್ಷೆಗೆ ಆದ್ಯತೆ
ಸುಲ್ತಾನ್‌ಬತ್ತೇರಿಗೆ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಕೋಟೆಗೆ ಪೈಂಟಿಂಗ್ ಮಾಡಲಾಗಿದ್ದು, ಕೋಟೆಯ ಸುರಕ್ಷೆಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಕೋಟೆಯ ಸುತ್ತಮುತ್ತಲು ಬೆಳೆದ ಹುಲ್ಲನ್ನು ಕಟಾವು ಮಾಡಲಾಗಿದ್ದು ಸುತ್ತಲೂ ಕಲ್ಲಿನ ಹಾಸು ಅಳವಡಿಸಲಾಗಿದೆ. ಮುಂದಿನ ದಿನ ಗಳಲ್ಲಿಯೂ ಕೋಟೆಯ ಅಭಿವೃದ್ಧಿಯ ಕಡೆಗೆ ಗಮನ ಹರಿಸಲಾಗುವುದು.
– ಗೋಕುಲ್, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಸಂರಕ್ಷಣಾ ಸಹಾಯಕ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.