ಆಡಳಿತದ ದಿವ್ಯ ನಿರ್ಲಕ್ಷ್ಯ ಕಸದ ಕೊಂಪೆಯಾಗಿರುವ ಸುಲ್ತಾನ್‌ಬತ್ತೇರಿ
Team Udayavani, Aug 10, 2017, 6:55 AM IST
ಮಹಾನಗರ: ಕರಾವಳಿಯ ಪ್ರವಾಸೋದ್ಯಮದಲ್ಲಿ ಅಚ್ಚಳಿಯದ ಹೆಸರಾಗಿ ಉಳಿದುಕೊಂಡಿರುವ ನಗರದ ಸುಲ್ತಾನ್ ಬತ್ತೇರಿ ಪ್ರಸ್ತುತ ಕಸ ಕಡ್ಡಿಗಳ ಕೊಂಪೆಯಾಗಿ ಪರಿವರ್ತಿತವಾಗಿದ್ದು, ಪ್ರವಾಸೋದ್ಯಮ ಇಲಾಖೆ ಮೌನವಹಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೋಳೂರಿನ ಗುರುಪುರ ನದಿಯ ತಟದಲ್ಲಿರುವ ಸುಲ್ತಾನ್ ಬತ್ತೇರಿಯಲ್ಲಿ ಟಿಪ್ಪುವಿನ ಕಾಲದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಪ್ರಮುಖ ಆಕರ್ಷಣೆ. ಪ್ರಾಕೃತಿಕ ಸೌಂದರ್ಯದಲ್ಲಿ ಮಿಂದೆದ್ದಿರುವ ಇಲ್ಲಿನ ಸೊಬಗು ಆಸ್ವಾದಿಸಲು ದೂರದೂರಿನಿಂದ ನೂರಾರು ಜನರು ಆಗಮಿಸುತ್ತಾರೆ. ಆದರೆ ಮಂಗಳೂರಿನ ಹಿರಿಮೆಗೆ ಗರಿಯಂತಿರುವ ಕರಾವಳಿಯ ಪ್ರತಿಷ್ಠಿತ ಸುಲ್ತಾನ್‌ಬತ್ತೇರಿ ಆಡಳಿತದ ನಿರ್ಲಕ್ಷ್ಯದಿಂದ ಹಾಳು ಕೊಂಪೆ ಯಾಗಿ ಪರಿವರ್ತಿತವಾಗಿದೆ.
ಸ್ವತ್ಛತೆ ಜೀವಂತಿಕೆ ಇಲ್ಲ
ದೇಶದೆಲ್ಲೆಡೆ ಸ್ವತ್ಛ ಪರಿಕಲ್ಪನೆಯ ಧ್ವನಿ ಮೊಳಗುತ್ತಿದ್ದರೂ, ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವತ್ಛತೆ ಎಂಬುದು ಇನ್ನೂ ಜೀವಂತಿಕೆ ಪಡೆದಿಲ್ಲ ಎಂಬುದಕ್ಕೆ ಸುಲ್ತಾನ್‌ಬತ್ತೇರಿ ಸಾಕ್ಷಿ. ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹೊಂಡ-ಗುಂಡಿಗಳಿಂದಲೇ ಸ್ವಾಗತ ನೀಡುತ್ತಿದೆ.
ನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದರೂ ರಜಾ ದಿನಗಳಲ್ಲಿ ಆ ಸಂಖ್ಯೆ ಹೆಚ್ಚಿರುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯೂ ಇದೆ. ಇಲ್ಲಿನ ವಿಪುಲ ನೀರರಾಶಿಗೆ ಮಾರು ಹೋಗುವ ಪ್ರವಾಸಿಗರು ಮತ್ತೂಂದೆಡೆ ಕಸಕಡ್ಡಿಗಳನ್ನು ಕಂಡು ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಂಬಂಧಪಟ್ಟ ಇಲಾಖೆಯವರು ಗಾಢ ಮೌನದಲ್ಲಿರುವುದು ಆಶ್ಚರ್ಯದ ಸಂಗತಿಯೇ.
ಸಾಮಾನ್ಯವಾಗಿ ಪ್ರವಾಸಿ ತಾಣಗಳ ಸಂಪರ್ಕ ರಸ್ತೆಗಳೆಂದರೆ ಅಗಲವಾಗಿ ಸುಂದರವಾಗಿರುತ್ತದೆ. ರಸ್ತೆಗಳನ್ನು ಕಂಡಾಗಲೇ ಅಲ್ಲಿಗೆ ಹೋಗಬೇಕು ಎಂದನಿಸಬೇಕು. ರಸ್ತೆ ಸಮಸ್ಯೆಯಿಂದಾಗಿ ಇಲ್ಲಿಗೆ ಬಸ್ಸಿನ ವ್ಯವಸ್ಥೆಯೂ ಸರಿಯಾಗಿಲ್ಲ. ಒಂದೆರಡು ಬೆರಳೆಣಿಕೆಯ ಬಸ್ಸುಗಳು ಮಾತ್ರ ಓಡಾಡುತ್ತಿವೆ.
ಗಮನಹರಿಸದ ಆಡಳಿತ ವ್ಯವಸ್ಥೆ
ಸುಲ್ತಾನ್‌ಬತ್ತೇರಿಯು ಕಳೆದ ಹಲವು ವರ್ಷಗಳಿಂದ ಪಾಳುಬಿದ್ದಿದೆ. ಕಸಕಡ್ಡಿಗಳು, ಕಲ್ಲು ಚಪ್ಪಡಿಗಳೂ ರಾಶಿ ಬಿದ್ದಿವೆ. ಗಮನಹರಿಸಬೇಕಾದ ಇಲಾಖೆಗಳು ಮಾತ್ರ ಈ ಬಗ್ಗೆ ಯಾವುದೇ ಗಮನ ನೀಡಿದಂತಿಲ್ಲ. ಪರಿಣಾಮವಾಗಿ ಪ್ರತಿಷ್ಠಿತ ಪ್ರವಾಸೋದ್ಯಮ ಸ್ಥಳವೊಂದು ಕಸದ ಕೊಂಪೆಯಿಂದ ಆವೃತವಾಗಿದೆ.
-ಸುಕೇಶ್ ಭಂಡಾರಿ , ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.