ಸುಳ್ಯ: ಪ್ರಗತಿಯಲ್ಲಿ ಜಲ ಜೀವನ್ ಮಿಷನ್ ಕಾಮಗಾರಿ
1ನೇ ಹಂತದ 5 ಕೋಟಿ ರೂ. ಕಾಮಗಾರಿ ಪೂರ್ಣ
Team Udayavani, May 21, 2022, 9:13 AM IST
ಸುಳ್ಯ: ಪ್ರತೀ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದ ಸರಕಾರದ ಜಲ ಜೀವನ್ ಮಿಷನ್ ಯೋಜನೆ ಯಡಿ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಒಂದು ಮತ್ತು ಎರಡನೇ ಹಂತದಲ್ಲಿ 67 ಕೋಟಿ ರೂ. ಅನು ದಾನದಲ್ಲಿ ಕಾಮಗಾರಿ ನಡೆಯಲಿದೆ.
ಸುಮಾರು 25 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಜಿ.ಪಂ., ತಾ.ಪಂ. ಅಡಿಯಲ್ಲಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದವರು ಕಾಮಗಾರಿ ನಡೆಸುತ್ತಿದ್ದು, ಸ್ಥಳೀಯ ಗುತ್ತಿಗೆದಾರರು ನಿರ್ವಹಣೆ ಮಾಡುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಈಗಾಗಲೇ 5 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದ್ದು, ಎರಡನೇ ಹಂತದಲ್ಲಿ 9 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಒಂದನೇ ಹಂತ
ಸುಳ್ಯ ತಾಲೂಕು ವ್ಯಾಪ್ತಿಗೆ ಜಲಜೀವನ್ ಮಿಷನ್ ಯೋಜನೆಯಡಿ ಒಂದನೇ ಹಂತ ದಲ್ಲಿ 16 ಕೋಟಿ ರೂ. ಅನುದಾನ ಮಂಜೂ ರಾಗಿದ್ದು, ಒಟ್ಟು 95 ಕಾಮಗಾರಿಗಳು ನಡೆ ಯಲಿವೆ. ಈಗಾಗಲೇ 5 ಕೋಟಿ ರೂ. ವೆಚ್ಚದ ಕಾಮಗಾರಿ ಗಳು ಪೂರ್ಣಗೊಂಡಿವೆ. ಇದರಲ್ಲಿ ಕೆಲವು ಹಂತದ ನೀರಿನ ಟ್ಯಾಂಕ್‌ಗಳು, 50 ಎತ್ತರದಲ್ಲಿನ ಟ್ಯಾಂಕ್‌ಗಳು ನಿರ್ಮಾಣ ಆಗಲಿವೆ. 2,828 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
2ನೇ ಹಂತ
ಎರಡನೇ ಹಂತದ ಕಾಮಗಾರಿಗೆ ಇತ್ತೀಚೆಗೆ ಸಚಿವ ಎಸ್.ಅಂಗಾರ ಚಾಲನೆ ನೀಡಿದ್ದು, ಈ ಹಂತದಲ್ಲಿ ಒಟ್ಟು 51.54 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿದೆ. ಇದರಲ್ಲಿ ಈಗಾಗಲೇ 9 ಕಾಮಗಾರಿಗಳು ಆರಂಭಿಸಲಾಗಿದ್ದು, ಪ್ರಗತಿಯಲ್ಲಿದೆ. ಈ ಪೈಕಿ 89 ನೆಲ ಹಂತದ ನೀರಿನ ಟ್ಯಾಂಕ್‌ಗಳು, 52 ಎತ್ತರದಲ್ಲಿನ(ಒವರ್ ಹೈಟ್) ನೀರಿನ ಟ್ಯಾಂಕ್‌ಗಳು ನಿರ್ಮಾಣವಾಗಲಿದೆ. 3,436 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ಕಾಮಗಾರಿಗಳು
ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಜೀವನ್ ಮಿಷನ್ ಯೋಜನೆ ಯಡಿ ವಿವಿಧ ಕಾಮಗಾರಿ ನಿರ್ವಹಿಸ ಬಹುದಾಗಿದೆ. ಕೊಳವೆ ಬಾವಿ, ನೀರಿನ ಟ್ಯಾಂಕ್, ಪೈಪ್‌ಲೈನ್, ನಳ್ಳಿ ಜೋಡಣೆ ಸೇರಿ ವಿವಿಧ ಕಾಮಗಾರಿಗಳು ಇದರಡಿ ನಡೆಯಲಿದೆ. ಫಲಾ ನುಭವಿಗಳು ಆರಂಭದಲ್ಲಿ ಸರಕಾರಕ್ಕೆ ಒಂದು ಸಾವಿರ ರೂ. ಡೆಪಾಸಿಟ್ ಪಾವತಿ ಸಬೇಕಾಗಿದ್ದು, ಬಳಿಕ ಮನೆಗೆ ನೀರಿನ ಸಂಪರ್ಕ ಕಲ್ಪಿಸುವ ವರೆಗೆ ಹಣ ಪಾವತಿಸಬೇಕಾಗಿಲ್ಲ. ನೀರು ಪೊರೈಕೆ ಆರಂಭವಾದ ಬಳಿಕ ಬಳಸಿದ ನೀರಿನ ಮೀಟರ್ ಹಣ ಪಾವತಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಸಮಾನ ಸರಬರಾಜು
ಇಲ್ಲಿ ನೀರಿನ ಸಮಾನ ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎತ್ತರದಲ್ಲಿರುವ ಮನೆಗೂ, ಕೆಳಗಿರುವ ಮನೆಗೂ ಒಂದೇ ಹಂತದಲ್ಲಿ ನೀರು ಪೊರೈಕೆಯಾಗುತ್ತದೆ. ಹೆಚ್ಚು ಕಮ್ಮಿ ನೀರಿನ ಪೊರೈಕೆ ಇರುವುದಿಲ್ಲ. ಮೀಟರ್ ಅಳವಡಿಸಲಾಗುವುದರಿಂದ ಫಲಾನುಭವಿಗಳು ಎಷ್ಟು ನೀರು ಬಳಸುತ್ತಾರೋ ಅಷ್ಟು ಹಣ ಪಾವತಿಸಬೇಕು. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆಯು ತ್ತಿರುವ ಕಾಮಗಾರಿಗಳನ್ನು ಎಂಜಿನಿಯರ್ ಗಳ ತಂಡ ಪರಿಶೀಲನೆ ನಡೆಸುತ್ತಿದ್ದು, ಕಾಮಗಾರಿ ಆರಂಭದಿಂದ ಪೂರ್ಣಗೊಳ್ಳುವವರೆಗೆ ಗಮನ ಹರಿಸಲಿದೆ. ಕಾಮಗಾರಿ ಪೂರ್ತಿಯಾಗಿ ಗ್ರಾ.ಪಂ. ನವರಿಗೆ ಬಿಟ್ಟು ಕೊಟ್ಟ ಮೇಲೆ ನಿರ್ವಹಣೆ ಗ್ರಾ.ಪಂ. ಹೆಗಲೇರಲಿದೆ.
ಶೇ. 60ರಷ್ಟು ಕಾಮಗಾರಿ
ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ತಾಲೂಕು ಮಟ್ಟದಲ್ಲೂ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಜಿಲ್ಲೆ ಯಲ್ಲಿ ಶೇ. 60 ಕಾಮಗಾರಿ ಪೂರ್ಣಗೊಂಡಿದ್ದು, ಸುಳ್ಯ ತಾಲೂಕಿನಲ್ಲೂ ಅಂದಾಜು ಶೇ. 60 ರಷ್ಟು ಕಾಮಗಾರಿ ನಡೆದಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸ ಲಾಗುವುದು. –ಡಾ| ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾ, ದ.ಕ. ಜಿ.ಪಂ.
ದಯಾನಂದ ಕಲ್ನಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.