ಸುಳ್ಯ ನಗರ: ವಾಹನ ನಿಲುಗಡೆ ಸಮಸ್ಯೆ… ಪರಿಹಾರಕ್ಕೆ ಒಂದು ಬದಿ ನಿಲುಗಡೆ ಪದ್ಧತಿ ಜಾರಿ
Team Udayavani, Jan 10, 2023, 6:10 AM IST
ಸುಳ್ಯ : ಅಭಿವೃದ್ಧಿ ಹೊಂದುತ್ತಿರುವ ಸುಳ್ಯ ನಗರದಲ್ಲಿ ಪೊಲೀಸ್ ಇಲಾಖೆ, ಸ್ಥಳೀಯಾಡಳಿತ ಕೈಗೊಂಡ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆಯು ನಗರದ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರಕ್ಕೆ ಪೂರಕವಾಗಿದೆ.
ಸುಳ್ಯ ನಗರದಲ್ಲಿ ಮಾಣಿ-ಮೈಸೂರು ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ವಾಹನ ಸವಾರರು ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತಿರುವುದು ಇನ್ನೂ ಸಮಸ್ಯೆಯಾಗಿತ್ತು.
ಸುಳ್ಯ ನಗರದಲ್ಲಿ ಈ ಹಿಂದೆ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆ ಮಾಡಿದ್ದರೂ ಅದು ಬಳಿಕ ಮುಂದುವರಿಯಲಿಲ್ಲ. ಇದೀಗ ಆ ವ್ಯವಸ್ಥೆಯನ್ನು ಮರುಜಾರಿಗೆ ಸ್ಥಳೀಯಾಡಳಿತ, ಪೊಲೀಸ್ ಇಲಾಖೆ, ವರ್ತಕರು, ಸರ್ವಿಸ್ ವಾಹನ ಚಾಲಕ-ಮಾಲಕರು ಸಭೆ ನಡೆಸಿ ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ.
ಪ್ರತೀ ದಿನ ಬದಲಾವಣೆ
ಒಂದು ಬದಿ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ರಸ್ತೆಯ ಒಂದು ಬದಿ ವಾಹನ ನಿಲುಗಡೆ ಮಾಡಲು ಅವಕಾಶ ಹಾಗೂ ಇನ್ನೊಂದು ಬದಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಒಂದು ದಿನ ಬಲ ಬದಿ ವಾಹನ ನಿಲುಗಡೆಗೆ ಅವಕಾಶ ಇದ್ದರೆ, ಇನ್ನೊಂದು ದಿನ ಎಡ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶವಿರಲಿದೆ. ಇದಕ್ಕೆ ಪೂರಕ ಎಂಬಂತೆ ವರ್ತಕರು ಸಹಕರಿ ಸುತ್ತಿದ್ದು, ವಾಹನ ನಿಲುಗಡೆ ಮಾಡಲು ಇಲ್ಲದ ರಸ್ತೆ ಬದಿಯ ವರ್ತಕರು ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶವಿಲ್ಲ ಎನ್ನುವ ಸೂಚನ ಫಲಕ ಅಳವಡಿಸಿ ಸೂಚನೆ ನೀಡುತ್ತಾರೆ. ನಗರದ ಪ್ರಮುಖ ಜಂಕ್ಷನ್‌ಗಳ ಸಮೀಪ ಎರಡೂ ಬದಿಯಲ್ಲೂ ವಾಹನ ನಿಲುಗಡೆ ಮಾಡಲು ಅವಕಾಶ ನಿಷೇಧಿಸಲಾಗಿದೆ.
ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸಿದ್ದರೂ ಕೆಲವೊಮ್ಮೆ ಬೃಹತ್ ವಾಹನಗಳ ಸಂಚಾರ, ಬಸ್‌ಗಳು ತಿರುಗುವ ಸಂದರ್ಭದಲ್ಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಜಂಕ್ಷನ್‌ಗಳಲ್ಲಿ ಒಂದೊಮ್ಮೆ ವಾಹನ ದಟ್ಟಣೆ ಆಗುವ ವೇಳೆಯೂ ಸಂಚಾರ ವ್ಯತ್ಯಯವಾಗುತ್ತದೆ. ನಗರದ ರಸ್ತೆಯನ್ನು ಅಗಲಗೊಳಿಸಿದರೆ ಇವೆಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬುದು ಜನತೆಯ ಮಾತು.
ಯಶಸ್ವಿ ಹಂತದಲ್ಲಿದೆ
ಒಂದು ಬದಿ ವಾಹನ ನಿಲುಗಡೆ ಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆಯಾಗಿದೆ. ಜನರು, ವಾಹನ ಸವಾರರು, ವರ್ತಕರು, ಸೇರಿದಂತೆ ಎಲ್ಲರೂ ಸೂಚನೆಗಳನ್ನು ಪಾಲಿಸುತ್ತಿರುವುದರಿಂದ ಕ್ರಮ ಯಶಸ್ವಿ ಹಂತದಲ್ಲಿದೆ.
– ಸುಧಾಕರ್ ಎಂ.ಎಚ್., ಮುಖ್ಯಾಧಿಕಾರಿ ನ.ಪಂ. ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.