ಬೇಸಗೆ ಲೋ ವೋಲ್ಟೇಜ್: ಸಿದ್ಧಗೊಂಡಿಲ್ಲ ಸುಳ್ಯ!
Team Udayavani, Oct 24, 2018, 10:23 AM IST
ಸುಳ್ಯ : ಹಲವು ವರ್ಷಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಪರಿಣಾಮ ಬೇಸಗೆ ಬಿಸಿಯಿಂದ ತತ್ತರಿಸಿದ್ದ ತಾಲೂಕಿಗೆ ಈ ಬಾರಿಯು ಮುಕ್ತಿ ಸಿಗುವ ಲಕ್ಷಣ ಕಾಣುತ್ತಿಲ್ಲ. ಎಲ್ಲ ಸ್ತರದ ಚುನಾವಣೆ ಪೂರ್ವದಲ್ಲಿ ಚರ್ಚಾ ವಸ್ತುವಾಗುವ ವಿದ್ಯುತ್ ಅವ್ಯವಸ್ಥೆಯು ಫಲಿತಾಂಶ ಪ್ರಕಟಗೊಂಡ ಬಳಿಕ ತೆರೆಮರೆಗೆ ಸರಿದು ಬಿಡುವುದು ಇಲ್ಲಿನ ಕಥೆ. ಹಾಗಾಗಿ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುತ್ತಿದೆ.
ಎಲ್ಲವೂ ಅಪೂರ್ಣ
ಶಾಶ್ವತ ಪರಿಹಾರಕ್ಕಿರುವ 110 ಕೆ.ವಿ. ಸಬ್‌ಸ್ಟೇಷನ್ ಅನುಷ್ಠಾನ ಆರಂಭದ ಹಂತದಿಂದ ಚಿಗಿತುಕೊಂಡಿಲ್ಲ. ತಾತ್ಕಾಲಿಕ ಪರಿಹಾರಕ್ಕಿರುವ ಪುತ್ತೂರು-ಸುಳ್ಯ ನಡು ವಿನ 33 ಕೆ.ವಿ. ಹಳೆ ತಂತಿ ಮತ್ತು ಕಂಬ ಬದಲಾವಣೆ ಪೂರ್ಣವಾಗಿಲ್ಲ. ಎರಡನೇ ಕಾಮಗಾರಿ ಕೆಲ ತಿಂಗಳಲ್ಲಿ ಪೂರ್ಣ ಗೊಂಡರೂ ಅದರಿಂದ ಬೇಸಗೆಯ ಬವಣೆ ನೀಗದು. ಅದು ಸೋರಿಕೆಯಾಗುವ ವಿದ್ಯುತ್ ಉಳಿಸಬಹುದಷ್ಟೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಇನ್ನು ಹಲವು ವರ್ಷ ಕಾಯಬೇಕು ಎನ್ನುವ ಕೊರಗು ಜನರದ್ದಾಗಿದೆ.
ತಾಲೂಕಿನ ಸ್ಥಿತಿ
ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ದಲ್ಲಿ 33 ಕೆ.ವಿ. ಸಬ್‌ಸ್ಟೇಷನ್ ಗಳು ಇವೆ. 18 μàಡರ್‌ಗಳಿವೆ. ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯಕ್ಕೆ ಪುತ್ತೂರು 110 ಕೆ.ವಿ. ಸಬ್‌ಸ್ಟೇಷನ್‌ನಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಇಲ್ಲಿ 53 ಸಾವಿರಕ್ಕೂ ಅಧಿಕ ವಿದ್ಯುತ್ ಸಂಪರ್ಕಗಳಿವೆ. ಇದರಲ್ಲಿ 44 ಸಾವಿರ ಮನೆ, ವಾಣಿಜ್ಯ ಕಟ್ಟಡ, 12 ಸಾವಿರ ಕೃಷಿಗೆ ಸಂಪರ್ಕವಿದೆ. ಇಡೀ ಸುಳ್ಯ ತಾಲೂಕಿಗೆ ವಿದ್ಯುತ್ ಪೂರೈಕೆಯಾಗುವುದು ಪುತ್ತೂರಿನ 110 ಕೆ.ವಿ. ಸಬ್‌ಸ್ಟೇಷನ್‌ನಿಂದ. ಸುಳ್ಯ 33 ಕೆ.ವಿ. ಸಬ್‌ಸ್ಟೇಷನ್‌ನಿಂದ ಗೃಹ ಮತ್ತು ಗೃಹೇತರ ಬಳಕೆದಾರರಿಗೆ ಒದಗಿಸಲಾಗುತ್ತದೆ.
ಕೃಷಿಕರ ಸಮಸ್ಯೆ
ಈ ಬಾರಿಯ ಬಿಸಿಲಿನ ತೀವ್ರತೆ ಕಂಡರೆ, ನವೆಂಬರ್‌ನಲ್ಲೇ ವಿದ್ಯುತ್ ಅಭಾವ ಉದ್ಭವಿಸುವ ಸಾಧ್ಯತೆ ಅಧಿಕವಾಗಿದೆ. ಪ್ರತಿ ಬಾರಿ ಜನವರಿಯಲ್ಲಿ ಸಮಸ್ಯೆ ಆರಂಭಗೊಂಡು, ಎಪ್ರಿಲ್-ಮೇ ಅಂತ್ಯದ ತನಕ ಇರುತ್ತದೆ. ಹೊಳೆ, ತೋಡು, ನದಿಗಳಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಕೊಳವೆ ಬಾವಿಯಿಂದ ನೀರು ಹಾಯಿಸುವ ಕಾರ್ಯಅನಿವಾರ್ಯವೆನಿಸಿದೆ.
20 ಎಂವಿಎ ಪರಿವರ್ತಕ ಅಳವಡಿಸಿದರೆ ಪರಿಹಾರ?
ಪುತ್ತೂರಿನಲ್ಲಿ 20 ಎಂವಿಎ ಸಾಮರ್ಥ್ಯದ ಹೆಚ್ಚುವರಿ ಪರಿವರ್ತಕ ಅಳವಡಿಸಿದರೆ ಬೇಸಗೆಯಲ್ಲಿ ಸುಳ್ಯದ ಸಮಸ್ಯೆ ನೀಗ ಬಹುದು. ಇದರಿಂದ ಸುಳ್ಯದಲ್ಲಿ ವಿದ್ಯುತ್ ಧಾರಣ ಸಾಮರ್ಥ್ಯ ಈಗಿರುವ 8 ಮೆಗಾ ವ್ಯಾಟ್‌ನಿಂದ 18ರಿಂದ 20 ಮೆ.ವ್ಯಾ. ತನಕ ಸಂಗ್ರಹಿಸಲು ಸಾಧ್ಯವಿದೆ ಎನ್ನುವುದು ಮೆಸ್ಕಾಂ ಜಿಲ್ಲಾಮಟ್ಟದ ಅಧಿಕಾರಿಗಳ ಮಾತು.
ಪರಿಹಾರ ಸಾಧ್ಯ
ಹೆಚ್ಚುವರಿ 20 ಎಂವಿಎ ಪರಿವರ್ತಕ ಸ್ಥಾಪಿಸುವಂತೆ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿ ಡಿಪಿಆರ್ ಮುಗಿದು ಟೆಂಡರ್‌ಗೆ ಬಾಕಿ ಇದೆ. ಡಿಸೆಂಬರ್ ಒಳಗೆ ಪೂರ್ಣ ಗೊಳಿಸಿದರೆ ಬೇಸಗೆಯಲ್ಲಿ ಸುಳ್ಯಕ್ಕೆ ಅನಿಯಮಿತ ವಿದ್ಯುತ್ ಪೂರೈಸಲು ಸಾಧ್ಯವಿದೆ.
– ಮಂಜಪ್ಪ ಅಧೀಕ್ಷಕ ಎಂಜಿನಿಯರ್, ಮೆಸ್ಕಾಂ
ಮಂಗಳೂರು ವೃತ್ತ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.