ಅಗ್ನಿಶಾಮಕ ಠಾಣೆಪರಿಸ್ಥಿತಿಎದುರಿಸಲು ಸರ್ವ ಸನ್ನದ್ಧ;ಹೊಸ ವಾಹನಸೇರ್ಪಡೆ


Team Udayavani, Mar 23, 2019, 4:51 AM IST

23-march-1.jpg

ಮಹಾನಗರ : ಬೇಸಗೆಯಲ್ಲಿ ಎಲ್ಲೆಂದರಲ್ಲಿ ಅಗ್ನಿ ದುರಂತಗಳು ನಡೆಯುವುದು, ನಷ್ಟಗಳು ಸಂಭವಿಸುವುದು ಸಾಮಾನ್ಯ. ಇಂತಹ ದುರಂತಗಳು ಘಟಿಸಿದಾಗಲೆಲ್ಲ ಅಗ್ನಿಶಾಮಕ ದಳದವರ ಕಾರ್ಯಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ.

ಮಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಬೆಳೆಯುತ್ತಿದ್ದು, ಮನೆಗಳಲ್ಲಿ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಅಪರೂಪಕ್ಕೆಂಬಂತೆ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಈ ರೀತಿಯ ಅಗ್ನಿ ದುರಂತದಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇಲ್ಲಿನ ಅಗ್ನಿ ಶಾಮಕ ದಳವು ಏರಿಯಲ್‌ ಲ್ಯಾಡರ್‌ ಪ್ಲಾಟ್‌ ಫೋರಂನಂತಹ ಹೊಸ ಹೊಸ ಉಪಕರಣಗಳೊಂದಿಗೆ ಸಜ್ಜಾಗಿದೆ. ಅಲ್ಲದೆ ಇತ್ತೀಚೆಗೆ ಅಡ್ವಾನ್ಸ್‌ಡ್‌ ವಾಟರ್‌ ಬೌಸರ್‌ ಎಂಬ ಹೊಸ ಉಪಕರಣವೊಂದು ಪಾಂಡೇಶ್ವರದಲ್ಲಿರುವ ಅಗ್ನಿ ಶಾಮಕ ಸೇವಾ ಠಾಣೆಗೆ ಸೇರ್ಪಡೆಗೊಂಡಿದೆ. 4500 ಲೀ. ನೀರು ಮತ್ತು 500 ಲೀ. ನೊರೆಯನ್ನು ತುಂಬಿಸಿಡುವ ಸಾಮರ್ಥ್ಯವನ್ನು ಹೊಂದಿರುವುದು ಈ ಯಂತ್ರದ ವಿಶೇಷತೆ.

ಪ್ರಸ್ತುತ ಮಂಗಳೂರು ಅಗ್ನಿ ಶಾಮಕ ದಳವು 32 ಮೀ. ಎತ್ತರದ ವರೆಗಿನ ಕಟ್ಟಡಕ್ಕೂ ತೆರಳಿ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾದ ಏರಿಯಲ್‌ ಲ್ಯಾಡರ್‌ ಪ್ಲಾಟ್‌ಫೋರಂ (ಎ.ಎಲ್‌.ಪಿ.), ರಕ್ಷಣಾ ಸಾಧನಗಳನ್ನು ಹೊಂದಿರುವ ರೆಸ್ಕ್ಯೂ ವಾಹನಗಳು, 16,000 ಲೀ. ಸಾಮ ರ್ಥ್ಯದ ವಾಟರ್‌ ಬೌಸರ್‌, ವಾಟರ್‌ ಟೆಂಡರ್‌, ಕ್ವಿಕ್‌ ರೆಸ್ಪಾನ್ಸ್‌ ವೆಹಿಕಲ್‌, ‘ವರುಣಾ’ ಚತುಷ್ಚಕ್ರ ವಾಹನ, ಡಿ. ವಾಟರ್‌ ಪಂಪ್‌, ಪೋರ್ಟಬಲ್‌ ಪಂಪ್‌ನಂಥ ಉಪಕರಣಗಳನ್ನು ಹೊಂದಿದ್ದು, ತುರ್ತು ಸಂದರ್ಭ ಎದುರಿಸಲು ಸನ್ನದ್ಧವಾಗಿದೆ. 

ಗುರುವಾರ ಮಗಳೂರಿನ ಬಿಜೈನಲ್ಲಿರುವ ‘ದೀಪಾಂಜಲಿ’ ಬಹು ಮಹಡಿ ಕಟ್ಟಡದ 7 ನೇ ಮಾಳಿಗೆಯಲ್ಲಿ ಬೆಂಕಿ ದುರಂತ ಸಂಭವಿಸಿದಾಗ ಕದ್ರಿ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬಂದಿ ಧಾವಿಸಿ ಬೆಂಕಿಯನ್ನು ನಂದಿಸಿ ಅನಾಹುತದ ಪ್ರಮಾಣ ಮತ್ತಷ್ಟು ಹೆಚ್ಚಾಗುವುದನ್ನು ತಡೆದಿದ್ದರು. ಆದರೆ ವಿಶೇಷ ಎಂದರೆ ಈ ಕಟ್ಟಡವನ್ನು ನಿರ್ಮಿಸಿ ಜನ ವಾಸಕ್ಕೆ ಬಿಟ್ಟು ಕೊಡುವಾಗ ಅಗ್ನಿ ಶಾಮಕ ದಳದವರಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರಲಿಲ್ಲ.

ಅಗ್ನಿ ಶಾಮಕ ದಳದ ಎನ್‌ಒಸಿ ಪಡೆಯ ಬೇಕಾದರೆ ಕಟ್ಟಡದ ಸುತ್ತ ಅಗ್ನಿ ಶಾಮಕ ದಳದ ವಾಹನ ಓಡಾಡಲು ಬೇಕಾದಷ್ಟು ಸ್ಥಳಾವಕಾಶ (ಸೆಟ್‌ ಬ್ಯಾಕ್‌) ಇರಿಸುವುದು ಅವಶ್ಯಕ. ಅಲ್ಲದೆ ಕಟ್ಟಡದ ಯಾವುದೇ ಫ್ಲ್ಯಾಟ್  ನಲ್ಲಿ ಬೆಂಕಿ ಅವಘಡ ಸಂಭವಿಸಿದರೂ ಅದನ್ನು ಶಮನಗೊಳಿಸಲು ಬೇಕಾಗಿರುವ ನೀರು ಮತ್ತು ನೊರೆಯನ್ನು ಹಾಯಿಸಲು ಪೈಪ್‌ಲೈನ್‌ ಅನ್ನು ಕಟ್ಟಡದ ನಿರ್ಮಾಣ ಹಂತದಲ್ಲಿಯೇ ಅಳವಡಿಸ ಬೇಕಾಗುತ್ತದೆ.

ಈ ಬಹು ಮಹಡಿ ಕಟ್ಟಡಕ್ಕೆ ಅಗ್ನಿ ಶಾಮಕ ದಳದವರಿಂದ ನಿರಾಕ್ಷೇಣಾ ಪತ್ರವನ್ನು ಪಡೆದಿಲ್ಲ. ಮಹಾನಗರ ಪಾಲಿಕೆಯ ಅಧಿಕಾರಿಗಳು ಲೈಸನ್ಸ್‌ ನೀಡಿ ವಾಸಕ್ಕೆ ಬಿಟ್ಟು ಕೊಟ್ಟಿದ್ದಾರೆ. ಹಾಗಾಗಿ ಈ ಕಟ್ಟಡದಲ್ಲಿ ಆಗಿರುವ ಬೆಂಕಿ ದುರಂತ ಮತ್ತು ಕಷ್ಟಕ ನಷ್ಟಕ್ಕೆ ಮಹಾನಗರ ಪಾಲಿಕೆಯವರೇ ಜವಾಬ್ದಾರರು ಎಂದು ಚೀಫ್‌ ಫೈರ್‌ ಆಫೀಸರ್‌ ಟಿ.ಎನ್‌. ಶಿವ ಶಂಕರ್‌ ತಿಳಿಸಿದ್ದಾರೆ.

ಗುರುವಾರ ಫ್ಲ್ಯಾಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಈ ಮನೆಯಲ್ಲಿ ಯಾರೂ ಇರಲಿಲ್ಲ. ಅದರಲ್ಲಿ ವಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಮತ್ತು ಇನ್ನೋರ್ವ ಮಹಿಳೆ ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಕೆಳಗಿನ ರಸ್ತೆಯಲ್ಲಿ ಹೋಗುತ್ತಿದ್ದವರು 7ನೇ ಮಾಳಿಗೆಯ ಕೊಠಡಿಯಿಂದ ದಟ್ಟವಾದ ಹೊಗೆ ಹೊರ ಸೂಸುತ್ತಿರುವುದನ್ನು ಗಮನಿಸಿ ಅಪಾರ್ಟ್‌ಮೆಂಟ್‌ನ ಇತರ ನಿವಾಸಿಗಳಿಗೆ ಮತ್ತು ಆಸು ಪಾಸಿನ ಜನರಿಗೆ ಮಾಹಿತಿ ನೀಡಿ ಬಳಿಕ ಅಗ್ನಿ ಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದ್ದರು. ಅಗ್ನಿ ಶಾಮಕ ದಳದವರು ಕೂಡಲೇ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದ್ದರು. 

ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ಎಲ್‌ಪಿಜಿ ಸಿಲಿಂಡರ್‌ನ ರೆಗ್ಯುಲೇಟರ್‌ ಸ್ವಿಚ್‌ ಆಫ್‌ ಮಾಡಬೇಕು.
 ವಿದ್ಯುತ್‌ ಲೈನ್‌ನ ಮೈನ್‌ ಸ್ವಿಚ್‌ ಆಫ್‌ ಮಾಡಬೇಕು.
 ಟಿ.ವಿ., ಫ್ರಿಜ್‌, ವಾಟರ್‌ ಹೀಟರ್‌, ವಾಷಿಂಗ್‌ ಮೆಶಿನ್‌, ಇಸ್ತ್ರಿಪೆಟ್ಟಿಗೆ ಉಪಕರಣಗಳ ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಬೇಕು
ಸಿಗರೇಟು ಸೇದುವ ಅಭ್ಯಾಸವಿದ್ದವರು ಸಿಗರೇಟು ಸುಟ್ಟು ಉಳಿದ ಭಾಗವನ್ನು ನೀರಿನಲ್ಲಿ ಮುಳುಗಿಸ ಬೇಕು.
 ಮನೆಯಲ್ಲಿ 1 ಕೆ.ಜಿ. ಕಾರ್ಬನ್‌ ಡೈ ಆಕ್ಸೈಡ್‌ (ಬೆಂಕಿ ನಂದಿಸಲು) ಮನೆಯಲ್ಲಿ ಇರಿಸಿಕೊಳ್ಳಬೇಕು.

ಪರಿಸ್ಥಿತಿ ಎದುರಿಸಲು ಸಿದ್ಧ
ಗುಡಿಸಲಿನಿಂದ ಹಿಡಿದು ಅತಿ ಎತ್ತರದ ಬಹು ಮಹಡಿಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿದಾಗ ತುರ್ತಾಗಿ ಧಾವಿಸಿ ಪರಿಸ್ಥಿತಿ ನಿಭಾಯಿಸಲು ಮತ್ತು ನೆರವು ಒದಗಿಸಲು ಅಗತ್ಯ ಸಾಧನಗಳು ಮತ್ತು ಸಿಬಂದಿ ಮಂಗಳೂರಿನ ಅಗ್ನಿ ಶಾಮಕ ಠಾಣೆ ಹೊಂದಿದೆ. ಎಲ್ಲ ಅಗತ್ಯ ವ್ಯವಸ್ಥೆಗಳೊಂದಿಗೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೇವೆ.
– ಟಿ.ಎನ್‌. ಶಿವ ಶಂಕರ್‌,
ಚೀಫ್‌ ಫೈರ್‌ ಆಫೀಸರ್‌, ಮಂಗಳೂರು.

ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.