ಇದು ರಾಮ v/s ಅಲ್ಲಾಹು ನಡುವಿನ ಚುನಾವಣೆ; MLA ಸುನೀಲ್ ಹೇಳಿದ್ದೇನು?
Team Udayavani, Jan 23, 2018, 1:33 PM IST
ಬಂಟ್ವಾಳ:ಇದು ಅಲ್ಲಾಹು ಮತ್ತು ಶ್ರೀರಾಮನ ನಡುವಿನ ಚುನಾವಣೆ. ರಾಮನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ, ಅಲ್ಲಾನನ್ನು ಪ್ರೀತಿಸುವ ವ್ಯಕ್ತಿಯನ್ನು ಗೆಲ್ಲಿಸ್ತೀವಾ ಎಂಬುದು ತೀರ್ಮಾನವಾಗಬೇಕು…ಇದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆ.
ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಮಾತನಾಡುತ್ತ ಈ ಹೇಳಿಕೆ ನೀಡಿರುವುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜೇಶ್ ನಾಯಕ್ ರಾಮನಂತೆ, ಕಾಂಗ್ರೆಸ್ ಅಭ್ಯರ್ಥಿ(ರಮಾನಾಥ್ ರೈ)ಅಲ್ಲಾಹು..ಹೀಗಾಗಿ ಕ್ಷೇತ್ರದ ಜನರು ರಾಮನ ಭಕ್ತ ಬೇಕೋ, ಅಲ್ಲಾನನ್ನು ಪ್ರೀತಿಸುವ ವ್ಯಕ್ತಿ ಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ಹೇಳಿರುವುದಾಗಿ ವರದಿ ವಿವರಿಸಿದೆ.
ಈ ಚುನಾವಣಾ ರಾಮ, ಅಲ್ಲಾ ನಡುವಿನ ಸಮರವಾಗಿದೆ. ಶ್ರೀರಾಮ ಮೌಲ್ಯಗಳಿಗೆ, ಆದರ್ಶಗಳಿಗೆ ಹೆಸರಾದವನು. ಹೀಗಾಗಿ ಕ್ಷೇತ್ರದ ಮತದಾರರು ಯಾರನ್ನು ಗೆಲ್ಲಿಸಬೇಕೆಂಬುದನ್ನು ನಿರ್ಧರಿಸಲಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.