ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ
Team Udayavani, Apr 30, 2018, 11:18 AM IST
ಮಂಗಳೂರು: ಸುಸಜ್ಜಿತ ಚಿಕಿತ್ಸಾ ಸೌಲಭ್ಯದ “ಪ್ರಸಾದ್ ನೇತ್ರಾಲಯ’ ಹಾಗೂ ಡಾ| ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಪಂಪ್‌ವೆಲ್‌ನ ಉಜ್ಜೋಡಿಯಲ್ಲಿ ರವಿವಾರ ಆರಂಭಗೊಂಡಿತು.
ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, 2002ರಲ್ಲಿ ಪ್ರಸಾದ್ ನೇತ್ರಾಲಯವು ಉಡುಪಿಯಲ್ಲಿ ತನ್ನ ಸೇವೆ ಆರಂಭಿಸಿತ್ತು. ಈಗ ಪ್ರಸಾದ್ ನೇತ್ರಾಲಯದ 5ನೇ ಕೇಂದ್ರವು ಪಂಪ್‌ವೆಲ್‌ನ ಉಜ್ಜೋಡಿಯಲ್ಲಿ ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಆಗಿರುವುದರಿಂದ ಈ ಭಾಗದ ಜನರಿಗೆ ಉಪಯೋಗವಾಗಲಿದೆ. ಡಾ| ಕೃಷ್ಣಪ್ರಸಾದ್ ಕೂಡ್ಲು ಮುಖಂಡತ್ವದಲ್ಲಿ ನೂತನ ವೈದ್ಯಕೀಯ ಸಂಸ್ಥೆಯು ಅಭಿ
ವೃದ್ಧಿ ಕಾಣುವ ಮೂಲಕ ಅತ್ಯುತ್ತಮ ಆರೋಗ್ಯ ಸೇವೆ ಕಲ್ಪಿಸುವಂತಾಗಲಿ ಎಂದು ಶುಭ ಹಾರೈಸಿದರು.
ಧರ್ಮಗುರುಗಳಾದ ರೆ|ಫಾ| ಗಾಡ್‌ಫ್ರೇ ಸಲ್ಡಾನ ಮತ್ತು ಹಾಜಿ ಅಬು ಸುಫಿಯಾನ್ ಮದನಿ ಆಶೀರ್ವಚನ
ವಿತ್ತರು. ಜ್ಯೋತಿಷ ವಿದ್ವಾನ್ ಕಬಿಯಾಡಿ ಜಯರಾಮ್ ಆಚಾರ್ಯ ಅಭಿನಂದನ ಭಾಷಣ ಮಾಡಿದರು. ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿದರು. ಡಾ| ಪಿ. ದಯಾನಂದ ಪೈ-ಪಿ. ಸತೀಶ್ ಪೈ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ. ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ಮಣಿಪಾಲ ವಿ.ವಿ. ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕಾರ್ಪೊರೇಟರ್ ಆಶಾ ಡಿ’ಸಿಲ್ವ, ದುಬಾಯಿ ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ ಚೇರ್‌ಮನ್ ವಕ್ವಾಡಿ ಪ್ರವೀಣ್ ಶೆಟ್ಟಿ, ಪ್ರಮುಖರಾದ ಕೆ. ರಘುರಾಮ್ ರಾವ್, ವೀಣಾ ರಘುರಾಮ್ ರಾವ್, ಅರುಣ್ ಶೆಟ್ಟಿ, ಎಂ.ಎ. ಗಫೂರ್, ವಿಲ್ಸನ್ ಥಾಮಸ್, ಸುರೇಂದ್ರ ಶೆಟ್ಟಿ, ಪಿ. ಸುಕುಮಾರ್ ಪಾಲ್ಗೊಂಡಿದ್ದರು.
ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಕೂಡ್ಲು, ರಶ್ಮಿ ಕೃಷ್ಣಪ್ರಸಾದ್, ಪ್ರಸಾದ್ ನೇತ್ರಾಲಯದ ತಜ್ಞ ವೈದ್ಯರು ಮತ್ತು ನಿರ್ದೇಶಕರಾದ ಡಾ| ವಿಕ್ರಮ್ ಜೈನ್, ಡಾ| ಚಿನ್ನಪ್ಪ ಎ.ಜಿ., ಡಾ| ಹರೀಶ್ ಶೆಟ್ಟಿ, ಡಾ| ಜಾಕೋಬ್ ಚಾಕೊ ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಾಸ್ತಾವಿಸಿದ ಡಾ| ಕೃಷ್ಣ ಪ್ರಸಾದ್ ಕೂಡ್ಲು ಮಾತನಾಡಿ, ಕಣ್ಣಿಗೆ ಸಂಬಂಧಿಸಿದ ಎಲ್ಲ ವಿಭಾಗದ ತಜ್ಞ ವೈದ್ಯರನ್ನು ಒಳಗೊಂಡಂತೆ ತಾಂತ್ರಿಕ ಹಾಗೂ ಇತರ ಸಿಬಂದಿಗಳ ತಂಡಗಳೊಂದಿಗೆ ಮಂಗಳೂರಿನಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವ ಆಸ್ಪತ್ರೆ ಇದಾಗಲಿದೆ. ನೂತನ ಆಸ್ಪತ್ರೆಯಲ್ಲಿ ಡಾ| ದಯಾನಂದ ಪೈ ಮತ್ತು ಸತೀಶ್ ಪೈ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ ಅಥವಾ ರಿಯಾಯಿತಿ ದರದ ಚಿಕಿತ್ಸೆ ಚಾಲ್ತಿಯಲ್ಲಿರುತ್ತದೆ ಎಂದರು.
ಅತ್ಯುತ್ತಮ ಕಣ್ಣಿನ ಸೇವೆಯ ಗುರಿ
ಡಾ| ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಕೈಗೆಟಕುವ ದರದಲ್ಲಿ ಅತ್ಯುತ್ತಮ ಕಣ್ಣಿನ ಸೇವೆಯನ್ನು ಮಂಗಳೂರು ವ್ಯಾಪ್ತಿಯ ಜನರಿಗೆ ನೀಡುವ ಆಶಯದೊಂದಿಗೆ ನೇತ್ರಾಲಯ ಆರಂಭಿಸಲಾಗುತ್ತಿದೆ. ಕ್ಯಾಟರಾಕ್ಟ್ ವಿಭಾಗ, ಗ್ಲಕೋಮ ವಿಭಾಗ, ಲಾಸಿಕ್-ಸ್ಮೈಲ್ ಒಳಗೊಂಡಂತೆ ರಿಫ್ರಾಕ್ಟಿವ್ ಸರ್ಜರಿ ವಿಭಾಗ, ಮಕ್ಕಳ ಕಣ್ಣಿನ ವಿಭಾಗ, ಮೆಳ್ಳೆಗಣ್ಣು ವಿಭಾಗ, ರೆಟಿನಾ ಕಣ್ಣಿನ ನರ ವಿಭಾಗ, ಮಧುಮೇಹ ಕಣ್ಣಿನ ಚಿಕಿತ್ಸಾ ವಿಭಾಗ, ಆಕ್ಯುಲೋಪ್ಲಾಸ್ಟಿ, ಕಣ್ಣಿನ ಕರಿಗುಡ್ಡೆ ಚಿಕಿತ್ಸಾ ವಿಭಾಗ, ನೇತ್ರ ಬ್ಯಾಂಕ್ ವಿಭಾಗಗಳೊಂದಿಗೆ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ.
ಆರ್ಥಿಕವಾಗಿ ಹಿಂದುಳಿದವರಿಗೂ ನೇತ್ರ ಚಿಕಿತ್ಸೆ ನೀಡುತ್ತಿದೆ. ರಾಜ್ಯದ ಆರು ಜಿಲ್ಲೆಗಳು, ನೆರೆಯ ಕೇರಳ ಮತ್ತು ಗೋವಾ ರಾಜ್ಯವನ್ನು ಒಳಗೊಂಡಂತೆ ನೇತ್ರಜ್ಯೋತಿ ಟ್ರಸ್ಟ್ ಮೂಲಕ ಈ ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.