ಮಂಗಳೂರು: ಟ್ಯಾಂಕರ್ ನೀರಿಗೆ ಬೇಡಿಕೆ
Team Udayavani, May 17, 2019, 11:34 AM IST
ಮಂಗಳೂರು: ನಗರದಲ್ಲಿ ರೇಷನಿಂಗ್ ನಿಯಮದಂತೆ ಗುರುವಾರ ಬೆಳಗ್ಗಿನಿಂದ ನೀರು ಸರಬರಾಜು ಆಗುತ್ತಿದ್ದು, ಮೇ 20ರ ಬೆಳಗ್ಗೆ 6ರ ವರೆಗೆ ಪೂರೈಕೆಯಾಗಲಿದೆ. ಈ ವೇಳೆಯಲ್ಲಿಯೂ ಮಳೆಯಾಗದಿ ದ್ದರೆ ಮೇ 20ರ ಬಳಿಕ ನಿರಂತರ 4 ದಿನ ನೀಡಲು ಮತ್ತೆ 4 ದಿನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಗುರುವಾರ ಸಂಜೆ ವೇಳೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 3.77 ಮೀ. ಇದೆ. ನಗರದ ಬಹುತೇಕ ಮನೆಗಳಿಗೆ ನೀರಿನ ಕೊರತೆ ಮುಂದುವರಿದಿದೆ. ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿ ಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದೆ; ಆದರೆ ಟ್ಯಾಂಕರ್‌ಗಳಿಗೂ ಬೇಕಾದಷ್ಟು ನೀರು ಸದ್ಯ ಲಭಿಸುತ್ತಿಲ್ಲ.
ರೇಷನಿಂಗ್ ವ್ಯವಸ್ಥೆ ಜಾರಿ ಬಳಿಕ ಕೆಲವು ಪ್ರದೇಶಗಳಿಗೆ ಸರಬರಾಜು ಸಮರ್ಪಕವಾಗಿ ಆಗದಿರುವುದರಿಂದ ಈ ಪ್ರದೇಶಗಳ ಜನರು ಟ್ಯಾಂಕರ್ ನೀರು ಅವಲಂಬಿಸುವುದು ಅನಿವಾರ್ಯ ವಾಗಿದೆ. ಖಾಸಗಿ ಟ್ಯಾಂಕರ್‌ಗಳಿಗೆ ಕದ್ರಿ ಕಂಬಳದಲ್ಲಿರುವ ಬಾವಿಯ ಜಲ ಮೂಲವೇ ಪ್ರಧಾನವಾಗಿದೆ. ಆದರೆ ಈಗ ಅಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಕೆಲವು ಕಡೆಗೆ ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕರ್ ಚಲಿಸಲಾಗದ ಕಡೆ ಪಿಕಪ್/ 407 ವಾಹನದ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಉಚಿತ ಪೂರೈಕೆ
ನಗರದಲ್ಲಿ ನೀರು ಅಭಾವವಿರುವ ಮನೆಗಳಿಗೆ “ಟೀಮ್ ಗರೋಡಿ’ ಸಂಘಟನೆ ನೇತೃತ್ವದಲ್ಲಿ ಉಚಿತ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗಿದೆ. ನೀರಿನ ಕೊರತೆ ಎದುರಾದ ಹಿನ್ನೆಲೆ ಯಲ್ಲಿ ನಗರದ ಕೆಲವು ಹೊಟೇಲ್‌ಗಳಲ್ಲಿ ಕಾಫಿ ತಿಂಡಿಯನ್ನು ಪೇಪರ್ ಪ್ಲೇಟ್ ಹಾಗೂ ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ನೀಡುತ್ತಿದ್ದಾರೆ. ಮನಪಾ ನೇತೃತ್ವದ ಮಂಗಳ ಈಜುಕೊಳಕ್ಕೂ ನೀರಿನ ಕೊರತೆ ತಟ್ಟಿದ್ದು, ಕೊಳಕ್ಕೆ ನೀರು ಲಭ್ಯತೆಗೂ ಆತಂಕ ಎದುರಾಗಿದೆ. ಈ ಹಿಂದೆ ಇದೇ ಸಮಸ್ಯೆಯಿಂದಾಗಿ ಕೆಲವು ಸಮಯ ಈಜುಕೊಳವನ್ನು ಮುಚ್ಚಲಾಗಿತ್ತು.
ಶೀಘ್ರದಲ್ಲಿ ಮಳೆಯಾಗುವ ಮೂಲಕ ನಗರದಲ್ಲಿ ನೀರಿನ ಕೊರತೆ ನಿವಾರಣೆಯಾಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.
ಮಳೆಗಾಗಿ ಪ್ರಾರ್ಥಿಸಲು ಬಿಷಪ್ ಕರೆ
ಮುಂಗಾರು ಮಳೆಯ ಅಭಾವ ದಿಂದ ತೀವ್ರ ನೀರಿನ ಸಮಸ್ಯೆ ಉದ್ಭವಿಸಿರುವ ಈ ಸಮಯದಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಅವರು, ಎಲ್ಲ ಕ್ರೈಸ್ತ ಧರ್ಮ ಕೇಂದ್ರಗಳು ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗ ಳಲ್ಲಿ ಮೇ 18 ಹಾಗೂ 19ರಂದು ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲು ಕರೆ ನೀಡಿದ್ದಾರೆ. ದೇವರಲ್ಲಿ ವಿಶ್ವಾಸದಿಂದ ಮೊರೆ ಹೋದಾಗ ಬೇಡಿ ದನ್ನು ಖಂಡಿವಾಗಿಯೂ ನೆರವೇರಿಸು ತ್ತಾರೆ ಎಂದು ಬಿಷಪ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.