ಸುರತ್ಕಲ್: ಅವಳಿ ಕರುವಿಗೆ ಜನ್ಮ ನೀಡಿದ ದನ
Team Udayavani, Jul 16, 2017, 3:55 AM IST
ಸುರತ್ಕಲ್: ತಡಂಬೈಲ್ ಕುಲಾಲ ಭವನದ ಎದುರು ಗಣಪತಿಮಯ್ಯ ಅವರ ಮನೆಯಲ್ಲಿ ದನವೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ.
ಸಾಮಾನ್ಯವಾಗಿ ದನ ಏಕಕಾಲಕ್ಕೆ ಎರಡು ಕರುಗಳಿಗೆ ಜನ್ಮ ಕೊಡುವುದಿಲ್ಲ. ಆದರೆ ಜುಲೈ 9ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಅವರು ತಮ್ಮ ಮನೆಯ ಕೊಟ್ಟಿಗೆಗೆ ಹೋಗುವಾಗ ಅವರ ಗೌರಿ ಹೆಸರಿನ ದನವು ಮೊದಲ ಗಂಡು ಕರುವಿಗೆ ಜನ್ಮ ನೀಡಿದ್ದಳು. ಅಲ್ಲಿಗೆ ಸುಸೂತ್ರವಾಗಿ ಹೆರಿಗೆ ಆಯಿತಲ್ಲ ಎಂದು ಮನೆಯವರೆಲ್ಲ ಸಂತಸ ಪಡುತ್ತಿರುವಾಗ ಮತ್ತೂಂದು ಅಚ್ಚರಿ ಅವರನ್ನು ಕಾಯುತ್ತಿತ್ತು. ಸುಮಾರು ಏಳು ಗಂಟೆಯ ಹೊತ್ತಿಗೆ ಗೌರಿ ಮತ್ತೂಂದು ಕರುವಿಗೆ ಜನ್ಮ ನೀಡಿದ್ದಳು. ಈ ವಿಸ್ಮಯದಿಂದ ಎಲ್ಲರೂ ಮೂಕವಿಸ್ಮಿತರಾಗಿ ಹೋಗಿದ್ದರು. ಸ್ವತಃ ಚುಚ್ಚುಮದ್ದು ನೀಡಿ ದನದ ಚಿಕಿತ್ಸೆ ಮಾಡಿದ ವೈದ್ಯರಿಗೂ ಆಶ್ಚರ್ಯವಾಗಿದೆ.
ಇಂತಹ ಘಟನೆ ಹಿಂದೆ ಯಾವತ್ತಾದರೂ ಆಗಿರಬಹುದು. ಆದರೆ ಇದು ಅಪರೂಪದಲ್ಲಿ ಅಪರೂಪದ ಸಂಗತಿ. ಸಾಮಾನ್ಯವಾಗಿ ಗೋವುಗಳು ಒಂದು ಕರುವಿಗೆ ಜನ್ಮಕೊಡುವುದು ಸಾಮಾನ್ಯ ಪ್ರಕ್ರಿಯೆ. ನಮ್ಮ ದನಕ್ಕೆ ಕೂಡ ಇಲ್ಲಿಯವರೆಗೆ ಐದು ಬಾರಿ ಹೆರಿಗೆ ಆಗಿದೆ. ಐದು ಬಾರಿಯೂ ಇಂತಹ ವಿಸ್ಮಯ ನಡೆದಿಲ್ಲ. ಎರಡು ಕರು ಮತ್ತು ತಾಯಿ ಆರೋಗ್ಯವಾಗಿದೆ ಎಂದು ಮನೆ ಯ ವರು ತಿಳಿಸಿದ್ದಾರೆ.
ಅವಳಿ ಕರುಗಳಿಗೆ ಜನ್ಮ ನೀಡಿದ ಗೋವನ್ನು ನೋಡಲು ತುಂಬಾ ಜನ ಕುತೂಹಲಿಗರು ಮನೆಗೆ ಆಗಮಿಸುತ್ತಿದ್ದಾರೆ.
ಆಸ್ಟಿನ್ ತಳಿಯ ಈ ದನ ದಿನಕ್ಕೆ ಆರು ಲೀಟರ್ ಹಾಲನ್ನು ನೀಡುತ್ತದೆ. ಐದು ಬಾರಿಯೂ ಇಂಜೆಕ್ಷನ್ ನೀಡಿಯೇ ಹೆರಿಗೆ ಮಾಡಿಸಲಾಗಿದೆ. ಈ ಬಾರಿಯೂ ಹಾಗೆ ಮಾಡಲಾಗಿತ್ತು. ಒಟ್ಟಿನಲ್ಲಿ ಎರಡು ಹೊಸ ಸದಸ್ಯರ ಆಗಮನದಿಂದ ಗಣಪತಿ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.