![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 18, 2021, 2:18 AM IST
ಸುರತ್ಕಲ್: ಸಾಮಾಜಿಕ ಜಾಲತಾಣದಲ್ಲಿ ಆದ ಪರಿಚಯವನ್ನೇ ಬಳಸಿಕೊಂಡು ವ್ಯಕ್ತಿಯೊಬ್ಬನನ್ನು ಹನಿಟ್ರ್ಯಾಪ್ ಮಾಡಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ಸಹಿತ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕುಂಬಳೆ ಮೂಲದ ಯುವಕ ನೊಬ್ಬನಿಗೆ ಫೇಸ್‌ಬುಕ್‌ನಲ್ಲಿ ಕೃಷ್ಣಾ ಪುರದ ಇಬ್ಬರು ಮಹಿಳೆಯರ ಪರಿಚಯವಾಗಿತ್ತು. ಹಲವಾರು ದಿನಗಳ ಕಾಲ ಮೆಸೇಜ್ ಮೂಲಕ ವಿಶ್ವಾಸಗಳಿಸಿಕೊಂಡ ಬಳಿಕ ಯುವಕನನ್ನು ಸುರತ್ಕಲ್ ಸಮೀಪದ ಕೃಷ್ಣಾಪುರಕ್ಕೆ ಬರುವಂತೆ ತಿಳಿಸಿದ್ದರು. ಮಹಿಳೆಯರೊಂದಿಗೆ ಮತ್ತಿಬ್ಬರು ಯುವಕರು ಸೇರಿಕೊಂಡು ಆ ಬಳಿಕ ಯುವಕನನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಆತನನ್ನು ವಿವಸ್ತ್ರಗೊಳಿಸಿ ಫೋಟೋ ತೆಗೆದು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ ಆತನ ಬಳಿ ಅಷ್ಟು ಹಣ ಇಲ್ಲದ ಕಾರಣ ಕಾರನ್ನು ಒತ್ತೆಯಿಟ್ಟುಕೊಂಡು ಯುವಕನನ್ನು ಕಳಿಸಿದ್ದರು. ಹಣಕ್ಕಾಗಿ ಕಿರುಕುಳ ಹೆಚ್ಚಾದ್ದರಿಂದ ಯುವಕ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದ. ತನ್ನ ಬಳಿ ಇರುವ 30 ಸಾವಿರ ರೂ. ನೀಡುವುದಾಗಿ ಯುವಕ ಆರೋಪಿಗಳನ್ನು ಪಂಪ್‌ವೆಲ್‌ಗೆ ಬರುವಂತೆ ಸೂಚಿಸಿದ್ದ. ಹಣ ಪಡೆಯಲು ಬಂದ ಸಂದರ್ಭ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್, ಎಸಿಪಿ ಬೆಳ್ಳಿಯಪ್ಪ ಅವರು ಠಾಣೆಗೆ ಭೇಟಿ ನೀಡಿ ತನಿಖೆಗೆ ಆದೇ ಶಿ ಸಿದ್ದು, ತನಿಖೆ ಮುಂದುವರಿದಿದೆ.
You seem to have an Ad Blocker on.
To continue reading, please turn it off or whitelist Udayavani.