ಸುರತ್ಕಲ್: ಸ್ಥಳೀಯ ವಾಹನಗಳಿಗೂ ಟೋಲ್‌ಗೆ ವಿರೋಧ
Team Udayavani, Feb 28, 2019, 12:30 AM IST
ಸುರತ್ಕಲ್: ಸುರತ್ಕಲ್‌ನ ಎನ್‌ಐಟಿಕೆ ಟೋಲ್ ಪ್ಲಾಜಾದಲ್ಲಿ ಮಾ. 1ರಿಂದ ಸ್ಥಳೀಯ ಖಾಸಗೀ ವಾಹನಗಳಿಗೂ ಟೋಲ್ ವಿಧಿಸುವುದನ್ನು ನಾಗರಿಕ ಸಮಿತಿ ಮಂಗಳೂರು ವಿರೋಧಿ ಸಿದೆ.
ಬುಧವಾರ ಮಂಗಳೂರು ಹೆದ್ದಾರಿ ಪ್ರಾಧಿ ಕಾರದ ಕಚೇರಿಯಲ್ಲಿ ಟೋಲ್ ಪ್ಲಾಜಾದ ಗುತ್ತಿಗೆ ಪಡೆದ ಕಂಪೆನಿ ಅ ಧಿಕಾರಿಗಳು, ನಾಗರಿಕ ಸಮಿತಿ ಹಾಗೂ ಹೆದ್ದಾರಿ ಅ ಧಿಕಾರಿಗಳ ಸಭೆ ನಡೆಯಿತು. ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ಥಳೀಯ ವಾಹನಗಳಿಗೆ ಕಳೆದ ಹಲವಾರು ವರ್ಷಗಳಿಂದ ಟೋಲ್ ಪಡೆಯದೆ ವಿನಾಯಿತಿ ನೀಡಲಾಗಿದೆ.
ಸ್ಥಳೀಯರಿಗೆ ಪರ್ಯಾಯ ರಸ್ತೆ ಇಲ್ಲದಿರುವ ಕಾರಣ ಹೆದ್ದಾರಿಯನ್ನೇ ನೆಚ್ಚಿಕೊಳ್ಳಬೇಕಿದೆ. ಸ್ಥಳೀಯ ಜನಪ್ರತಿನಿಧಿ ಗಳು, ಹೆದ್ದಾರಿ ಅಧಿ ಕಾರಿಗಳು, ಜಿಲ್ಲಾ ಧಿಕಾರಿಗಳ ಸಮ್ಮುಖ ಸ್ಥಳೀಯರಿಗೆ ವಿನಾಯಿತಿ ನೀಡುವ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ನಷ್ಟದ ನೆಪವೊಡ್ಡಿ ಶುಲ್ಕ ಪಡೆಯಲು ಮುಂದಾಗಿರುವುದು ಖಂಡನಾರ್ಹ ಎಂದರು.
ಗುತ್ತಿಗೆ ಕಂಪೆನಿ ಸ್ಥಳೀಯರಿಗೆ ವಿನಾಯಿತಿ ನೀಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದ್ದರಿಂದ ಗುರುವಾರ ಪ್ರತಿಭಟನೆ ನಡೆಸಲಾಗುವುದು ಎಂದರು.
ವಿಜಯ್‌ಕುಮಾರ್, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ರಾಘವೇಂದ್ರ ಟಿ.ಎನ್., ಸುಧಾಕರ ಪೂಂಜಾ, ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.