ಸುರತ್ಕಲ್: ಗ್ರಾಮ ದೇವಸ್ಥಾನದ ರಸ್ತೆಗೆ ಕಾಯಕಲ್ಪಕ್ಕೆ ಸಿದ್ಧತೆ
Team Udayavani, May 18, 2018, 10:21 AM IST
ಸುರತ್ಕಲ್ : ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲು ನೂತನ ಯೋಜನೆ ಸಿದ್ಧ ಪಡಿಸಲಾಗಿದೆ. ಸುತ್ತಮುತ್ತಲಿನ ರಸ್ತೆ ಬಹುತೇಕ ಕಾಂಕ್ರೀಟ್ ಕಾಮಗಾರಿ ನಡೆದರೂ ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಈ ರಸ್ತೆಗೆ ಅಭಿವೃದ್ಧಿಯ ಭಾಗ್ಯ ಬಂದಿರಲಿಲ್ಲ.
ಊರಿನ ಗ್ರಾಮ ದೇವಾಲಯಕ್ಕೆ ಸೋಮವಾರ, ಶನಿವಾರ ಸಹಿತ ಭಕ್ತರು, ನಿತ್ಯ ಸುರತ್ಕಲ್ ಬೀಚ್‌ಗೆ ಈ ಮಾರ್ಗವಾಗಿ ನೂರಾರು ಮಂದಿ ಆಗಮಿಸುತ್ತಾರೆ. ಆದರೆ ಹೊಂಡ ಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ವಾಹನವನ್ನು ಸರ್ಕಸ್ ಮಾದರಿಯಲ್ಲಿ ಚಲಾಯಿಸುತ್ತಾ ಸಾಗಬೇಕಾಗಿದೆ. ಚುನಾವಣೆಯ ಘೋಷಣೆ ಬಳಿಕ ಈ ರಸ್ತೆಯ ಕಾಮಗಾರಿ ಆರಂಭಕ್ಕೆ ಸಮಸ್ಯೆಯಾಯಿತು.
ಇದೀಗ ಸುರತ್ಕಲ್ ಹೆದ್ದಾರಿಯಿಂದ ಬೀಚ್ ಆಗಿ ರೆಡ್‌ರಾಕ್ ಮೂಲಕ ಹೊರ ಬರುವಂತೆ ಹೊಸ ರಸ್ತೆ ನಿರ್ಮಾಣವಾಗಲಿದೆ. ಎನ್‌ಐಟಿಕೆ ಬೀಚ್ ರಸ್ತೆ ಈಗಾಗಲೇ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ದೇವಸ್ಥಾನದ ರಸ್ತೆಯನ್ನು ಸುಸಜ್ಜಿತಗೊಳಿಸಲು ಹದಿನೈದು ದಿನಗಳ ಒಳಗಾಗಿ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಥಳೀಯ ಕಾರ್ಪೊರೇಟರ್ ರೇವತಿ ಪುತ್ರನ್ ಉದಯವಾಣಿಗೆ ತಿಳಿಸಿದರು.
ಐದು ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ
ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ರಸ್ತೆಗೆ ಕಾಮಗಾರಿ ಟೆಂಡರ್ ಆಗಿದ್ದು , ಐದು ಲಕ್ಷ ರೂ.
ವೆಚ್ಚದಲ್ಲಿ ಕಾಂಕ್ರೀಟ್ ಕಾಮಗಾರಿ, ಉಳಿದೆಡೆ ಡಾಮರು ರಸ್ತೆ ನಿರ್ಮಿಸಿ, ಬೀಚ್ ಹಾಗೂ ದೇವಸ್ಥಾನಕ್ಕೆ ಬರುವವರಿಗೆ ಅನುಕೂಲ ಮಾಡಿಕೊಡಲಾಗುವುದು.
– ಖಾದರ್,
ಎಂಜಿನಿಯರ್, ಮನಪಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.