ಸುರತ್ಕಲ್: ರಸ್ತೆ ದುರವಸ್ಥೆ
Team Udayavani, Oct 9, 2017, 10:49 AM IST
ಸುರತ್ಕಲ್: ವಾಹನ ಓಡಾಟಕ್ಕೆ ಕಷ್ಟಕರವಾದ ಸ್ಥಿತಿಯಲ್ಲಿರುವ ಸುರತ್ಕಲ್, ಕುಳಾಯಿ, ಬೈಕಂಪಾಡಿ ಹೆದ್ದಾರಿಯನ್ನು ದುರಸ್ತಿ ಮಾಡಿಕೊಡಿ ಎಂದು ಹೆದ್ದಾರಿಗೆ ಇಲಾಖೆಗೆ ಮನವಿ ಮಾಡಿ ಸುಸ್ತಾದ ಇಲ್ಲಿನ ಆಪತ್ಭಾಂಧವ ಸಮಾಜ ಸೇವಾ ಸಂಸ್ಥೆಯ ಸದಸ್ಯರು ತಾವೇ ಶ್ರಮದಾನದ ಮೂಲಕ ಕಲ್ಲು, ಜಲ್ಲಿ ಹುಡಿ ಹಾಕಿ ತಕ್ಕಮಟ್ಟಿಗೆ ಹೊಂಡಗಳನ್ನು ಮುಚ್ಚಿ ಶ್ಲಾಘನಾರ್ಹ ಕೆಲಸ ಮಾಡಿದರು.
ಸುರತ್ಕಲ್ ವಿದ್ಯಾದಾಯಿನಿ ಮುಂಭಾಗದ ಮರಣ ಗುಂಡಿ ಹಲವಾರು ದಿನಗಳಿಂದ ಬಾಯ್ದೆರೆದು ನಿಂತಿತ್ತು. ಇದನ್ನು ಈ ಸಂಸ್ಥೆಯ ಸದಸ್ಯರು ರವಿವಾರ ಮುಚ್ಚುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು. ಇಲ್ಲಿ ರಸ್ತೆ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪಾಲಿಕೆ ಏನೂ ಮಾಡುವಂತಿರಲಿಲ್ಲ. ಪ್ರತಿ ಮಳೆಗಾಲ ಆರಂಭವಾದಾಗ ಹೊಂಡ ಏಳುತ್ತಿದ್ದು, ಮಳೆ ನಿಂತ ಮೇಲೂ ದುರಸ್ತಿಯಾಗುತ್ತಿಲ್ಲ. ಸಂಸ್ಥೆಯ ಉಮೇಶ್ ದೇವಾಡಿಗ
ಇಡ್ಯಾ, ಪ್ರಜ್ವಲ್ ಶೆಟ್ಟಿ, ದಯಾನಂದ ಶೆಟ್ಟಿ ಕಡಂಬೋಡಿ, ಹೇಮಚಂದ್ರ ಶೆಟ್ಟಿ, ಗಂಗಾಧರ ಪುತ್ರನ್ ಕೃಷ್ಣಾಪುರ,
ದಯಾನಂದ ಶೆಟ್ಟಿಗಾರ್ ಕೃಷ್ಣಾಪುರ, ಮೋಹನ್ಕೃಷ್ಣ ಮೊದಲಾದವರು ಶ್ರಮದಾನದಲ್ಲಿ ಭಾಗಿಯಾದರು.
ಸಾರ್ವಜನಿಕರ ಹಿತದೃಷ್ಟಿಯಿಂದ ದುರಸ್ತಿ
ಸುರತ್ಕಲ್ನಿಂದ ಬೈಕಂಪಾಡಿವರೆಗೆ ಹೆದ್ದಾರಿ, ಸರ್ವಿಸ್ ರಸ್ತೆ ಗಮನಿಸಿದರೆ ಯಾವರೀತಿ ಕಳಪೆ ಕಾಮಗಾರಿ ಆಗಿದೆ ಎಂದು ತಿಳಿಯುತ್ತದೆ. ಒಂದು ಮಳೆಯನ್ನೂ ಹೆದ್ದಾರಿ ತಾಳಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೂ ಅಪಾಯಕಾರಿಯಾಗಿರುವ ಇದನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡಿ ಎಂದು ಕೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಸಂಸ್ಥೆಯ ಸದಸ್ಯರು ಹಾಗೂ ಸ್ಥಳೀಯ ಕೆಲವು ರಿಕ್ಷಾ ಚಾಲಕರು ದಿನ ಸಾರ್ವಜನಿಕರ ಹಿತದೃಷ್ಟಿಯಿಂದ ಈ ದುರಸ್ತಿಗೆ ಮುಂದಾದೆವು.
–ಎನ್.ಎಸ್. ಉಮೇಶ್ ದೇವಾಡಿಗ ಇಡ್ಯಾ, ಸ್ಥಾಪಕಾಧ್ಯಕ್ಷರು,
ಆಪತ್ಭಾಂಧವ ಸಮಾಜ ಸೇವಾ ಸಂಸ್ಥೆ, ಸುರತ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.