Surathkal: ಶಾಲೆಯ ಜಾಗದಲ್ಲಿ ಆಶ್ರಯ ವಸತಿ! ಖಾಸಗಿ ಜಮೀನಿನಲ್ಲಿ ನಡೆಯುತ್ತಿದೆ ಸರಕಾರಿ ಶಾಲೆ

Team Udayavani, Nov 28, 2023, 7:05 AM IST

Surathkal: ಶಾಲೆಯ ಜಾಗದಲ್ಲಿ ಆಶ್ರಯ ವಸತಿ! ಖಾಸಗಿ ಜಮೀನಿನಲ್ಲಿ ನಡೆಯುತ್ತಿದೆ ಸರಕಾರಿ ಶಾಲೆ

ಸುರತ್ಕಲ್‌: ಸುರತ್ಕಲ್‌ ಸಮೀಪದ ಜನತಾ ಕಾಲನಿಯಲ್ಲಿ ಆಶ್ರಯ ವಸತಿ ಸಮುಚ್ಚಯ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆಯ ಬಹುಪಾಲು ಜಾಗ ಖಾಸಗೀ ಮಾಲಕತ್ವದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಶಾಲೆಗೆ ಮೀಸಲು ಇರಿಸಲಾದ ಜಾಗದಲ್ಲಿ ಇದೀಗ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಡವರಿಗೆ ಹಂಚಲು ತ್ರಿಪ್ಲಸ್‌ ಒನ್‌ ಆಶ್ರಯ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ.

ಇಲ್ಲಿನ ಜನತಾ ಕಾಲನಿಯಲ್ಲಿ ಶಾಲೆ ಸೌಲಭ್ಯಕ್ಕಾಗಿ ಶಿಕ್ಷಣ ಇಲಾಖೆ ಇಡ್ಯಾ ಗ್ರಾಮದ ಸರ್ವೇ ನಂಬ್ರ 16ರಲ್ಲಿ ತಲಾ 1 ಎಕ್ರೆ ಹಾಗೂ 60 ಸೆಂಟ್ಸ್‌ ಜಾಗ ಎಡಿಸ್‌ಸಿಆರ್‌ನಂತೆ 169/94-95ರಂತೆ ಸರಕಾರಿ ಜಮೀನು ಕಾದಿರಿಸಲಾಗಿತ್ತು. ಇದೀಗ ಶಾಲೆಯ ಮೈದಾನಕ್ಕಿಟ್ಟಿದ್ದ ಜಾಗವನ್ನೇ ಹಂಚಿರುವುದು ಕಂಡು ಬಂದಿದೆ. 94ಸಿ ಅಡಿಯಲ್ಲಿ ಒಟ್ಟು 13 ಫಲಾನುಭವಿಗಳಿಗೆ ಶಾಲೆಯ ಜಾಗವನ್ನೇ ನಿವೇಶನವಾಗಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ಹಿಂದೂ ಮಂದಿರಕ್ಕೆ ನೀಡಿದ್ದ ಜಾಗವೂ ಪರಭಾರೆಯಾಗಿ ಇದೀಗ ಆಶ್ರಯ ವಸತಿ ಸಮುಚ್ಚಯ ತಲೆ ಎತ್ತುತ್ತಿದೆ.

ಪ್ರಸ್ತುತ ಶಾಲೆಯ ವ್ಯಾಪ್ತಿಯೊಳಗೆ ಸರ್ವೇ ನಂಬ್ರ 161/1ರಲ್ಲಿ 45 ಸೆಂಟ್ಸ್‌, ಹಾಗೂ 161/2ರಲ್ಲಿ 10 ಸೆಂಟ್ಸ್‌ ಖಾಸಗೀ ಜಮೀನು ಕೃಷ್ಣಾಪುರ ಮಠದ ದೇವರ ಖಾತೆಯಲ್ಲಿದೆ. ಉಳಿದಂತೆ ಪ್ರಸ್ತುತ ಶಾಲೆಯ ಆಟದ ಮೈದಾನವಿರುವ 161/1ರಲ್ಲಿ 22 ಸೆಂಟ್ಸ್‌, 161/2ರಲ್ಲಿ 49 ಸೆಂಟ್ಸ್‌ ಬೋಗಿ (ಗೇಣಿ) ಮಾಡುವವರ ಹೆಸರಿನಲ್ಲಿದ್ದು, ಕಮಲಾ ಶೆಡ್ತಿ ಮತ್ತಿತರರ ಹೆಸರಿನಲ್ಲಿ ಆರ್‌ಟಿಸಿಯಲ್ಲಿ ದಾಖಲಾಗಿದೆ.

ಸರಕಾರ ಮೀಸಲಿರಿಸಿದ ಜಾಗದಲ್ಲಿ ವಸತಿ ಸಮುಚ್ಚಯ, ನಿವೇಶನ ಬಂದಿ ರುವುದರಿಂದ ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ, ಕ್ರೀಡೆಗೆ ಪರ್ಯಾಯ ಸ್ಥಳವನ್ನು ನೀಡುವುದು ಅಗತ್ಯವಾಗಿದೆ.

ಗೊತ್ತಾದ ಬಗೆ…
ಒಂದು ತಿಂಗಳ ಹಿಂದೆ ಇಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಖಾಸಗೀ ಮನೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ಸಂಘಟನೆಯವರು ಹೋರಾಟ ಸಮಿತಿ ರಚಿಸಿ ಶಾಲೆಯ ಆಟದ ಮೈದಾನ ಉಳಿಸಿ ಎಂದು ಹೋರಾಟ ಆರಂಭಿಸಿದ್ದರು. ಶಾಲೆಯ ಎಸ್‌ಡಿಎಂಸಿ ಸಹಿತ ಸಾರ್ವಜನಿಕರು ತನಿಖೆಗೆ ಆಗ್ರಹಿಸಿದಾಗ ತಹಶೀಲ್ದಾರ್‌ ಅವರು ಭೂ ಸರ್ವೇಗೆ ಆದೇಶಿಸಿ ವರದಿ ನೀಡುವಂತೆ ತಿಳಿಸಿದ್ದರು. ಅದರಂತೆ ತನಿಖೆ, ಸರ್ವೇ ನಡೆದಾಗ ಶಾಲೆ ಮೈದಾನಕ್ಕೆ ಮೀಸಲು ಇರಿಸಿದ ಜಾಗವೇ ಇದೀಗ ಅನ್ಯ ಉದ್ದೇಶಗಳಿಗೆ ಬಳಕೆಯಾಗಿರುವುದು ಬಯಲಿಗೆ ಬಂದಿದೆ.

ಶಾಲೆಯ ಮೈದಾನದಲ್ಲಿ ಖಾಸಗೀ ಕಟ್ಟಡ ನಿರ್ಮಾಣ ಕುರಿತಂತೆ ತಹಶೀಲ್ದಾರರ ಸೂಚನೆಯಂತೆ ಕಂದಾಯ ಇಲಾಖೆಯ ದಾಖಲೆ ಪರಿಶೀಲಿಸಿ, ಸ್ಥಳದ ಸರ್ವೇ ನಡೆದು ವರದಿ ನೀಡಲಾಗಿದೆ.
– ನವೀನ್‌,
ಉಪತಹಶೀಲ್ದಾರ್‌, ಸುರತ್ಕಲ್‌

ಟಾಪ್ ನ್ಯೂಸ್

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

6

Mangaluru: ಇ ರಿಕ್ಷಾಗಳಿಗೆ ಮಹಿಳಾ ಸಾರಥಿ ಪ್ರಯೋಗ ವಿಫ‌ಲ

5

Mangaluru: ಮುಂದಿನ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಮುಲ್ಲೈ ಮುಗಿಲನ್‌

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

1

Ullal: ಸೋಮೇಶ್ವರ ಬೀಚ್‌; ಮೂಲಸೌಕರ್ಯ ಕಣ್ಮರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

9-ckm

Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.