![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 31, 2022, 7:38 AM IST
ಸುರತ್ಕಲ್: ಸುರತ್ಕಲ್ ಎನ್‌ಐಟಿಕೆ ಟೋಲ್‌ನಲ್ಲಿ ಶುಲ್ಕ ಸಂಗ್ರಹಕ್ಕೆ ಮತ್ತೆ ಒಂದು ವರ್ಷಕ್ಕೆ ಟೆಂಡರ್ ಕರೆದಿರುವ ಮಾಹಿತಿ ಸರಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಾಗಿದೆ.
ವರ್ಷಕ್ಕೆ 49.05 ಕೋಟಿ ರೂ.ಗಳಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ಸೆಂಟ್ರಲ್ ಇ ಪ್ರೊಕ್ಯೂರ್‌ವೆುಂಟ್ ಪೋರ್ಟಲ್‌ನಲ್ಲಿ ಮಾ. 23ರಂದು 6.45ಕ್ಕೆ ಹಾಕಲಾಗಿದ್ದು ಟೆಂಡರ್ ಹಾಕಲು ದಿನಾಂಕವನ್ನು ಅದೇ ದಿನ ನಿಗದಿ ಪಡಿಸಲಾಗಿದ್ದು ಎ. 13ಕ್ಕೆ 11 ಗಂಟೆಗೆ ಕೊನೆಗೊಳ್ಳಲಿದೆ. ಎ. 18ರಂದು ಟೆಂಡರ್ ಪರಿಶೀಲನೆ ನಡೆಯಲಿದೆ. ಎನ್‌ಎಚ್‌ಎಐನ ಕೇಂದ್ರ ಕಚೇರಿಯ ಕೆ.ವಿ. ಸಿಂಗ್ ಎನ್ನುವ ಅಧಿಕಾರಿಯ ಸಹಿಯಲ್ಲಿ ಹೊಸ ಟೆಂಡರ್ ಪ್ರಕಟವಾಗಿದೆ.
ಈ ಬಾರಿ ಹೊಸ ಟೆಂಡರ್‌ನಲ್ಲಿ ಶೇ 25ರಷ್ಟು ರಿಯಾಯಿತಿ ಗೊಂದಲ ಸೃಷ್ಟಿಸಿದೆ. ಎಲ್ಲ ರೀತಿಯ ವಾಹನಗಳಲ್ಲಿ ಪ್ರಯಾಣ ಮಾಡಿದವರು 24 ತಾಸಿನಲ್ಲಿ ಮರಳಿ ಬಂದಲ್ಲಿ ರಿಯಾಯಿತಿ ನೀಡಿ ದ್ದು, ಮರು ಪಾವತಿ ಬಗ್ಗೆ ಸ್ಪಷ್ಟನೆಯಿಲ್ಲ. ಫಾಸ್ಟ್ಯಾಗ್ ಬಳಕೆ ಮಾಡುವವರಿಗೆ ಮರುಪಾವತಿ ಹೇಗೆ ಎಂಬುದರ ಬಗ್ಗೆ ಗೊಂದಲ ಏರ್ಪಟ್ಟಿದೆ.
ಕೇಂದ್ರ ಸಚಿವ ಗಡ್ಕರಿ ಹೇಳಿದ್ದೇನು?
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಸತ್ತಿನಲ್ಲಿ 60 ಕಿ.ಮೀ ನ ಅಂತರದಲ್ಲಿ ಮತ್ತೊಂದು ಟೋಲ್ ಗೇಟ್ ಇದ್ದರೆ ತೆಗೆಯುವುದಾಗಿ ಹೇಳಿದ್ದರು. ಆದರೆ ಆ ಹೇಳಿಕೆಯ ಅರ್ಥವೇ ಬೇರೆ ಎನ್ನಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಸಂಸ್ಥೆಯು ಗುತ್ತಿಗೆ ಪಡೆದು ಕಾಮಗಾರಿ ಮಾಡಿದ್ದಲ್ಲಿ ಮಾತ್ರ ಇದು ಅನ್ವಯ ಎನ್ನಲಾಗುತ್ತಿದೆ. ಅದರಂತೆ ತಲಪಾಡಿ-ಹೆಜಮಾಡಿ ಸಾಸ್ತಾನ ನಡುವೆ ಮೂರರಲ್ಲಿ ಒಂದು ಹಾಗೂ ಬ್ರಹ್ಮರಕೊಟ್ಲು, ಸುರತ್ಕಲ್ ಟೋಲ್‌ಗಳಲ್ಲಿ ಒಂದು ರದ್ದಾಗುವ ಸಂಭವವಿದೆ. ಆದರೆ ಹೊಸ ಗುತ್ತಿಗೆಗೆ ಟೆಂಡರ್ ಕರೆದಿರುವುದನ್ನು ಕಂಡರೆ, ಎನ್‌ಐಟಿಕೆ ಟೋಲ್ ರದ್ದಾಗುವ ಸಾಧ್ಯತೆ ಕ್ಷೀಣಿಸಿದೆ.
ಸುರತ್ಕಲ್ ಟೋಲ್ ಪ್ಲಾಜಾ ಬಂದ್ ಮಾಡುವಂತೆ ಇತ್ತೀಚೆಗಷ್ಟೇ ಕೆಲವು ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭ ಅದನ್ನು ರದ್ದುಗೊಳಿಸುವ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಹಲವು ನಾಯಕರು ಭರವಸೆ ನೀಡಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಬಂದಾಗಲೂ ಮನವಿ ಸಲ್ಲಿಸಲಾಗಿತ್ತು.
ನಾಳೆಯಿಂದ ಟೋಲ್ ಮತ್ತಷ್ಟು ದುಬಾರಿ
ಉಳ್ಳಾಲ, ಪಡುಬಿದ್ರಿ, ಕೋಟ, ಬೈಂದೂರು, ಮಾ. 30: ಕರಾವಳಿಯಲ್ಲಿರುವ ಎಲ್ಲ ಆರು ಟೋಲ್ ಪ್ಲಾಜಾಗಳು ವಾಹನಗಳ ಸುಂಕವನ್ನು ಹೆಚ್ಚಿಸಿವೆ.
ಪರಿಷ್ಕೃತ ದರಗಳು ಎಪ್ರಿಲ್ ಒಂದರಿಂದ ಜಾರಿಗೆ ಬರಲಿವೆ. ರದ್ದಾಗುತ್ತವೆ ಎಂದು ಹೇಳಲಾಗಿದ್ದ ಎನ್‌ಐಟಿಕೆ ಮತ್ತು ಬ್ರಹ್ಮರಕೂಟ್ಲು ಟೋಲ್‌ಗಳಲ್ಲಿನ ಟೋಲ್ ದರ ಕೂಡ ಏರಿಕೆಯಾಗಿ ಅವರ ಪರವಾನಿಗೆ ಪರಿಷ್ಕೃತಗೊಂಡಿದೆ. ಉಳಿದಂತೆ ನವಯುಗ ಕಂಪೆನಿ ವತಿಯಿಂದ ನಡೆಯುತ್ತಿರುವ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿಯೂ ಶೇ. 9ರಷ್ಟು ದರ ಏರಿಸಲಾಗಿದೆ. ಹೊಸ ದರ ಮತ್ತು ಹಳೆಯ ದರ ಹೊಂದಿರುವ ವಿವಿಧ ಟೋಲ್ ಪ್ಲಾಜಾಗಳ ದರಪಟ್ಟಿ ಈ ಕೆಳಗಿನಂತಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.