Surathkal: ಅಶ್ಲೀಲ ಚಿತ್ರ ಕಳುಹಿಸಿ ಯುವತಿಗೆ ನಿರಂತರ ಕಿರುಕುಳ; ಯುವಕ ವಶಕ್ಕೆ
Team Udayavani, Oct 2, 2024, 6:20 AM IST
ಸುರತ್ಕಲ್: ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಕೃಷ್ಣಾಪುರ ಬಳಿಯ ವಿದ್ಯಾರ್ಥಿನಿಯೋರ್ವಳಿಗೆ ಆಶ್ಲೀಲ ಚಿತ್ರಗಳನ್ನು ಕಳುಹಿಸುತ್ತಾ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಸುರತ್ಕಲ್ ಠಾಣೆಗೆ ನೀಡಿದ ದೂರಿನ ಮೇರೆಗೆ ಮೆಸೇಜ್ ಕಳುಹಿಸಿದ್ದ ಮಂಜನಾಡಿ ಬಳಿಯ ನಿವಾಸಿ ಮೊಹಮ್ಮದ್ ಶಾಕೀಬ್ನನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಬೇಕಾದರೂ ದುಡ್ಡು ಕೊಡಬಲ್ಲೆ, ಬರ್ತೀಯಾ ಎಂದು ಆಶ್ಲೀಲ ಚಿತ್ರ ಕಳುಹಿಸಿ ಪದೇಪದೆ ವಾಟ್ಸ್ಅಪ್ ಮೆಸೇಜ್ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ವಿದ್ಯಾರ್ಥಿನಿ ಮಾನಸಿಕ ಆಘಾತಕ್ಕೆ ತುತ್ತಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆಗೂ ಒಳಗಾಗಿ ಕಾಲೇಜಿಗೂ ರಜೆ ಹಾಕಿ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ ಎಂದು ಹೆತ್ತವರು ದೂರಿದ್ದಾರೆ.
ಚೊಕ್ಕಬೆಟ್ಟಿನ ಸ್ನೇಹಿತೆಯ ಬಳಿಯಿಂದ ನಂಬರ್ ಪಡೆದಿದ್ದ ಆತ ಯುವತಿ ಹಿಂದೆ ಬಿದ್ದು ಕಿರುಕುಳ ನೀಡತೊಡಗಿದ್ದ ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕಿದ್ದ ಆತ ಅಲ್ಲಿಂದಲೇ ಈ ಕೃತ್ಯ ಎಸಗುತ್ತಿದ್ದ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bus Ticket: ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ !
Legislative Council: ಇಂದು ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟ ?
Mangaluru: ಉಗ್ರರಂತೆ ಕಳ್ಳರಿಗೂ ತರಬೇತಿ ಕೇಂದ್ರ! ಚಡ್ಡಿ ಗ್ಯಾಂಗ್ಗೆ ದರೋಡೆಯೇ ದೇವರು
Mangaluru: ಪಂಜದಲ್ಲೊಬ್ಬರು ಆಧುನಿಕ ಗಾಂಧಿ
Urwa: ಪೊಲೀಸ್ ಕಾನ್ಸ್ಟೆಬಲ್ಗೆ ಜೀವಬೆದರಿಕೆ, ಕೊಲೆಗೆ ಯತ್ನ: ಪ್ರಕರಣ ದಾಖಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gujarat; ಸೆ*ಕ್ಸ್ ನಂತರ ಗುಪ್ತಾಂಗದಿಂದ ತೀವ್ರ ರಕ್ತಸ್ರಾ*ವವಾಗಿ ಯುವತಿ ಸಾ*ವು
Gandhi, Shastri ಜನ್ಮದಿನ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಪುಷ್ಪ ನಮನ
Israel vs Iran; ಯುದ್ದೋನ್ಮಾದ ತೀವ್ರ ಹೆಚ್ಚಳ: ಇರಾನ್ಗೆ ಅಮೆರಿಕ ಎಚ್ಚರಿಕೆ
Special Train: ದಸರಾ; ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Bus Ticket: ಸಾಲು ಸಾಲು ರಜೆ; ನವರಾತ್ರಿಗೆ ಬಸ್ ಟಿಕೆಟ್ ದರ ಬಲು ದುಬಾರಿ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.