![ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ](https://www.udayavani.com/wp-content/uploads/2025/02/helicaptor-415x234.jpg)
![ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ](https://www.udayavani.com/wp-content/uploads/2025/02/helicaptor-415x234.jpg)
Team Udayavani, Jul 25, 2023, 4:54 PM IST
ಸುರತ್ಕಲ್: ಸುರತ್ಕಲ್ ಸಮೀಪದ ಹೊಸಬೆಟ್ಟು ಬಳಿ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮಳಿಗೆಯಿಂದ ಎರಡು ಕಾರು , ಮೊಬೈಲ್, ಪ್ರಿಂಟರ್ ಸಹಿತ ವಸ್ತುಗಳನ್ನು ಕದ್ದ ಆರೋಪಿ ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ (21) ಎಂಬಾತನನ್ನು ಬಂಧಿಸಲಾಗಿದೆ.
ವಶ ಪಡಿಸಿಕೊಂಡಿರುವ ವಾಹನಗಳ ಒಟ್ಟು ಮೌಲ್ಯ ಅಂದಾಜು 15.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಹಾಗೂ ಕೃತ್ಯಕ್ಕೆ ಬಳಸಿದ ಸಲಕರಣೆ, ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.
ಜು.12ರಂದು ರಾತ್ರಿ ಸಮಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್ ಮಾರ್ಟ್ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ನ ಡೋರ್ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಮಾಡಿ ಒಳಪ್ರವೇಶಿಸಿ , ಮೊಬೈಲ್ ಫೋನ್, ಲ್ಯಾಪ್ ಟಾಪ್, ಪ್ರಿಂಟರ್ ಹಾಗೂ ಶೋರೂಂನ ಪಾರ್ಕ ನಲ್ಲಿ ನಿಲ್ಲಿಸಿದ ಕ್ರೆಟಾ, ಸ್ವಿಫ್ಟ್ ಕಾರು ಕಳವು ಮಾಡಿದ್ದರು.
ಕಾರ್ ಮಾರ್ಟ್ ಮಾಲಕರಾದ ಅಬೀದ್ ಅಹಮ್ಮದ್ ಸೂರಲ್ಪಾಡಿ ಇವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳ್ಳರ ಬೆನ್ನತ್ತಿದ ಪೊಲೀಸರು ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಕಳವಾದ ಸ್ವಿಪ್ಟ್ ಕಾರು ವಶ ಪಡೆದು ತನಿಖೆ ನಡೆಸಿದಾಗ ಪ್ರಧಾನ ಆರೋಪಿ ಮಹಮ್ಮದ್ ಶಫೀಕ್ ಮರಕಡ ಬಳಿ ಬರುವ ಸೂಚನೆ ಲಭಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈತನ ಮೇಲೆ ಮೂಡಬಿದ್ರೆಯಲ್ಲಿ ದ್ವಿಚಕ್ರ ವಾಹನ ಕಳ್ಳತನ ಗೈದ ಪ್ರಕರಣವಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ಮೂರು ದಿನಗಳ ಕಸ್ಟಡಿ ನೀಡಲಾಗಿದೆ.
ಹಿರಿಯ ಆಧಿಕಾರಿಗಳ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್, ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್, ಅರುಣ್ ಕುಮಾರ್, ಎಎಸ್‌ಐ, ತಾರನಾಥ ಹೆಡ್ ಕಾನ್ಸಟೇಬಲ್ ಗಳಾದ ಅಣ್ಣಪ್ಪ, ಉಮೇಶ್, ಕಾನ್ಸಟೇಬಲ್ ಗಳಾದ ಕಾರ್ತೀಕ್, ಸುನೀಲ್, ಮಂಜುನಾಥ, ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮಹಾ ಕುಂಭ ಭಕ್ತರಿಗಾಗಿ ಪ್ರಯಾಗ್‌ರಾಜ್ ನಿಂದ ತ್ರಿವೇಣಿ ಸಂಗಮಕ್ಕೆ ಹೆಲಿಕಾಪ್ಟರ್ ಸೇವೆ
Belagavi: ಮಹಾ ಕುಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಮಂದಿ ದುರ್ಮರಣ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
Sandalwood: ಕಾಮಿಡಿ ಅಡ್ಡದಲ್ಲಿ ‘ಮಿ.ರಾಣಿ’
Belthangady: ಬೆಳ್ತಂಗಡಿಯ 35 ಶಿಕ್ಷಣ ಸಂಸ್ಥೆಗಳಿಗೆ ಶೌಚಾಲಯ
You seem to have an Ad Blocker on.
To continue reading, please turn it off or whitelist Udayavani.