Surathkal; ಮೊಟ್ಟೆಯೊಡೆದು ಹೊರಬಿದ್ದ ಆಲಿವ್ ರಿಡ್ಲೆ ಕಡಲಾಮೆ ಮರಿಗಳು
Team Udayavani, Feb 21, 2024, 9:12 PM IST
ಮಂಗಳೂರು: ಸುರತ್ಕಲ್ ಸಮೀಪದ ಸಸಿಹಿತ್ಲು ಕಡಲ ತೀರದಲ್ಲಿ ಆಲಿವ್ ರಿಡ್ಲೆ ಕಡಲಾಮೆ ಮೊಟ್ಟೆಗಳು ಒಡೆದು ಮರಿಗಳು ಹೊರಬಿದ್ದಿವೆ. 113 ಮೊಟ್ಟೆಗಳ ಪೈಕಿ 88 ಮರಿಗಳು ಬುಧವಾರ ಸಮುದ್ರಕ್ಕೆ ಸೇರಿದವು. ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರ ನಿಗಾ ವಹಿಸಿ ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಿದರು.
ನಗರದ ಸುತ್ತಮುತ್ತ ಆಲಿವ್ ರಿಡ್ಲೆ ಅಮೆಗಳು ಬಂದು ಮೊಟ್ಟೆ ಇರಿಸಿ ಹೋಗಿರುವುದನ್ನು ಅರಣ್ಯ ಇಲಾಖೆ ಸಿಬಂದಿ ಪತ್ತೆ ಮಾಡಿದ್ದರು. ಮುನ್ನೆಚ್ಚರಿಕೆ ವಹಿಸಿ ಕಡಲ ತೀರದಲ್ಲಿ ಮೂರು ಪ್ಯಾಟ್ರೊಲ್ ತಂಡಗಳನ್ನು ರಚಿಸಿದ್ದರು. ಕಣ್ಗಾವಲು ತಂಡಗಳು ರಾತ್ರಿ ಹೆಚ್ಚಾಗಿ ಕಡಲ ತೀರಗಳಿಗೆ ಭೇಟಿ ನೀಡಿ ಕಾವಲು ನಡೆಸುತ್ತಿದ್ದರು. ಮಾನವ ಚಟುವಟಿಕೆ ಮೇಲೆ ನಿಯಂತ್ರಣ ಇದ್ದ ಕೆಲವು ಕಡೆಗಳಲ್ಲಿ ಮೊಟ್ಟೆ ಇರಿಸಿರುವುದು ಪತ್ತೆಯಾಗಿತ್ತು. ಅವುಗಳಲ್ಲಿ ಉಬ್ಬರದಲೆಗಳು ಬಡಿಯುವ ಕೆಲವು ಕಡೆಗಳಲ್ಲಿ ಅವುಗಳನ್ನು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.
15 ಕಡೆಗಳಲ್ಲಿದೆ ಮೊಟ್ಟೆ
ಸಸಿಹಿತ್ಲುವಿನ 12 ಕಡೆ, ಬೆಂಗರೆಯ 2 ಕಡೆ ಮತ್ತು ಇಡ್ಯಾದ 1 ಕಡೆಗಳಲ್ಲಿ ಮೊಟ್ಟೆ ಇಟ್ಟದ್ದನ್ನು ಗುರುತಿಸಲಾಗಿದೆ. ಒಂದೊಂದು ಕಡೆ ಸುಮಾರು 100 ಮೊಟ್ಟೆ ಇಡುತ್ತದೆ. ಒಂದು ಬಾರಿ ಮೊಟ್ಟ ಇಟ್ಟ ಬಳಿಕ 53 ದಿನಗಳಲ್ಲಿ ಮೊಟ್ಟೆ ಒಡೆದು ಮರು ಹೊರ ಬರುತ್ತದೆ. ಅದರಂತೆ ಮೊದಲನೆಯದಾಗಿ ಸಸಹಿತ್ಲು ಕಡಲ ತೀರದಲ್ಲಿ ಈ ಪ್ರಕ್ರಿಯೆ ಬುಧವಾರ ಸಾಗಿತ್ತು ಎನ್ನುತ್ತಾರೆ ಮಂಗಳೂರಿನ ಡಿಸಿಎಫ್ ಆ್ಯಂಟನಿ ಮರಿಯಪ್ಪ.
ದ.ಕ.ದಲ್ಲಿ ಇದೇ ಮೊದಲು
ವಿಶೇಷ ವರದಿ ಮಾಡಿದ್ದ ಉದಯವಾಣಿ
ಆಲಿವ್ ರಿಡ್ಲೆ ಕಡಲಾಮೆ ಕುಂದಾಪುರ- ಉಡುಪಿ ಭಾಗದ ಕಡಲ ತೀರದಲ್ಲಿ ಹಲವು ವರ್ಷಗಳಿಂದ ಮೊಟ್ಟೆ ಇರಿಸುತ್ತಿದ್ದರೂ ದಕ್ಷಿಣ ಕನ್ನಡದ ಬೀಚ್ಗಳಲ್ಲಿ ಮೊಟ್ಟೆ ಇರಿಸಿದ್ದು ಇದೇ ಮೊದಲ ಬಾರಿ. ಸಸಿಹಿತ್ಲು ಭಾಗದಲ್ಲಿ ಕಡಲಾಮೆ ಇದೇ ಮೊದಲ ಬಾರಿಗೆ ಮೊಟ್ಟೆ ಇರಿಸಿರುವ ಬಗ್ಗೆ “ಉದಯವಾಣಿ’ ವಿಶೇಷ ವರದಿ ಪ್ರಕಟಿಸುವ ಮೂಲಕ ಗಮನ ಸೆಳೆದು ಜಾಗೃತಿ ಮೂಡಿಸಿತ್ತು. ಈಗ ಈ ಮೊಟ್ಟೆಗಳು ಒಡೆದು ಮರಿಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.