ಸುರತ್ಕಲ್ ಮೆಸ್ಕಾಂ ಜನ ಸಂಪರ್ಕ ಸಭೆ
Team Udayavani, Feb 8, 2018, 2:08 PM IST
ಸುರತ್ಕಲ್ : ಮುಕ್ಕ ಸಸಿಹಿತ್ಲು, ಚೇಳಾಯಿರು ಪ್ರದೇಶಕ್ಕೆ ನೂತನ ಮುಕ್ಕ ಮೆಸ್ಕಾಂ ಶಾಖಾ ಕಚೇರಿ ಕಾರ್ಯಾರಂಭಿಸಲಿದೆ ಎಂದು ಮಂಗಳೂರು ವೃತ್ತ ಅಧಿಧೀಕ್ಷಕ ಮಂಜಪ್ಪ ಹೇಳಿದರು.
ಸುರತ್ಕಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಗತ್ಯಕ್ಕೆ ಅನುಗುಣವಾಗಿ ಮೆಸ್ಕಾಂ ಲೈನ್ ಮ್ಯಾನ್‌ಗಳ ನೇಮಕಾತಿ ಮಾಡುತ್ತಿದೆ. ಇದರಿಂದ ಉತ್ತಮ ಸೇವೆ ನೀಡಲು ಸಾಧ್ಯವಿದೆ. ಜನ ಸ್ನೇಹಿಯಾಗಿ ಮೆಸ್ಕಾಂ ಕಾರ್ಯನಿರ್ವಹಿಸಿದಾಗ ಉತ್ತಮ ಸ್ಪಂದನೆ ಸಾಧ್ಯ ಎಂದರು.
110 ಕೆ.ವಿ. ಸಬ್ ಸ್ಟೇಷನ್‌ಗೆ ಚಿಂತನೆ
ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್‌ನಲ್ಲಿ 110 ಕೆ.ವಿ. ಸಬ್ ಸ್ಟೇಷನ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಇದಕ್ಕಾಗಿ ಅಗತ್ಯವಾದ ಭೂಮಿ ಎನ್‌ಐಟಿಕೆ ಶಿಕ್ಷಣ ಸಂಸ್ಥೆ ನೀಡಲು ಒಪ್ಪಿಕೊಂಡಿದೆ ಎಂದರು. ಸುರತ್ಕಲ್ ಸರ್ವಿಸ್ ರಸ್ತೆಯಲ್ಲಿ ಅಡಚಣೆಯಾಗುತ್ತಿರುವ ವಿದ್ಯುತ್ ಕಂಬವನ್ನು ಸ್ಥಳಾಂತರಗೊಳಿಸಬೇಕು ಎಂಬ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸಿ ಶೀಘ್ರ ಸ್ಥಳಾಂತರಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಮೆಸ್ಕಾಂ ಬಿಲ್ ಅಕ್ಷರಗಳು ಕೆಲವೇ ದಿನಗಳಲ್ಲಿ ಒರೆಸಿಹೋಗುತ್ತಿದ್ದು ಗುಣಮಟ್ಟದ ಪೇಪರ್ ಬಳಕೆ, ಹೊಸ ಕಟ್ಟಡ ಮನೆಗಳಿಗೆ ತ್ವರಿತ ಸಂಪರ್ಕ ಬಗ್ಗೆ ಚರ್ಚೆ ನಡೆಯಿತು. ಇದೇ ಸಂದರ್ಭ ಸುರತ್ಕಲ್ ಪರಿಸರದಲ್ಲಿ ವಿದ್ಯುತ್ ಪೂರೈಕೆ ತೃಪ್ತಿಕರವಾಗಿದೆ ಎಂಬ ಮಾತು ಸಭೆಯಲ್ಲಿ ಕೇಳಿ ಬಂತು.
ವಿದ್ಯುತ್ ಗುತ್ತಿಗೆದಾರರ ಸಂಘದ ಉರ್ಬನ್ ಪಿಂಟೋ, ಹರೀಶ್ ಕೆ. ಶೆಟ್ಟಿ , ಮತ್ತಿತರರು ಸಲಹೆ ಸೂಚನೆ ನೀಡಿದರು.
ಮೆಸ್ಕಾಂ ಎಂಜಿನಿಯರ್‌ಗಳಾದ ಅಭಿಷೇಕ್ ಜೈನ್, ಶಿವಪ್ರಸಾದ್ ಸುರತ್ಕಲ್, ಸುಪ್ರೀತ್ ಸಾಲ್ಯಾನ್, ರಾಮಕೃಷ್ಣ ಐತಾಳ್, ಮತ್ತಿತರರು ಉಪಸ್ಥಿತರಿದ್ದರು.
ಟೆಂಡರ್ ಪ್ರಸ್ತಾವ
ಎಲ್‌ಇಟಿ ಲೈನ್, ಮೂಲ ಸೌಕರ್ಯ ಅಭಿವೃದ್ಧಿ ಮತ್ತಿತರ ಕಾರ್ಯಗಳ ಅನುಷ್ಠಾನಕ್ಕೆ ಟೆಂಡರ್ ಪ್ರಸ್ತಾವ ಮಾಡಲಾಗಿದೆ. ಗ್ರಾಮಗಳ ಬೇಡಿಕೆಗೆ ತಕ್ಕಂತೆ ಅಧಿ ಕಾರಿಗಳು ಅಂದಾಜು ಪಟ್ಟಿ ತಯಾರಿಸಬೇಕು. ಗ್ರಾಹಕರ ಸಮಸ್ಯೆಗೆ ಸ್ಪಂದಿಸಿದಾಗ ಮೆಸ್ಕಾಂ ಜನರ ವಿಶ್ವಾಸ ಗಳಿಸಲು ಹಾಗೂ ಮತ್ತಷ್ಟು ಸೇವೆಯನ್ನು ತ್ವರಿತವಾಗಿ ನೀಡಲು ಸಾಧ್ಯವಾಗುತ್ತದೆ.
– ಮಂಜಪ್ಪ, ಅಧಿಧೀಕ್ಷಕರು ಮೆಸ್ಕಾಂ,
ಮಂಗಳೂರು ವೃತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.