ಸುರತ್ಕಲ್ ರಾ.ಹೆ.ಯಲ್ಲಿ ಬೃಹತ್ ಹೊಂಡ; ಸಂಚಾರಕ್ಕೆ ತೊಡಕು
Team Udayavani, Sep 7, 2019, 5:00 AM IST
ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೃಹತಾಕಾರದ ಹೊಂಡ.
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಜಂಕ್ಷನ್, ಬೈಕಂಪಾಡಿ, ಕೂಳೂರು ಪ್ರದೇಶದಲ್ಲಿ ಬೃಹತ್ ಹೊಂಡಗಳುಂಟಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿದೆ.
ಸುರತ್ಕಲ್ ಜಂಕ್ಷನ್ನಲ್ಲಿ ಹೊಂಡ ವಾದರೂ ಪಾಲಿಕೆ ದುರಸ್ತಿಗೆ ಮುಂದಾ ಗಿಲ್ಲ. ಹೆದ್ದಾರಿ ಇಲಾಖೆಯ ಅಧಿಧೀನದಲ್ಲಿ ಈ ರಸ್ತೆ ಇದ್ದರೂ ಅದು ನಿರ್ಲಕ್ಷ್ಯ ತಳುತ್ತಿದೆ. ಇದರಿಂದ ದಿನೇ ದಿನೇ ಹೊಂಡಗಳು ಕೆರೆಗಳಾಗಿ ಮಾರ್ಪಾ ಡಾಗುತ್ತಿದ್ದು, ದ್ವಿಚಕ್ರ ಸವಾರರು ಎದ್ದು ಬಿದ್ದು ಹೋಗುವ ಪ್ರಮೇಯ ಉಂಟಾಗಿದೆ. ತಿರುವುಗಳಲ್ಲಿ ರಸ್ತೆ ಬೇಗ ಕೆಟ್ಟು ಹೋಗುತ್ತಿದ್ದು ಘನ ವಾಹನಗಳ ಓಡಾಟವೂ ಅತಿಯಾಗಿರುವುದು ಕಾರಣ. ಶಾಸಕ ಡಾ| ಭರತ್ ಶೆಟ್ಟಿ ವೈ. ಸೆ. 3ರಂದು ಹೆದ್ದಾರಿಯಲ್ಲಿನ ಬೃಹತ್ ಹೊಂಡ ಮುಚ್ಚಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೆ ಅ ಧಿಕಾರಿಗಳು ಇನ್ನೂ ಆರಂಭಿಸುವ ಸೂಚನೆ ಕಾಣುತ್ತಿಲ್ಲ.
ಮಳೆಯಿದ ಸಂಕಷ್ಟ ಹೆಚ್ಚಿದೆ
ಇತ್ತ ಘನ ಲಾರಿಗಳು ಹೊಂಡಕ್ಕೆ ಬಿದ್ದು ಕೆಟ್ಟು ನಿಲ್ಲುತ್ತಿದ್ದು, ಇದು ಮತ್ತಷ್ಟು ಟ್ರಾಫಿಕ್ ಬ್ಲಾಕ್ಗೆ ಕಾರಣವಾಗುತ್ತಿವೆ. ಸುರತ್ಕಲ್ ಕೊಟ್ಟಾರಚೌಕಿ ಓಡಾಟ ಹದಿನೈದು ನಿಮಿಷಗಳ ಪ್ರಯಾಣವಾದರೆ ಇದೀಗ ಬ್ಲಾಕ್ನಿಂದಾಗಿ ಕನಿಷ್ಠ ಮುಕ್ಕಾಲು-ಒಂದು ಗಂಟೆ ವಿಳಂಬವಾಗುತ್ತಿದೆ. ಮಳೆ ನೀರು ಹೊಂಡದಲ್ಲಿ ನಿಂತಿರುವುದರಿಂದ ದ್ವಿಚಕ್ರ ವಾಹನ ಸಂಚಾರ ಕಷ್ಟಕರ. ಇನ್ನಾದರೂ ಹೆದ್ದಾರಿ ಇಲಾಖೆ ಪ್ರಮುಖ ಮೂರು ಬೃಹತ್ ಹೊಂಡ ಇರುವಲ್ಲಿ ಕಾಂಕ್ರೀಟ್ ಹಾಕಿ ಮತ್ತಷ್ಟು ಸಮಸ್ಯೆ ಉಂಟಾಗುವುದನ್ನು ತಪ್ಪಿಸಬೇಕಿದೆ.
ತುರ್ತು ದುರಸ್ತಿ ಮಾಡಿ
ಹೆದ್ದಾರಿ ಇಲಾಖೆ ಎಂಜಿನಿಯರ್ಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೀರಾ ಕೆಟ್ಟು ಹೋದ ಕಡೆ ತುರ್ತು ದುರಸ್ತಿಗೆ ಸೂಚಿಸಿದ್ದೇನೆ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅ ಧಿಕಾರಿಗಳು ಈ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು.
– ಡಾ| ಭರತ್ ಶೆಟ್ಟಿ ವೈ. ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.