ಸುರಿಬೈಲು ಹಿ.ಪ್ರಾ. ಶಾಲೆಗೆ ರಾಷ್ಟ್ರ ಪ್ರಶಸ್ತಿ
Team Udayavani, Aug 30, 2017, 9:15 AM IST
ವಿಟ್ಲ : ಬಂಟ್ವಾಳ ತಾ| ಕೊಳ್ನಾಡು ಗ್ರಾಮದ ಸುರಿಬೈಲು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ “ಸ್ವತ್ಛತಾ ವಿದ್ಯಾಲಯ’ವೆಂದು ಪರಿಗಣಿಸಿ ರಾಷ್ಟ್ರ ಪ್ರಶಸ್ತಿ ಘೋಷಿಸಿದೆ. ಸೆ.1ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ದೇಶದಲ್ಲಿ ಒಟ್ಟು 172 ಶಾಲೆಗಳಿಗೆ ರಾಷ್ಟ್ರ ಪ್ರಶಸ್ತಿ ಘೋಷಿಸಿದ್ದು, ಕರ್ನಾಟಕದಲ್ಲಿ 8 ಶಾಲೆಗಳಿಗೆ ಹಾಗೂ ಬಂಟ್ವಾಳ ತಾಲೂಕಿನ 1 ಶಾಲೆಗೆ ಈ ಪ್ರಶಸ್ತಿಯನ್ನು ಘೋಷಿಸಿದೆ. ರಾಜ್ಯದಲ್ಲೇ ವಿವಿಧ ರೀತಿಯಲ್ಲಿ ವಿಶಿಷ್ಟ ಸಾಧನೆ ಮಾಡಿದ ಸರಕಾರಿ ಶಾಲೆಗಳಲ್ಲಿ ಇದು ಒಂದನೇ ಸ್ಥಾನ ಪಡೆದುಕೊಂಡಿದೆ.
1960ರಲ್ಲಿ ಸ್ಥಾಪನೆ
ಈ ಶಾಲೆಯನ್ನು 1960ರಲ್ಲಿ ಸ್ಥಾಪಿಸಲಾಗಿತ್ತು. 1ರಿಂದ 10ನೇ ತರಗತಿವರೆಗೆ ಒಟ್ಟು 500ಕ್ಕಿಂತಲೂ ಅಧಿಕ ವಿದ್ಯಾರ್ಥಿ ಗಳು ಇಲ್ಲಿ ಓದುತ್ತಿದ್ದಾರೆ. ಸ್ವತ್ಛತೆ, ಶಿಸ್ತು, ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದ್ದು, ಈ ನಿಟ್ಟಿನಲ್ಲಿಯೂ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಕೃಷಿ ಜೀವನದ ಪರಿಚಯ ಮಾಡಲಾಗುತ್ತಿದೆ. ತೋಟಗಾರಿಕೆಯ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಲಾಗುತ್ತಿದೆ.
ಒಂದೂವರೆ ಎಕರೆಯಲ್ಲಿ ಅಡಿಕೆ ಬೆಳೆ
ಹತ್ತು ವರ್ಷಗಳ ಹಿಂದೆ ಶಾಲೆಯ ಸಮೀಪದ ಒಂದೂವರೆ ಎಕರೆ ಜಾಗದಲ್ಲಿ ಅಡಿಕೆ ಗಿಡ ನೆಡಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಡಿಕೆ ಫಲ ನೀಡುತ್ತಿದೆ. ಸುಮಾರು 500 ಅಡಿಕೆ ಮರಗಳು ಸುಂದರವಾಗಿ ಬೆಳೆದು ನಿಂತು ಫಲ ನೀಡುತ್ತಿವೆ.
ಕಳೆದ ವರ್ಷ 1.25 ಲಕ್ಷ ರೂ. ಆದಾಯ ನೀಡಿದೆ. ಈ ಆದಾಯದಿಂದಲೇ ಶಾಲೆಗೆ ಆವಶ್ಯವಾದ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ. ಅಡಿಕೆ ಗಿಡದ ಮೂಲಕ ಆದಾಯ ಪಡೆಯುವ ಸರಕಾರಿ ಶಾಲೆ ರಾಜ್ಯದಲ್ಲಿ ಬೇರೆ ಇಲ್ಲ. ಅಲ್ಲದೇ ವಿವಿಧ ಬಗೆಯ ಹಣ್ಣುಹಂಪಲು ಗಿಡಗಳನ್ನು ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ.
ಸ್ವತ್ಛತೆಯ ಮಾಪನ ಧ್ವಜ
ಶಾಲೆಯ ಸುತ್ತ ಸ್ವತ್ಛತೆಯಾಗಿದೆಯೆಂದು ನಿರ್ಧರಿ ಸುವುದಕ್ಕೆ ಒಂದು ತಂಡವನ್ನು ನಿರ್ಮಿಸಲಾಗಿದೆ. ಆ ತಂಡ ಪ್ರತಿದಿನ ಇಡೀ ಶಾಲೆ ಪರಿಸರವನ್ನು ಪರೀಕ್ಷಿಸಿ, ಸಂಬಂಧಪಟ್ಟ ಶಿಕ್ಷಕರಿಗೆ ವರದಿ ಒಪ್ಪಿಸುತ್ತದೆ. ಆಮೇಲೆ ಶಿಕ್ಷಕರು ಪರಿಸರವನ್ನು ಮತ್ತೂಮ್ಮೆ ಪರೀಕ್ಷಿಸಿ, ಪರಿಸರ ಸ್ವತ್ಛತೆಯನ್ನು ಕಾಪಾಡಲಾಗಿದ್ದರೆ ಬಿಳಿ ಧ್ವಜ ವನ್ನು ಹಾರಿಸುತ್ತದೆ. ಪರೀಕ್ಷಿಸುವ ಸಂದರ್ಭ ಕಸ ಗಮ ನಿ ಸಲ್ಪಟ್ಟರೆ ಸ್ವತ್ಛತೆಯನ್ನು ಕಾಪಾಡಲಿಲ್ಲ ಎಂದು ಕಂದು ಬಣ್ಣದ ಧ್ವಜ ಹಾರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.