ಹೊಸ ಚಿಂತನೆ, ಕ್ರಿಯಾತ್ಮಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ
ಇಂದು ವಿಶ್ವ ಸೃಜನಶೀಲ,ಆವಿಷ್ಕಾರ ದಿನ
Team Udayavani, Apr 21, 2019, 6:03 AM IST
ಇಂದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸೃಜನಶೀಲ ಹಾಗೂ ಆವಿಷ್ಕಾರ ಮನೋಭಾವದವರೆಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.ಇದು ದೇಶದ ಅಭಿವೃದ್ಧಿಗೆ ಕೂಡ ಪೂರಕ ವಾಗಲಿ ಎಂಬುದು ತಜ್ಞರ ವಾದ.ಭಾರತ ದೇಶದಂತ ಅಭಿ ವೃದ್ಧಿಶೀಲ ರಾಷ್ಟ್ರಕ್ಕೆ ನೂತನ ಆವಿಷ್ಕಾರ ಹಾಗೂ ಸೃಜನಾ ಶೀಲ ಹೊಂದಿರುವವರ ಆವಶ್ಯಕತೆ ಬೇಕಿದೆ.ಇದಕ್ಕೆ ಪೂರಕ ವಾಗಿ ವಿದ್ಯಾರ್ಥಿಗಳಲ್ಲಿ ಶಿಕ್ಷಣ ನೀಡಬೇಕಿದೆ.
21ನೇ ಶತಮಾನದಲ್ಲಿ ಆವಿಷ್ಕಾರ ಮತ್ತು ಸೃಜನಶೀಲ ಗುಣ ಇವೆರಡೂ ದೇಶವೊಂದರ ಅಭ್ಯುದಯಕ್ಕೆ ಕಾರಣವಾಗುವ ಪ್ರಮುಖ ಸಂಪತ್ತುಗಳು ಎಂದೇ ಪರಿಗಣಿಸಲ್ಪಟ್ಟಿವೆ. ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಇವುಗಳ ಪಾತ್ರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎ. 21ರಂದು ವಿಶ್ವ ಸೃಜನಶೀಲ ಮತ್ತು ಆವಿಷ್ಕಾರ ದಿನವನ್ನು ಸುಮಾರು 46ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 2002ರಿಂದ ಆಚರಿ ಸಿಕೊಂಡು ಬರಲಾಗುತ್ತಿದೆ.
ಆಚರಣೆಯ ಉದ್ದೇಶ
ಹೊಸ ಚಿಂತನೆ, ಕ್ರಿಯಾತ್ಮಕ ಕೆಲಸ ಇವುಗಳು ಮಾತ್ರ ಉತ್ತಮ ಫಲಿತಾಂಶ ನೀಡಲು ಸಾಧ್ಯ. ಸಾಮಾನ್ಯ ಕೆಲಸಗಾರ ಆಗಿರಲಿ ಅಥವಾ ವಿಜ್ಞಾನಿಯೇ ಆಗಿರಲಿ ನಿರಂತರ ಅಧ್ಯಯನ ಮತ್ತು ಸಂಶೋಧನೆಗಳಿಂದ ಮಾತ್ರ ಆತ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಹಲವರಿಗೆ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳ ಬಗ್ಗೆ ಅರಿವೇ ಇರುವುದಿಲ್ಲ. ಅಂತವರನ್ನು ಜಾಗೃತಗೊಳಿಸುವುದೇ ಈ ದಿನದ ಮುಖ್ಯ ಉದ್ದೇಶ.
“ಕೆನಡಾ ಇನ್ ಕ್ರಿಯೆಟಿವಿಟಿ ಕ್ರಿಸಿಸ್’ ಎಂಬ ತಲೆಬರೆಹದಡಿಯಲ್ಲಿ ಸುದ್ದಿ ಪತ್ರಿಕೆಯೊಂದು ಪ್ರಕಟಿಸಿದ್ದ ವರದಿಯನ್ನು ಗಮನಿಸಿದ ಸೃಜನಶೀಲ ತಜ್ಞೆ ಮಾರ್ಸಿ ಸೇಗಲ್ ಎಂಬವರು ಈ ನಿಟ್ಟಿನಲ್ಲಿ ಒಂದು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಿ ಸೃಜನಾತ್ಮಕ ಮತ್ತು ಆವಿಷ್ಕಾರ ದಿನವನ್ನು ಆಚರಿಸುವ ಬಗ್ಗೆ ಯೋಚಿಸುತ್ತಾರೆ. ಸಹೊದ್ಯೋಗಿಗಳ ನೆರವಿನೊಂದಿಗೆ ಎಪ್ರಿಲ್ 2002ರಲ್ಲಿ ಇವರು ಮೊದಲ ಬಾರಿಗೆ ಆಚರಿಸುತ್ತಾರೆ. ಇದರ ಯಶಸ್ಸಿನ ಅನಂತರ ಜಗತ್ತಿನ ಹಲವು ರಾಷ್ಟ್ರಗಳು ಈ ದಿನವನ್ನು ಆಚರಿಸಲು ಮುಂದೆ ಬಂದವು. ಅನಂತರ 2006ರಲ್ಲಿ ಎಪ್ರಿಲ್ 15ರಿಂದ 21ರ ವರೆಗೆ ಒಂದು ವಾರಗಳ ಕಾಲ ಆಚರಣೆ ಮಾಡಲಾಯಿತು.
ಆಚರಣೆ ಹೇಗೆ?
ಸೃಜನಾತ್ಮಕ ಮತ್ತು ಆವಿಷ್ಕಾರಗಳು ಜೀವನದ ಪ್ರತಿ ಹೆಜ್ಜೆ ಮತ್ತು ಎಲ್ಲ ಉದ್ಯೋಗಗಳಿಗೂ ಸಹಕಾರಿ. ಆದುದರಿಂದ ಈ ದಿನದಂದು ಕೆಲವು ವಿಭಿನ್ನ ಮತ್ತು ಒಳ್ಳೆಯ ಯೋಚನೆಗಳನ್ನು ನಿಮ್ಮ ಕೆಲಸಗಳಲ್ಲಿ ತೋರಿಸಿ. ಬೇರೆಯವರ ಹೊಸ ಚಿಂತನೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಲಿ. ನಿಮ್ಮ ಪ್ರೋತ್ಸಾಹ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಬಲ್ಲದು. ನಿಮ್ಮ ಚಿಂತನೆಗಳ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವ ಸೃಜನಾತ್ಮಕ ಮತ್ತು ಆವಿಷ್ಕಾರ ದಿನ ಅಥವಾ ಡಬ್ಲ್ಯುಸಿಐಡಿ ಹ್ಯಾಶ್‌ಟ್ಯಾಗ್‌ನೊಂದಿಗೆ ಹರಿದುಬಿಡಿ. ಇದು ಇತರರಲ್ಲೂ ಜಾಗೃತಿ ಮೂಡಿಸಲು ಸಹಕಾರಿ.
– ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.