ರಾಮಕೃಷ್ಣ ಮಿಷನ್‌ನಿಂದ  23ನೇ ವಾರದ ಸ್ವತ್ಛತಾ ಕಾರ್ಯಕ್ರಮ


Team Udayavani, Mar 14, 2017, 4:29 PM IST

swacha.jpg

ಮಹಾನಗರ: ರಾಮಕೃಷ್ಣ ಮಿಷನ್‌ ವತಿಯಿಂದ  ಸ್ವತ್ಛ ಭಾರತಕ್ಕಾಗಿ ಸ್ವತ್ಛ ಮಂಗಳೂರು ಅಭಿಯಾನದ 23ನೇ ವಾರದಲ್ಲಿ  11 ಪ್ರದೇಶಗಳಲ್ಲಿ ಸ್ವತ್ಛತಾ ಕಾರ್ಯಕ್ರಮಗಳನ್ನು ಮಾಡಲಾಯಿತು.

ಕೊಡಿಯಾಲ್‌ ಬೈಲ್‌: ಪ್ರೇರಣಾ ತಂಡದಿಂದ ಪಿವಿಎಸ್‌  ವೃತ್ತದ ಆಸುಪಾಸಿ ನಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ  ಆರ್‌.ಕೆ. ರಾವ್‌ ಹಾಗೂ ಗಿರೀಶ್‌ ರಾವ್‌ ಚಾಲನೆ ನೀಡಿದರು. ಪ್ರೇರಣಾ ತಂಡದ ಸಂಯೋಜಕ  ಸದಾನಂದ ಉಪಾ ಧ್ಯಾಯ ಮಾರ್ಗದರ್ಶನದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮದಾನ ನಡೆಸಲಾಯಿತು. ಪಿವಿಎಸ್‌  ವೃತ್ತದಿಂದ ವಿಆರ್‌ಎಲ್‌ ಕಚೇರಿವರೆಗಿನ ಮಾರ್ಗವನ್ನು ಸ್ವತ್ಛಗೊಳಿಸಲಾಯಿತು. ನಿತೀನ್‌ಚಂದ್ರ,   ಸ್ವರೂಪ ಶೆಟ್ಟಿ ಹಾಗೂ ಜಿ.ಕೆ.ಉಡುಪ  ಸಹಿತ ಸುಮಾರು 75 ಜನ ಕಾರ್ಯಕರ್ತರು ಭಾಗವಹಿಸಿದರು.  

ಬೋಳಾರ: ಸೋದರಿ ನಿವೇದಿತಾ ಬಳಗದಿಂದ ಬೋಳಾರ್‌ನಲ್ಲಿ  ಸ್ವತ್ಛತಾ  ಕಾರ್ಯ ಜರಗಿತು. ಲೈಲಾ ಕಿಶೋರಿ ಹಾಗೂ ವಿನೋದ್‌ ಚಾಲನೆ ನೀಡಿದರು. ಅಧ್ಯಾಪಕಿ ವಿಜಯಲಕ್ಷಿ$¾à ಮಾರ್ಗದರ್ಶನದಲ್ಲಿ ಸದಸ್ಯರು ಬೋಳಾರ ಪ್ರಾಥಮಿಕ ಶಾಲಾ ಆವರಣದ ಒಳಗೆ ಹಾಗೂ ಹೊರ ಭಾಗಗಳನ್ನು ಶುಚಿಗೊಳಿಸಿದರು. ಕಾಂಚನಾ, ಪ್ರಜ್ವಲ್‌ ಹಾಗೂ ವೈಶಾಖ್‌ ಮೊದಲಾ ದವರು ಸುಮಾರು 500 ಮನೆಗಳಿಗೆ ತೆರಳಿ ಸ್ವತ್ಛತಾ ಜಾಗೃತಿ ಮೂಡಿಸಿದರು.

ಮುಳಿಹಿತ್ಲು: ಶ್ರೀ ಅಂಬಾಮಹೇಶ್ವರಿ ಭಜನ ಮಂದಿರದ ಸದಸ್ಯರು ಬೋಳಾರ ಫೆರಿ ರಸ್ತೆಯಲ್ಲಿ ಸ್ವತ್ಛತೆ ನಡೆಸಿದರು. ಪ್ರಾಧ್ಯಾಪಕ ಮೋಹನ್‌ ಹಾಗೂ ವಸಂತ ಪದ್ಮನ್‌  ಚಾಲನೆ ನೀಡಿದರು.  ನಿಕೇತನ್‌, ರಮೇಶ್‌ ಕೊಟ್ಟಾರಿ ನೇತೃತ್ವದಲ್ಲಿ ಬೋಳಾರ ಫೆರಿ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡೆ ಹಾಕಲಾಗಿದ್ದ ಹಳೆಯ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಕಳೆಗುಂದಿದ್ದ ನಾಲ್ಕು ಮಾರ್ಗಸೂಚಕ ಫಲಕಗಳನ್ನೂ ನವೀಕರಿಸಲಾಯಿತು. 

ಆರ್‌ ಟಿ ಓ ರಸ್ತೆ:  ಶ್ರೀಕೃಷ್ಣ  ಭವನ ಆಟೋಚಾಲಕರ ತಂಡದಿಂದ ಆರ್‌. ಟಿ.ಒ. ರಸ್ತೆಯಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಮುಖ್ಯವಾಗಿ ಮಾರ್ಗ ವಿಭಾಜಕಗಳಲ್ಲಿ ತುಂಬಿಕೊಂಡಿದ್ದ ಕಸ ಹಾಗೂ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸಲಾಯಿತು. ನೆಹರೂ  ಮೈದಾನದ ಎದುರು ಗೋಡೆ ಗಳಿಗೆ ಅಂಟಿಸಿದ್ದ ಪೋಸ್ಟರ್‌ಗಳನ್ನು ತೆಗೆಯಲಾಯಿತು. ಯೋಗೀಶ್‌ ಕುಮಾರ್‌, ವಿಲ್ಫಿ ಕಲ್ಲಾಪು,  ಸುಧೀರ್‌ ಬೋಳಾರ  ಸಹಿತ ಸುಮಾರು 40 ಜನ ಆಟೋಚಾಲಕರು ಪಾಲ್ಗೊಂಡರು. ಕಾರ್ಯಕ್ರಮವನ್ನು  ನವೀನ್‌ ಮಂಕಿಸ್ಟಾಂಡ್‌ ಹಾಗೂ ಗಣೇಶ್‌ ಬೋಳಾರ ಆಯೋಜಿಸಿದರು. 

ಬಲ್ಮಠ: ದೇಶಾಭಿಮಾನಿ ತಂಡದಿಂದ ಕೆಎಂಸಿ ಆಸ್ಪತ್ರೆ ಮುಂಭಾಗ ಹಾಗೂ ಜ್ಯೋತಿ ವೃತ್ತದ ಸುತ್ತಮುತ್ತ ಸ್ವತ್ಛತೆ ನಡೆಯಿತು. ಶ್ರೀಕರ ಪ್ರಭು ಹಾಗೂ ಪ್ರಭಾಕರ್‌  ಹಸಿರು ನಿಶಾನೆ ತೋರಿದರು. ಮೊದಲಿಗೆ ಕೆ.ಎಂ.ಸಿ. ಆಸ್ಪತ್ರೆಯ ಮುಂಭಾಗದ ಕಾಲು ದಾರಿ ಹಾಗೂ ರಸ್ತೆಗಳನ್ನು ಸ್ವತ್ಛಗೊಳಿಸಲಾಯಿತು. ಅನಂತರ ಪಕ್ಕದ ರಸ್ತೆಯ ಬದಿ ಹಾಗೂ ತೋಡುಗಳನ್ನು ಕಸಮುಕ್ತ ವನ್ನಾಗಿಸಲಾಯಿತು. ಸುಮಾರು 70 ಜನ ಕಾರ್ಯಕರ್ತರು  ಎರಡು ಗಂಟೆಗಳ ಕಾಲ ಶ್ರಮದಾನ ಮಾಡಿದರು. ಕಾರ್ಯಕ್ರಮ ವನ್ನು ನಾಗೇಶ್‌ ಹಾಗೂ ಅಶ್ವಿ‌ನ್‌ ಸಂಯೋಜಿಸಿದರು. 

ಮಣ್ಣಗುಡ್ಡ: ಗಾಂಧಿ ಪಾರ್ಕ್‌ನಲ್ಲಿ ಸ್ಥಳೀಯ ನಾಗರಿಕರು ಸ್ವತ್ಛತಾ ಕಾರ್ಯ ಆಯೋಜಿಸಿದ್ದರು. ಮನಪಾ ಸದಸ್ಯೆ ಜಯಂತಿ ಆಚಾರ್‌ ಹಾಗೂ ವಂದನಾ ನಾಯಕ್‌  ಚಾಲನೆ ನೀಡಿದರು. ಪಾರ್ಕಿನ ಒಳಗಡೆಯಿರುವ ಕಾಲುದಾರಿಯನ್ನು ಗುಡಿಸಿ ಸ್ವತ್ಛಗೊಳಿಸಲಾಯಿತು. ಪ್ರಾಧ್ಯಾ ಪಕಿ ಸ್ಮಿತಾ ಶೆಣೈ ಭಾಗವಹಿಸಿದರು.

ಕೆಪಿಟಿ: ಕರ್ನಾಟಕ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಪಾಲಿಟೆಕ್ನಿಕ್‌ ಮುಂಭಾಗದಲ್ಲಿ ಎರಡು ತಂಡಗಳಾಗಿ ಸ್ವತ್ಛತೆಯನ್ನು ನೆರವೇ ರಿಸಿದರು. ಮೊದಲ ತಂಡ ಹೆದ್ದಾರಿ ಹಾಗೂ ಪಕ್ಕದಲ್ಲಿರುವ ಆವರಣ ಗೋಡೆಯ ಬದಿಯ ಹುಲ್ಲು ಹಾಗೂ ಕಸವನ್ನು ತೆಗೆದು ಸ್ವತ್ಛಗೊಳಿಸಿದರು. ಮತ್ತೂಂದು ತಂಡ ಪಾಲಿಟೆಕ್ನಿಕ್‌ ಮುಂಭಾಗದ ಗೋಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಳನ್ನು ಕಿತ್ತು ಶುಚಿಗೊಳಿಸಿದರು. ಅನಂತರ ರಸ್ತೆ ಹಾಗೂ ಫ‌ುಟ್‌ಪಾತ್‌  ಸ್ವತ್ಛಗೊಳಿಸಿದರು. 

ಪಡೀಲ್‌: ಸ್ವತ್ಛ ಪಡೀಲ್‌ ತಂಡ ದಿಂದ ಸ್ವತ್ಛತಾ ಕಾರ್ಯಕ್ರಮ ನಡೆಯಿತು. ರತ್ನಾಕರ್‌ ಅಮೀನ್‌ ಹಾಗೂ  ಹರೀಶ್‌ ಆಚಾರ್‌ ಕಾರ್ಯಕ್ರಮವನ್ನು ಆರಂಭಗೊಳಿ ಸಿದರು.   ರೈಲ್ವೆ ಅಂಡರ್‌ ಪಾಸ್‌ನಿಂದ ಪೆರ್ಲ ವೀರನಗರ ವರೆಗೆ ರಸ್ತೆಯ ಎರಡು ಬದಿಗಳನ್ನು ಸ್ವತ್ಛಗೊಳಿಸಲಾಯಿತು. ಅಲ್ಲಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯವನ್ನು ತೆಗೆಯಲಾಯಿತು. ಸಂಯೋಜಕ ಉದಯ ಕೆ. ಪಿ.,  ಪಿ. ಟಿ. ಕೋಟ್ಯಾನ್‌ ಮತ್ತಿತರರು ಶ್ರಮದಾನಗೆ„ದರು. 

ದೇರಳಕಟ್ಟೆ:  ಕ್ಷೇಮ  ವೈದ್ಯಕೀಯ ವಿದ್ಯಾರ್ಥಿಗಳಿಂದ ಸ್ವತ್ಛತಾ ಅಭಿಯಾನ ದೇರಳಕಟ್ಟೆಯಲ್ಲಿ ನಡೆಯಿತು. ಡಾ| ಅನಿರ್ವಾನ್‌ ಚಕ್ರವರ್ತಿ ಹಾಗೂ ಡಾ| ಸಚಿನ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಸ್ಟಿಸ್‌ ಕೆ. ಎಸ್‌. ಹೆಗ್ಡೆ ಮೆಡಿಕಲ್‌ಅಕಾಡೆಮಿಯ ಮುಂಭಾಗದ ರಸ್ತೆಯಿಂದ ಫಾದರ್‌ ಮುಲ್ಲರ್‌ ಕಾಲೇಜಿ ನವರೆಗೆ ಸ್ವತ್ಛತೆಯನ್ನು ಕೈಗೊಳ್ಳಲಾಯಿತು. ಡಾ| ದೀಕ್ಷಿತ್‌, ಡಾ| ಅನುರಾಗ, ಡಾ| ಶಶಿಕುಮಾರ ಶೆಟ್ಟಿ ಸೇರಿ ದಂತೆ ಅನೇಕ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸ್ವತ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. 

ಕಾಟಿಪಳ್ಳ: ಜೆಸಿಐ ಗಣೇಶಪುರ ಸದಸ್ಯರಿಂದ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಿಯಾ ದೇವಾಡಿಗ ಹಾಗೂ ವಿದ್ಯಾರಾಜ್‌ ಶೆಟ್ಟಿ ಅಭಿಯಾನಕ್ಕೆ ಚಾಲನೆ ನೀಡಿದರು. ಕಾರ್ಯಕರ್ತರು ಗಣೇಶಪುರ ವೃತ್ತದಿಂದ ಎಂಆರ್‌ಪಿಎಲ್‌ ಕಾರ್ಗೊಗೇಟ್‌ ವರೆಗಿನ ಪರಿಸರವನ್ನು ಸ್ವತ್ಛಗೊಳಿಸಿದರು. ನವೋದಯ ಯುವಕ ವೃಂದ, ಟೀಂ ಆಸರೆ, ಕೇಸರಿ ಫ್ರೆಂಡ್ಸ್‌, ಹಾಗೂ ಕಾಟಿಪಳ್ಳ  ಪೋಸ್ಟ್‌ ಆಫೀಸ್‌ ಸಿಬ್ಬಂದಿ ಅಭಿಯಾನದಲ್ಲಿ ಭಾಗವಹಿ ಸಿದರು. ಚೇತನ್‌ಅಮೀನ್‌, ರಘುರಾಮ್‌ ತಂತ್ರಿ, ಪ್ರಶಾಂತ ನಾಯಕ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಡಾ| ಸಂಪತ್‌ ಕುಮಾರ ಅಭಿಯಾನವನ್ನು ಸಂಯೋಜಿಸಿದರು.  

ಕರಂಗಲಪಾಡಿ: ಸಂತ ಅಲೊಶಿ ಯಸ್‌ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿ ಗಳಿಂದ ಕರಂಗಲಪಾಡಿಯಲ್ಲಿ ಸ್ವತ್ಛತಾ ಕಾರ್ಯ ಜರಗಿತು. ಪ್ರಶೋಭ ಹಾಗೂ ಸನಲ್‌ ಕಾರ್ಯಕ್ರಮವನ್ನು ಆರಂಭಿಸಿ ದರು. ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮಾರ್ಗದರ್ಶನದಲ್ಲಿ ಕರಂಗಲಪಾಡಿ ಬಿಜೈ ಸೋನಿ ಟವರ್ಸ್‌ ಎದುರಿನ ರಸ್ತೆಯಲ್ಲಿ ಸ್ವತ್ಛತೆಯನ್ನು ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.