ಸ್ವತ್ಛ ಮಂಗಳೂರು ಅಭಿಯಾನ: 24 ಸ್ಥಳಗಳಲ್ಲಿ ಸ್ವತ್ಛತಾ ಕಾರ್ಯ


Team Udayavani, Mar 21, 2017, 5:00 PM IST

swatch-mangalore.jpg

ಮಹಾನಗರ: ಶ್ರೀ ರಾಮಕೃಷ್ಣ ಮಿಷನ್‌ನ ಆಶ್ರಯದಲ್ಲಿ ಸ್ವತ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ (ಮಾ.19) 24  ಸ್ಥಳಗಳಲ್ಲಿ ಸ್ವತ್ಛತಾ ಕಾರ್ಯಕ್ರಮ ನೆರವೇರಿತು.

ಪಾಂಡೇಶ್ವರ: ಪೊಲೀಸ್‌ ಸಿಬಂದಿ ಸ್ವಯಂ ಪ್ರೇರಣೆಯಿಂದ ಪಾಂಡೇಶ್ವರ ಠಾಣೆಯ ಆವರಣದಲ್ಲಿ ಸ್ವತ್ಛಗೊಳಿಸಿದರು. ಸ್ವಾಮಿ ಜಿತಕಾಮಾನಂದಜಿ ಹಾಗೂ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ  ಚಾಲನೆ ನೀಡಿದರು. ಪೊಲೀಸ್‌ ಉಪ ನಿರೀಕ್ಷಕ ಅನಂತ ಮುಡೇìಶ್ವರ ಹಾಗೂ ಸತ್ಯ ಅಭಿಯಾನ ಸಂಯೋಜಿಸಿದ್ದರು.

ಕೊಟ್ಟಾರ: ಕುಮಾರ್‌ ಜಿಮ್‌ ಫ್ರೆಂಡ್ಸ್‌ ಗೆಳೆಯರು ವತಿಯಿಂದ ಕೊಟ್ಟಾರಚೌಕಿಯಲ್ಲಿ ಸ್ವತ್ಛತಾ ಕಾರ್ಯ ನಡೆಯಿತು. ಜೆ. ಕೃಷ್ಣ ಪಾಲೆಮಾರ್‌ ಹಾಗೂ  ಪ್ರವೀಣ ಅಭಿಯಾನಕ್ಕೆ ಚಾಲನೆ ನೀಡಿದರು. ಕೊಟ್ಟಾರಚೌಕಿಯ ಮೇಲ್ಸೇತುವೆಯ ಕಂಬಗಳನ್ನು ಎರಡು ದಿನಗಳಿಂದಲೇ ಸ್ವತ್ಛ ಮಾಡುತ್ತಿದ್ದ ಯುವಕರ ತಂಡ  ಈಗ ಸುಂದರವಾಗಿ ಸಾಮಾಜಿಕ ಕಳಕಳಿಯುಳ್ಳ ಸಂದೇಶ ಮತ್ತು ಚಿತ್ರಗಳನ್ನು ಬರೆದರು. ಹರೀಶ್‌, ದಯಾನಂದ ಸಹಿತ ಸುಮಾರು 70  ಯುವಕರು ಸಹಕರಿಸಿದರು. ಕಿರಣ ಕುಮಾರ್‌  ಸಂಯೋಜಿಸಿದರು.

ಕಾವೂರು: ಸುಧಾಕರ್‌ ನೇತೃತ್ವದಲ್ಲಿ ಕಾವೂರು ವೃತ್ತದಲ್ಲಿ ಸ್ವತ್ಛತಾ ಅಭಿಯಾನ ನಡೆಯಿತು. ರಣದೀಪ ಕಾಂಚನ್‌ ಹಾಗೂ ರಾಮಚಂದ್ರ ರಾವ್‌  ಚಾಲನೆ ನೀಡಿದರು. ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವತ್ಛತೆ ಮಾಡಲಾಯಿತು. ಅಲ್ಲಲ್ಲಿ ನೇತಾಡುತ್ತಿದ್ದ ಹಳೆಯ ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬಾಟಲ್‌, ಪ್ಲಾಸ್ಟಿಕ್‌ ಹೆಕ್ಕಿ ಶುಚಿಗೊಳಿಸಲಾಯಿತು. ಸಚಿನ್‌, ಮೋಹನ್‌, ಸದಾನಂದ ರೈ ಸಹಿತ ಹಲವರು ಪಾಲ್ಗೊಂಡರು. 

ಫೋರಂ ಮಾಲ್‌: ಪೋರಂ ಫಿಜಾ ಮಾಲ್‌ ಸಿಬಂದಿ ಆಸಕ್ತಿಯಿಂದ ಸ್ವತ್ಛತಾ ಅಭಿಯಾನದಲ್ಲಿ ಭಾಗಿಗಳಾದರು. ನೆಹರೂ ವೃತ್ತದ ಮೂರೂ ರಸ್ತೆಗಳು, ಮಾರ್ಗ ವಿಭಾಜಕಗಳು ಹಾಗೂ ಪಕ್ಕದ ತೋಡುಗಳನ್ನು ಶುಚಿಗೊಳಿಸಲಾಯಿತು. ಇದಕ್ಕೂ ಮುನ್ನ ಸ್ವಾಮಿ ಜಿತಕಾಮಾನಂದಜಿ ಸಮ್ಮುಖದಲ್ಲಿ ಕ್ಯಾ| ಗಣೇಶ್‌ ಕಾರ್ಣಿಕ್‌ ಹಾಗೂ ಮನೋಜ್‌ ಸಿಂಗ್‌ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಅಶ್ವಿ‌ತ ಕುಮಾರ್‌ ಶೆಟ್ಟಿ ಹಾಗೂ ಸುನೀಲ್‌ ಕೆ.ಎಸ್‌. ಸಂಘಟಿಸಿದರು.

ಮಂಗಳಾದೇವಿ: ಶ್ರೀ ಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಮಂಗಳಾ ನಗರ ಹಾಗೂ ಮಂಕಿಸ್ಟಾಂಡ್‌ ಪರಿಸರದಲ್ಲಿ ಸ್ವತ್ಛತಾ ಕಾರ್ಯ ಜರಗಿತು. ರವಿಶಂಕರ್‌ ಹಾಗೂ ಸತ್ಯವತಿ  ಉದ್ಘಾಟಿಸಿದರು. 

ಯೆಯ್ನಾಡಿ: ಫ್ರೆಂಡ್ಸ್‌ ಫಾರ್‌ ಎವರ್‌ ಸದಸ್ಯರು ಯೆಯ್ನಾಡಿಯಲ್ಲಿ ಸ್ವತ್ಛತಾ ಅಭಿಯಾನ ನಡೆಸಿದರು. ದಿನೇಶ ಆಳ್ವ ಹಾಗೂ ಅರವಿಂದ ಹಸಿರು ನಿಶಾನೆ ತೋರಿಸಿದರು. ಅನಿಲ್‌ ಬೇಕಲ್‌, ಪ್ರಭಾಕರ್‌, ಸುಜಿತ್‌ ಮುಂತಾದವರು ಉಪಸ್ಥಿತರಿದ್ದರು. ಶುಭೋದಯ ಆಳ್ವ ಮಾರ್ಗದರ್ಶಿಸಿದರು.

ಪಂಪ್‌ವೆಲ್‌: ಗರೋಡಿ ಯುವಕರ ತಂಡದಿಂದ ಪಂಪ್‌ವೆಲ್‌ನಲ್ಲಿ ಸ್ವತ್ಛತಾ ಕಾರ್ಯಕ್ರಮ ಜರಗಿತು. ಸುಭಾಷ ಪಡೀಲ್‌ ಹಾಗೂ ಸಂದೀಪ ಪಂಪ್‌ವೆಲ್‌  ಉದ್ಘಾಟಿಸಿದರು. ಪೂಜಾರಾಜ್‌, ಅಶ್ವಿ‌ನ್‌ ನಾಯ್ಕ, ಪ್ರಕಾಶ ಗರೋಡಿ ಮತ್ತಿತರರು ಭಾಗವಹಿಸಿದ್ದರು. 

ಪಡೀಲ್‌: ಯೂತ್‌ ಸೆಂಟರ್‌ ಹಾಗೂ ಆಟೋ ಚಾಲಕರ ಸಹಯೋಗದಲ್ಲಿ ಪಡೀಲ್‌ನಲ್ಲಿ ಸ್ವತ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಪಡೀಲ್‌ ಜಂಕ್ಷನ್‌ ಸುತ್ತಮುತ್ತ ಸ್ವತ್ಛಗೊಳಿಸಲಾಯಿತು. ಅನಂತರ ಮನೆ ಮನೆ ಸಂಪರ್ಕಿಸಿ ಜಾಗೃತಿ ಕರಪತ್ರ ನೀಡಲಾಯಿತು. ಕಾರ್ಯಕ್ರಮವನ್ನು ಉದಯಕುಮಾರ ಕೆ. ಪಿ. ಸಂಯೋಜಿಸಿದರು.

ಕೊಂಡಾಣ: ಎ. ಸೀತಾರಾಂ ಮಾರ್ಗದರ್ಶನದಲ್ಲಿ ಮಿತ್ರನಗರದಲ್ಲಿ ಸ್ವತ್ಛತೆಯನ್ನು ಹಮ್ಮಿಕೊಳ್ಳಲಾಯಿತು. ರವೀಂದ್ರ ಶೆಟ್ಟಿ ಹಾಗೂ ಪ್ರತಿಮಾ ಹೆಬ್ಟಾರ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ನೂರಾರು ಮನೆ
ಗಳನ್ನು ಭೇಟಿ ನೀಡಿ ಸ್ವತ್ಛತೆ ಕಾಪಾ ಡುವಂತೆ ಮನವಿ ಮಾಡಲಾಯಿತು. ಪುಷ್ಪಕಲಾ ಬೀರಿ ಹಾಗೂ ಪ್ರವೀಣ ಕೊಂಡಾಣ ಸಹಿತ 70 ಮಂದಿ ಪಾಲ್ಗೊಂಡರು.

ನಂತೂರು: ಮನೆ ಮನೆಗೆ ಭೇಟಿ; ಕರಪತ್ರ ಹಂಚಿ ಜಾಗೃತಿ
ನಂತೂರು
: ದ.ಕ ಹವ್ಯಕ ಸಭಾದ ಸದಸ್ಯರಿಂದ  ಪಾದುವ ಜಂಕ್ಷನ್‌ನಿಂದ ನಂತೂರವರೆಗೆ ಸ್ವತ್ಛ ಮಾಡಲಾಯಿತು. ತಿಮ್ಮಪ್ಪಯ್ಯ ಹಾಗೂ ಬಾಲಕೃಷ್ಣ ಅಭಿಯಾನಕ್ಕೆ ಚಾಲನೆ ನೀಡಿದರು. 200 ಮನೆಗಳಿಗೆ ತೆರಳಿ ಸ್ವತ್ಛತೆಯ ಮಹತ್ವವನ್ನು ಸಾರುವ ಕರಪತ್ರ ಹಂಚಿ ಜಾಗೃತಿ ಮಾಡಲಾಯಿತು. ವೇಣುಗೋಪಾಲ ಭಟ್‌ ಹಾಗೂ ಡಾ| ರಾಜೇಂದ್ರ ಪ್ರಸಾದ್‌ ಕಾರ್ಯಕ್ರಮ ಸಂಯೋಜಿಸಿದರು. 

ರಥಬೀದಿ: ಸ. ಕಾಲೇಜಿನ ವಿದ್ಯಾರ್ಥಿಗಳಿಂದ ವೆಂಕಟರಮಣ ರಥಬೀದಿಯಲ್ಲಿ ಶ್ರಮದಾನ ನಡೆಯಿತು. ಪ್ರಾಚಾರ್ಯ ರಾಜಶೇಖರ್‌ ಹೆಬ್ಟಾರ್‌ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಪ್ರೊ| ಶೇಷಪ್ಪ ಅಮೀನ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿ ರಥಬೀದಿಯನ್ನು ಸ್ವತ್ಛಗೊಳಿಸಿ ದರು. ಅಲ್ಲದೇ ದಾರಿಹೋಕರಿಗೆ, ಅಂಗಡಿ ವರ್ತಕರಿಗೆ ಸ್ವತ್ಛತೆಯ ಕರಪತ್ರ ನೀಡಿ ಜಾಗೃತಿ ಮಾಡಲಾಯಿತು. 

ಬಿಜೈ ಚರ್ಚ್‌ ರಸ್ತೆ: ಸುಬ್ರಹ್ಮಣ್ಯ ಸಭಾದ ಆಶ್ರಯದಲ್ಲಿ ಬಿಜೈ ಚರ್ಚ್‌ ರಸ್ತೆ, ಕೊಡಿಯಾಲ್‌ಗ‌ುತ್ತು ಪರಿಸರದಲ್ಲಿ ಸ್ವತ್ಛತಾ ಅಭಿಯಾನ ಜರಗಿತು. ಪ್ರಭಾಕರ ಶೆಟ್ಟಿ ಹಾಗೂ ಉದಯಕುಮಾರ ಅಭಿಯಾನಕ್ಕೆ ಚಾಲನೆ ಕೊಟ್ಟರು. ಎಂ.ಆರ್‌. ವಾಸುದೇವ್‌ ನೇತೃತ್ವದಲ್ಲಿ ಕೊಡಿಯಾಲ್‌ಗ‌ುತ್ತು ರಸ್ತೆ ಹಾಗೂ ಸುತ್ತಮುತ್ತಲಿನ ಕಾಲುದಾರಿ ಹಾಗೂ ತೋಡುಗಳನ್ನು ಶುಚಿಗೊಳಿಸಲಾಯಿತು. ಶ್ರೀಕಾಂತ ರಾವ್‌ ಅಭಿಯಾನವನ್ನು ಸಂಯೋಜಿಸಿದರು. 

ಕರಂಗಲ್ಪಾಡಿ: ಸಂತ ಅಲೋಶಿಯಸ್‌ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕರಂಗಲ್ಪಾಡಿಯಲ್ಲಿ ಸ್ವತ್ಛತಾ ಕಾರ್ಯ ಹಮ್ಮಿಕೊಂಡಿದ್ದರು. ಪ್ರಾಧ್ಯಾಪಕರಾದ ಚಂದ್ರಶೇಖರ ಶೆಟ್ಟಿ ಹಾಗೂ ಡಾ| ರವೀಂದ್ರ ಸ್ವಾಮಿ  ಚಾಲನೆ ನೀಡಿದರು. ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮುಂದಾಳತ್ವದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು  ಶ್ರಮದಾನಗೈದರು. 

ಗಣೇಶಪುರ: ಜೆಸಿಐ ಸದಸ್ಯರಿಂದ ಗಣೇಶ ಪುರ ದೇವಸ್ಥಾನ ಮತ್ತು ಸುತ್ತಮುತ್ತಲಿನ ಸ್ಥಳ ಗಳಲ್ಲಿ ಅಭಿಯಾನ ನಡೆಯಿತು. ಗಣಪತಿ ಶೇಟ್‌ ಹಾಗೂ ವಿಜಯ್‌ ಕಾರ್ಯಕ್ರಮವನ್ನು ಆರಂಭ ಗೊಳಿಸಿದರು. ಮೊದಲಿಗೆ ದೇವಸ್ಥಾನದ ವಠಾರ ಸ್ವತ್ಛಗೊಳಿಸಲಾಯಿತು. ಅನಂತರ ಪೋಸ್ಟ್‌ ಆಫೀಸ್‌ ಆವರಣಗೋಡೆ ಹಾಗೂ ಹತ್ತಿರದ ಬಸ್‌ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು.

ಎಕ್ಕೂರು: ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿ ಕರು ಎಕ್ಕೂರಿನಲ್ಲಿ ಸ್ವತ್ಛತೆಗಾಗಿ ಶ್ರಮದಾನ ನಡೆಸಿದರು. ಜಯಂತಿ ಆನಂದ ಹಾಗೂ ವಿಮಲಾ ಆರಂಭಗೊಳಿಸಿದರು. ಎಕ್ಕೂರಿನ ಅಡ್ಡರಸ್ತೆ ಹಾಗೂ ಭಜನ ಮಂದಿರದ ಸುತ್ತಮುತ್ತ ಸ್ವತ್ಛತೆ ನಡೆಸಲಾ ಯಿತು. ಶೋಭಾ, ಪ್ರೇಮಾ ಹಾಗೂ ಗೌತಮ್‌ ಸಹಿತ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡರು. 

ಬೋಳಾರ: ಶಿಕ್ಷಕಿ ವಿಜಯಲಕ್ಷಿ$¾à ಮಾರ್ಗ ದರ್ಶನ ದಲ್ಲಿ ಸೋದರಿ ನಿವೇದಿತಾ ಬಳಗದವರಿಂದ ಮಂಗಳಾದೇವಿಯಿಂದ ಬೋಳಾರ  ಜಂಕ್ಷನ್‌ವರೆಗೆ ಸ್ವತ್ಛತಾ ಕಾರ್ಯ ಜರಗಿತು. ಉಷಾ ದಿನಕರ್‌ ರಾವ್‌ ಹಾಗೂ ಚಂದ್ರನ್‌  ಚಾಲನೆ ನೀಡಿದರು

ಚೆಂಬುಗುಡ್ಡೆ: ಜೈ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರ ನೇತೃತ್ವದಲ್ಲಿ ಚೆಂಬುಗುಡ್ಡೆ ರುದ್ರಭೂಮಿಯಲ್ಲಿ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ರಾಮಚಂದ್ರ ಹಾಗೂ ಪುರುಷೋತ್ತಮ್‌ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ವಿಠೊಭ ರುಕ್ಮಯ್ಯ ಭಜನ ಮಂದಿರ, ಅಮ್ಮ ಭಗವಾನ್‌ ಮಾನವ ಸೇವಾ ಸಮಿತಿ, ಜಗತ್‌ ಫ್ರೆಂಡ್ಸ್‌ ಸರ್ಕಲ್‌, ವೆಲಕಮ್‌ ಗ್ರೂಪ್‌, ಉಮಾಮಹೇಶ್ವರಿ ದೇವಸ್ಥಾನದ ಸಹಯೊಗ ದೊಂದಿಗೆ ಅಭಿಯಾನವನ್ನು ನಡೆಸಲಾಯಿತು. ವೇದಿತ ಕುಮಾರ ಸಂಯೋಜಿಸಿದರು.

ಫಳ್ನೀರ್‌: ಲಯನ್ಸ್‌ ಕ್ಲಬ್‌ ಸದಸ್ಯರಿಂದ ಫಳ್ನೀರ್‌ ಹೈಲ್ಯಾಂಡ್‌ನ‌ಲ್ಲಿ ಸ್ವತ್ಛತಾ ಕಾರ್ಯಕ್ರಮ ಜರಗಿತು. ತಾರಾನಾಥ ಶೆಟ್ಟಿ ಹಾಗೂ ಸುರೇಶ್‌ ರೈ ಕಾರ್ಯಕ್ರಮ ಶುಭಾರಂಭಗೊಳಿಸಿದರು. ರಸ್ತೆಗಳ ಬದಿಗಳನ್ನು ಹಾಗೂ ತೋಡಿನಲ್ಲಿದ್ದ ತ್ಯಾಜ್ಯವನ್ನು ತೆಗೆದು ಸ್ವತ್ಛಗೊಳಿಸಲಾಯಿತು. ಸದಾಶಿವ ರೈ ಹಾಗೂ ಸುರೇಶ್‌ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.

ಮೇರ್ಲಪದವು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮೇರ್ಲಪದವಿನಲ್ಲಿ ಸ್ವತ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಗ್ರಾ.ಪಂ. ಸದಸ್ಯ ಅಶೋಕ್‌ ಹಾಗೂ ರಾಜೇಶ್‌ ಶೆಟ್ಟಿ  ಚಾಲನೆ ನೀಡಿದರು. 

ಏರ್‌ಪೋರ್ಟ್‌ ರಸ್ತೆ: ಕೆಪಿಟಿ ವಿದ್ಯಾರ್ಥಿ ಗಳಿಂದ ಏರ್‌ಪೋರ್ಟ್‌ ರಸ್ತೆಯಲ್ಲಿ ಸ್ವತ್ಛತಾ ಕಾರ್ಯ ನಡೆಯಿತು. ರೊನಾಲ್ಡ್‌ ಮಿರಾಂಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆ ಏರ್‌ಪೋರ್ಟ್‌ ರಸ್ತೆ ಹಾಗೂ ಫುಟ್‌ಪಾತ್‌ ಗುಡಿಸಿ ಶುಚಿಗೊಳಿಸಿದರು. ಅನಂತರ ಪಾಲಿಟೆಕ್ನಿಕ್‌ ಮುಂಭಾಗದಗೊಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಳನ್ನು ಕಿತ್ತು ಶುಚಿಗೊಳಿಸಿದರು. 

ಗೂಡ್‌ಶೆಡ್‌ ರಸ್ತೆ: ಗೋಪಾಲಕೃಷ್ಣ ಕುಂಬ್ಳೆ ನೇತೃತ್ವದಲ್ಲಿ ನಿರೇಶ್ವಾಲ್ಯ ರಸ್ತೆಯಲ್ಲಿ ಸ್ವತ್ಛತೆ ಕೈಗೊಳ್ಳಲಾಯಿತು. ದೇವರಾಜ್‌ ಕಾಮತ್‌ ಹಾಗೂ ಮಾಧವ ಶೆಟ್ಟಿ  ಚಾಲನೆ ನೀಡಿದರು. 

ಕೊಣಾಜೆ: ಮಂಗಳೂರು ವಿವಿ ವಿದ್ಯಾರ್ಥಿ ಗಳಿಂದ ಸ್ವತ್ಛತಾ ಕಾರ್ಯ ಜರಗಿದ್ದು, ಡಾ| ಸುದೀಪ ಹಾಗೂ ಶ್ರೀಲತಾ ಚಾಲನೆ ನೀಡಿದರು. ಅಶೋಕ, ಶಶಾಂಕ , ವಿದ್ಯಾರ್ಥಿಗಳು  ಭಾಗವಹಿಸಿದರು. 

ದೇರೆಬೈಲ್‌: ಪ್ರಶಾಂತ ನಗರದಲ್ಲಿ ಸ್ವತ್ಛತಾ ಕಾರ್ಯಕ್ರಮ ಜರಗಿತು. ಮನಪಾ ಸದಸ್ಯ ರಾಜೇಶ್‌ ಹಾಗೂ ಎನ್‌.ಎಲ್‌. ರಾವ್‌  ಚಾಲನೆ ನೀಡಿದರು. ಪ್ರಶಾಂತ ನಗರ ಅಸೋಸಿಯೇಶನ್‌ ಸದಸ್ಯರು ಸಹಯೋಗ ಒದಗಿಸಿದರು. 

ಅಶೋಕ ನಗರ: ಎಂಸಿಎಫ್‌ ಮಂಗಳಾ ಸಿಬಂದಿಯಿಂದ ಸ್ವತ್ಛತಾ ಅಭಿಯಾನ ನಡೆಯಿತು. ಮನಪಾ ಸದಸ್ಯ ರಾಧಾಕೃಷ್ಣ  ಹಾಗೂ ಪ್ರಭಾಕರ್‌ ರಾವ್‌ ನಿಶಾನೆ ತೋರಿದರು. ಸಾಯಿ ಫ್ರೆಂಡ್ಸ್‌ ಹಾಗೂ ಸ್ಪಂದನ ಫ್ರೆಂಡ್ಸ್‌ ಸ್ವತ್ಛತಾ ಸಹಕರಿಸಿದರು. 

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

ಹೊಸ ವರ್ಷಾಚರಣೆಗೆ ಡ್ರಗ್ಸ್‌ ಪಾರ್ಟಿ: ಪೊಲೀಸ್‌ ನಿಗಾ

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

3

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.