ಧರ್ಮಸ್ಥಳದ ಮಂಜೂಷಾಕ್ಕೆ ಟಿ-565 ಯುದ್ಧ ಟ್ಯಾಂಕರ್!
Team Udayavani, Dec 1, 2022, 7:23 AM IST
ಬೆಳ್ತಂಗಡಿ: ಭಾರತದ ರಕ್ಷಣಾ ಸಚಿವಾಲಯದಿಂದ ಪುಣೆಯ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ಸಂಗ್ರಹಾಲಯಕ್ಕೆ ಟಿ-565 ಯುದ್ಧ ಟ್ಯಾಂಕರ್ ಕೊಡು ಗೆಯಾಗಿ ನೀಡಲಾಯಿತು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಟಿ-565 ಟ್ಯಾಂಕರನ್ನು ಬರಮಾಡಿಕೊಂಡು ವೀಕ್ಷಿಸಿದರು. ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಜತೆಗಿದ್ದರು.
1968ರಲ್ಲಿ ಭಾರತೀಯ ಸೇನೆಗೆ ಈ ಟ್ಯಾಂಕರನ್ನು ಸೇರ್ಪಡೆಗೊಳಿಸಲಾಗಿತ್ತು. ರಕ್ಷಣ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ.
1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಇದು ಬಳಕೆಯಾಗಿದೆ.
ತಾಂತ್ರಿಕ ಮಾಹಿತಿ: ಟಿ-565 ಟ್ಯಾಂಕ್ ವಿ-55 (ವಿ-54) ವಿ-12 ವಾಟರ್ ಕೂಲ್ಡ್ ಎಂಜಿನ್ ಅಗಿದೆ. ಸುಮಾರು 40 ಟನ್‌ಗಳಷ್ಟು ತೂಕ ಹೊಂದಿದ್ದು, ಟ್ಯಾಂಕ್ 9 ಅಡಿ ಎತ್ತರ ಹಾಗೂ 27.6 ಅಡಿ ಉದ್ದ ಮತ್ತು 10.8 ಅಗಲವಿದೆ. ಇದರ ಗರಿಷ್ಠ ವೇಗ ಗಂಟೆಗೆ 51 ಕಿ.ಮೀ. ಆಗಿದ್ದು 500 ಅಶ್ವಶಕ್ತಿ ಸಾಮರ್ಥ್ಯ ಹೊಂದಿದೆ.
ಟಿ-565 ಟ್ಯಾಂಕರನ್ನು ಸೋವಿಯತ್ ಒಕ್ಕೂಟ ಸಿಬಂದಿ ತಯಾರಿಸಿದ್ದಾರೆ. ಇದು ಒಳಗೆ ನಾಲ್ವರು ಸೈನಿಕರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.