ನೆಕ್ಕಿಲಾಡಿ ಜಿ.ಸಿ.ಐ. ಘಟಕ ವತಿಯಿಂದ ಟೇಕ್ ಆಫ್ ಪುನಶ್ಚೇತನ ತರಬೇತಿ
Team Udayavani, May 9, 2017, 7:33 PM IST
ಉಪ್ಪಿನಂಗಡಿ: ಜೆ.ಸಿ.ಐ. ನೆಕ್ಕಿಲಾಡಿ ಘಟಕದ ಆಶ್ರಯದಲ್ಲಿ ಜೆ.ಸಿ.ಐ. ಉಪ್ಪಿನಂಗಡಿ, ಆಲಂಕಾರು ಘಟಕಗಳ ಸದಸ್ಯರಿಗೆ ಜಂಟಿಯಾಗಿ ಪುನಶ್ಚೇತನ ತರಬೇತಿ ಶಿಬಿರ ನೆಕ್ಕಿಲಾಡಿಯ ಗುರುರಾಘವೇಂದ್ರ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ವಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ರೈ ಅವರು ಶಿಬಿರವನ್ನು ಉದ್ಘಾಟಿಸಿದರು. ವಲಯಾಧಿಕಾರಿ ಹಾಗೂ ವಲಯ ವಲಯ ತರಬೇತುದಾರರಾಗಿರುವ ಪ್ರದೀಪ್ ಬಾಕಿಲ ಅವರು ಜೆ.ಸಿ. ಸದಸ್ಯರಿಗೆ ಸಂಸ್ಥೆಯ ಪ್ರಾರಂಭ, ವಿವಿಧ ಅಧಿಕಾರಿಗಳಿಗಿರುವ ಜವಾಬ್ದಾರಿಗಳು ಸೇರಿದಂತೆ ಜೇಸಿ ಸಂಸ್ಥೆಗೆ ಸಂಬಂಧಿಸಿದ ಉಳಿದ ಸವಿವರ ಮಾಹಿತಿಗಳನ್ನು ನೀಡಿದರು.
ನೆಕ್ಕಿಲಾಡಿ ಘಟಕದ ವಲಯಾಧ್ಯಕ್ಷ ಶಿವಕುಮಾರ್ ಬಾರಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಜೆಸಿಐ ಅಧ್ಯಕ್ಷ ಕೇಶವ ರಂಗಾಜೆ, ಆಲಂಕಾರು ಜೆಸಿಐ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿನೀತ್ ಶಗ್ರಿತ್ತಾಯ ಅವರು ಧನ್ಯವಾದ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ನೆಕ್ಕಿಲಾಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಮಠಕ್ಕೆ ಜೆಸಿಐ ನೆಕ್ಕಿಲಾಡಿ ವತಿಯಿಂದ ನೂತನ ನಾಮಫಲಕವನ್ನು ಹಸ್ತಾಂತರಿಸುವ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ರೈ, ಶಿವಕುಮಾರ್ ಬಾರಿತ್ತಾಯ, ವಿನೀತ್ ಶಗ್ರಿತ್ತಾಯ, ನಿತಿನ್ ಶೆಟ್ಟಿ, ಅಮಿತಾ ಹರೀಶ್, ವೈಶಾಲಿ ಮಹೇಶ್ ಕುಂದರ್ ಮತ್ತು ಮಠದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.