ತಲಪಾಡಿ: ಟೋಲ್ ಫ್ಲಾಝಾ ಕಾರ್ಯಾರಂಭ
Team Udayavani, Feb 9, 2017, 3:45 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯ ಟೋಲ್ ಫ್ಲಾಝಾದಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬುಧವಾರದಿಂದ ಟೋಲ್ ಸಂಗ್ರಹ ಪ್ರಾರಂಭಗೊಂಡಿದೆ.
ನವಯುಗ್ ಸಂಸ್ಥೆಯಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಸ್ಥಳೀಯ ಸಂಘಟನೆಗಳು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಬುಧವಾರ ಬೆಳಗ್ಗೆ 8.30ಕ್ಕೆ ಪ್ರತಿಭಟನೆಯ ನಡುವೆಯೇ ಪೊಲೀಸರ ಬಿಗು ಭದ್ರತೆಯಲ್ಲಿ ಟೋಲ್ ಸಂಗ್ರಹ ಪ್ರಾರಂಭಗೊಂಡಿತು.
10 ಟ್ರಾಕ್‌ಗಳಲ್ಲಿ ಸಂಗ್ರಹ ತಲಪಾಡಿಯಲ್ಲಿ ಆಧುನಿಕವಾಗಿ ನಿರ್ಮಾಣಗೊಂಡಿರುವ ಟೋಲ್ ಫ್ಲಾಝಾದಲ್ಲಿ ಏಕಮುಖದಲ್ಲಿ 5 ಟ್ರಾಕ್ ವ್ಯವಸ್ಥೆ ಮತ್ತು ದ್ವಿಮುಖದಲ್ಲಿ 5 ಟ್ರಾಕ್ ವ್ಯವಸ್ಥೆ ಮಾಡಿದ್ದು, ಒಟ್ಟು 10 ಟ್ರಾಕ್‌ಗಲ್ಲಿ ಟೋಲ್ ಸಂಗ್ರಹ ನಡೆಯಲಿದೆ. ಲಘು ವಾಹನ, ವಾಣಿಜ್ಯ ವಾಹನ, ಬಸ್, ಟ್ರಕ್‌ಗಳಿಗೆ ಮೂರು ಟ್ರಾಕ್‌ಗಳಿದ್ದರೆ, ಫಾಸ್ಟ್ ಟ್ರಾಕ್ ಮತ್ತು ಭಾರೀ ಸರಕು ಸಾಗಾಟದ ವಾಹನಗಳಿಗೆ ಪ್ರತ್ಯೇಕ ಟ್ರಾಕ್‌ಗಳನ್ನು ದ್ವಿಮುಖ ಸಂಚಾರಧಿದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರತಿಭಟನೆ: ಪೊಲೀಸ್ ವಶಕ್ಕೆ
ಟೋಲ್ ಪ್ರಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗಡಿನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು, ಬಸ್ ಮಾಲಕರು, ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿದ 12 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕ ಟೋಲ್ ಸಂಗ್ರಹ ನಿರಾತಂಕವಾಗಿ ನಡೆಯಿತು.
ಮುಂದುವರಿದ ಟೋಲ್ ಸಂಗ್ರಹ
ಟೋಲ್ ಪ್ರಾರಂಭದ ಸಂದರ್ಭದಲ್ಲಿ ನಡೆದ ಪ್ರತಿರೋಧ ಬಿಟ್ಟರೆ ಬುಧವಾರ ರಾತ್ರಿ ವರೆಗೆ ಯಾವುದೇ ಅಡೆತಡೆಯಿಲ್ಲದೆ ಟೋಲ್ ಸಂಗ್ರಹ ನಡೆದಿದೆ. ಸ್ಥಳೀಯರು ಸೇರಿದಂತೆ 65ಕ್ಕೂ ಹೆಚ್ಚು ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇಂದು ಪ್ರತಿಭಟನೆ
ಕಾಮಗಾರಿ ಪೂರ್ತಿಗೊಳಿಸದೆ ಟೋಲ್ ಸಂಗ್ರಹವನ್ನು ವಿರೋಧಿಸಿ ಐಕ್ಯ ಪ್ರಜಾಪ್ರಭುತ್ವ ವೇದಿಕೆಯ ಯುವಜನ ವಿಭಾಗ ಮತ್ತು ಗಡಿನಾಡು ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಫೆ. 9ರಂದು ಬೆಳಗ್ಗೆ 8 ಗಂಟೆಗೆ ಟೋಲ್‌ಗೇಟ್ ಎದುರು ಪ್ರತಿಭಟನೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.