ಪೇಟೆ ಹತ್ತಿರವಿದ್ದರೂ ಅಭಿವೃದ್ಧಿ ಕಾಣದ ಗ್ರಾಮ
Team Udayavani, Aug 31, 2021, 3:50 AM IST
ತಾಳಿಪಾಡಿ ಗ್ರಾಮವು ಕಿನ್ನಿಗೋಳಿ ಪೇಟೆಗೆ ಹತ್ತಿರವಿದ್ದರೂ ಇನ್ನು ಅಭಿವೃದ್ಧಿಯಾಗಿಲ್ಲ. ಇಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸಬೇಕಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ಗ್ರಾಮದ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನ “ಒಂದು ಗ್ರಾಮ-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.
ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಪೂರ್ವ ಭಾಗದಲ್ಲಿರುವ ಗ್ರಾಮವೇ ತಾಳಿಪಾಡಿ. ಈ ಗ್ರಾಮಕ್ಕೆ ಕಿನ್ನಿಗೋಳಿ ಪೇಟೆಯೇ ಪ್ರಧಾನವಾಗಿದೆ. ಆದರೆ ಕಿನ್ನಿಗೋಳಿ ಪೇಟೆ ಮಾತ್ರ ಅಭಿವೃದ್ಧಿಯಾಗಿದ್ದು, ತಾಳಿಪಾಡಿ ಮಾತ್ರ ಗ್ರಾಮಾಂತರವಾಗಿಯೇ ಉಳಿದಿದೆ.
ತಾಳಿಪಾಡಿ ಹಾಗೂ ಮೆನ್ನಬೆಟ್ಟು ಈ ಎರಡು ಗ್ರಾಮಗಳು ಕಿನ್ನಿಗೋಳಿ ಪೇಟೆಯನ್ನು ಎರಡು ಭಾಗವಾಗಿ ಹಂಚಿಕೊಂಡಿವೆ. ಆದರೆ ಸಂತೆ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣ, ಹೆಚ್ಚಿನ ವಸತಿ ಸಮುಚ್ಚಯಗಳು, ರಾಷ್ಟ್ರೀಯ ಬ್ಯಾಂಕ್‌ಗಳು , ಮುಖ್ಯ ಅಂಚೆ ಕಚೇರಿ, ಪಟ್ಟಣ ಪಂಚಾಯುತ್ ಕಚೇರಿ, ಶಾಲಾ-ಕಾಲೇಜುಗಳು ತಾಳಿಪಾಡಿ ಗ್ರಾಮದಲ್ಲಿವೆ. ಇಲ್ಲಿ ಮುಖ್ಯವಾಗಿ ಟ್ರಾಫಿಕ್ ಸಮಸ್ಯೆ ಹಾಗೂ ಪಾರ್ಕಿಂಗ್ ಸಮಸ್ಯೆ, ಒಳಚರಂಡಿ ಯೋಜನೆ, ವಸತಿ ಸಮುಚ್ಚಯಗಳಿಗೆ ನೀರಿನ ಸಮಸ್ಯೆ ಪ್ರಮುಖವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನೀರು ಸರಬರಾಜು ಸಮಸ್ಯೆಗೆ ಪರಿಹಾರಕ್ಕಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನವಾಗಬೇಕು ಎಂಬುದು ಸ್ಥಳೀಯರ ಆಗ್ರಹ.
ತಾಳಿಪಾಡಿ ಪರಿಸರದಲ್ಲಿ ಹಲವಾರು ಕಿಂಡಿ ಅಣೆಕಟ್ಟುಗಳು ಶಿಥಿಲವಾಗಿವೆ. ಇವುಗಳನ್ನು ದುರಸ್ತಿಪಡಿಸಬೇಕಿದೆ. ಇದಕ್ಕೆ ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಸಂಪರ್ಕ ರಸ್ತೆಗಳ ಅಭಿವೃದ್ಧಿ ಅಗತ್ಯ:
ಗ್ರಾಮೀಣ ಪ್ರದೇಶದ ಕೆಲ ರಸ್ತೆಗಳ, ಸಂಪರ್ಕ ಕೊಂಡಿ ರಸ್ತೆಗಳು ಇನ್ನು ಅಭಿವೃದ್ಧಿ ಹೊಂದಿಲ್ಲ. ಪುನರೂರು ಒಳಭಾಗದ ಪುನರೂರು ಮಿಲ್ ರಸ್ತೆ, ತಾಳಿಪಾಡಿಯಿಂದ ಪುನರೂರು-ಕಾಚೂರು ಸಂರ್ಪಕಿಸುವ ರಸ್ತೆ ದುರಸ್ತಿ ಆಗಬೇಕಿದೆ. ಪದ್ಮನೂರು ಬಾಬಾಕೋಡಿ ರಸ್ತೆ ಅಭಿವೃದ್ಧಿ ಆಗಬೇಕಿದೆ. ಹೆಚ್ಚಿನ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಕಿನ್ನಿಗೋಳಿ ಲಿಟ್ಲ
ಫÉವರ್ ಶಾಲೆಯ ಬದಿಯಲ್ಲಿ ತುಡಾಮ ರಸ್ತೆ ಸಂಪರ್ಕ ರಸ್ತೆಯಾಗಿದ್ದು ಸಾಕಷ್ಟು ವಾಹನಗಳು ಮೂರು ಕಾವೇರಿ ಸುತ್ತು ಬಳಸಿ ಹೋಗುವ ಬದಲು ಇದೇ ರಸ್ತೆಯನ್ನು ಆಶ್ರಯಿಸಿವೆ. ಈ ರಸ್ತೆಯ ಅಗಲ ಕಿರಿದಾಗಿದ್ದು ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್ ಕಾಮಗಾರಿ ಮಾಡಬೇಕಿದೆ.
ಇತರ ಸಮಸ್ಯೆಗಳೇನು? :
- ತಾಳಿಪಾಡಿ ಗ್ರಾಮಕ್ಕೆ ಸಮಗ್ರವಾಗಿ ಒಳಚರಂಡಿ ಯೋಜನೆ ಅನುಷ್ಠಾನವಾಗಬೇಕಿದೆ.
- ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣ, ಮುಖ್ಯರಸ್ತೆ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
- ಈ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸುವುದು ತುರ್ತು ಅಗತ್ಯವಿದೆ.
- ಖಾಯಂ ರೈತ ಸಂಪರ್ಕ ಕೇಂದ್ರ ಆಗಬೇಕಿದೆ.
- ಪೊಲೀಸ್ ಹೊರಠಾಣೆ ಆರಂಭಿಸಬೇಕಿದೆ.
- ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ ವಾಚನಾಲಯ ನಿರ್ಮಾಣವಾಗಬೇಕಿದೆ.
- ಪುನರೂರು, ತಾಳಿಪಾಡಿಯ ಗುತ್ತು ಬಳಿ ಹರಿಯುವ ಚಿಕ್ಕ ನದಿಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ಭತ್ತದ ಗದ್ದೆಗಳಿಗೆ ನೆರೆ ಭೀತಿ ಎದುರಾಗಿದೆ. ತಡೆಗೋಡೆ ನಿರ್ಮಾಣ ಅಗತ್ಯ.
- ಸುವ್ಯವಸ್ಥಿತ ದಾರಿದೀಪದ ವ್ಯವಸ್ಥೆ ಆಗಬೇಕಿದೆ.
- ಕಿನ್ನಿಗೋಳಿ ಸಂತೆ ದಿನವಹಿ ಮಾರ್ಕೆಟ್‌ನೊಳಗೆ ಕೊಳಚೆ ಹಾಗೂ ಮಳೆಗಾಲದಲ್ಲಿ ನೀರು ನಿಂತು ರಾಡಿಯಾಗುತ್ತದೆ. ಕಾಂಕ್ರೀಟ್ ಅಥವಾ ಇಂಟರ್‌ಲಾಕ್ ಆಳವಡಿಸಬೇಕಿದೆ.
- ಗ್ರಾಮಕ್ಕೆ ಶ್ಮಶಾನ ನಿರ್ಮಾಣ ಆಗಬೇಕಾಗಿದೆ.
- ತಾಳಿಪಾಡಿ ಗ್ರಾಮದಲ್ಲಿ ಮನೆ ನಿವೇಶನ ಹಂಚಿಕೆಯಾಗಬೇಕಿದೆ.
-ರಘುನಾಥ ಕಾಮತ್ ಕೆಂಚನಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
MUST WATCH
ಹೊಸ ಸೇರ್ಪಡೆ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.