ಶಾಸಕರಿಂದ ಜಿಲ್ಲಾಧಿಕಾರಿ ಜತೆ ಚರ್ಚೆ; ಸಮರ್ಪಕ ನೀರು ಪೂರೈಕೆಗೆ ಆಗ್ರಹ
Team Udayavani, Apr 24, 2019, 5:50 AM IST
ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ ಅವರು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಮಹಾನಗರ: ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಕುರಿತು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ ಅವರು ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳೊಂದಿಗೆ ಮಂಗಳವಾರ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ ಪೂರಕ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ನಗರದಲ್ಲಿ ಎಲ್ಲ ಪ್ರದೇಶಗಳಿಗೂ ಕುಡಿಯುವ ನೀರು ವಿತರಣೆಗೆ ಅವಶ್ಯ ಕ್ರಮಗಳನ್ನು ತುರ್ತು ನೆಲೆಯಲ್ಲಿ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
ಶಾಸಕ ವೇದವ್ಯಾಸ ಕಾಮತ್, ನಗರದಲ್ಲಿ ರೇಷನಿಂಗ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ನೀರು ವಿತರಣೆಯಲ್ಲಿ ತಲೆದೋರಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯವರಿಗೆ ವಿವರಿಸಿ, ತುಂಬೆ ಮತ್ತು ಎಎಂಆರ್ ವೆಂಟೆಡ್ ಡ್ಯಾಂಗೆ ತಾನು, ಶಾಸಕ ಡಾ| ಭರತ್ ಶೆಟ್ಟಿ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಪ್ರಸ್ತುತ ತುಂಬೆಯಲ್ಲಿ ನೀರು ಸಂಗ್ರಹವಿದೆ. ಅದು ದರಿಂದ ಸದ್ಯ ರೇಷನಿಂಗ್ ವ್ಯವಸ್ಥೆ ಯನ್ನು ಮುಂದೂಡಬೇಕು ಎಂದರು.
ಶಾಸಕ ಡಾ| ಭರತ್ ಶೆಟ್ಟಿ, ಮಾಜಿ ಮೇಯರ್ ಗಣೇಶ್ ಹೊಸ ಬೆಟ್ಟು, ಮಾಜಿ ಉಪಮೇಯರ್ ರಾಜೇಂದ್ರ, ಮನಪಾ ಮಾಜಿ ವಿಪಕ್ಷ ನಾಯಕರಾದ ಪ್ರೇಮಾನಂದ ಶೆಟ್ಟಿ , ರೂಪಾ ಡಿ. ಬಂಗೇರ, ಸುಧೀರ್ ಶೆಟ್ಟಿ , ಕಣ್ಣೂರು, ಮಾಜಿ ಕಾರ್ಪೊರೇಟರ್‌ಗಳಾದ ವಿಜಯ ಕುಮಾರ್, ಸುರೇಂದ್ರ, ಪೂರ್ಣಿಮಾ, ರಾಜೇಶ್, ನವೀನ್‌ಚಂದ್ರ, ಮೀರಾ ಕರ್ಕೆರಾ, ನಿತಿನ್ ಕುಮಾರ್, ರವಿಶಂಕರ ಮಿಜಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.