ಜಿ.ಪಂ., ತಾ.ಪಂ.: ಜನಪ್ರತಿನಿಧಿ ರಹಿತ ಆಡಳಿತಕ್ಕೆ ಒಂದು ವರ್ಷ
Team Udayavani, May 14, 2022, 6:25 AM IST
ಮಂಗಳೂರು: ಅಧಿಕಾರ ವಿಕೇಂದ್ರಿಕರಣದಲ್ಲಿ ಪ್ರಮಖ ಭಾಗವಾಗಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡು ಒಂದು ವರ್ಷ ಪೂರ್ಣಗೊಂಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿ.ಪಂ.ನ ಚುನಾಯಿತ ಅವಧಿ 2021ರ ಎ. 27ಕ್ಕೆ ಮುಕ್ತಾಯಗೊಂಡು 5 ವರ್ಷಗಳ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿತ್ತು ದಕ್ಷಿಣ ಕನ್ನಡದಲ್ಲಿ ಮಂಗಳೂರು, ಪುತ್ತೂರು, ಕಡಬ ಹಾಗೂ ಮೂಡುಬಿದಿರೆ ತಾ.ಪಂ.ಗಳ ಚುನಾಯಿತ ಅವಧಿ 2021ರ ಮೇ 7ಕ್ಕೆ; ಬಂಟ್ವಾಳ, ಬೆಳ್ತಂಗಡಿ ತಾ.ಪಂ.ಗಳ ಚುನಾಯಿತ ಅವಧಿ ಮೇ 10ಕ್ಕೆ ಹಾಗೂ ಸುಳ್ಯ ತಾ.ಪಂ.ನ ಚುನಾಯಿತ ಅವಧಿ ಮೇ 5ಕ್ಕೆ ಕೊನೆಗೊಂಡಿತ್ತು. ಈಗ ಹೊಸದಾಗಿ ಉಳ್ಳಾಲ ಮತ್ತು ಮೂಲ್ಕಿ ತಾ.ಪಂ.ಗಳು ಸೇರ್ಪಡೆಯಾಗಿದ್ದು, ಒಟ್ಟು ಸಂಖ್ಯೆ 9ಕ್ಕೇರಿದೆ.
ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾ.ಪಂ.ಗಳ ಅಧಿಕಾರಾವಧಿ 2021ರ ಮೇ 10ರೊಳಗೆ ಪೂರ್ಣಗೊಂಡಿತ್ತು. ಹೊಸದಾಗಿ ಕಾಪು, ಬ್ರಹ್ಮಾವರ, ಬೈಂದೂರು ಮತ್ತು ಹೆಬ್ರಿ ತಾಲೂಕುಗಳು ರಚನೆಯಾಗಿದ್ದು, ತಾ.ಪಂ.ಗಳ ಸಂಖ್ಯೆ 7ಕ್ಕೇರಿದೆ.
ಚುನಾವಣೆ ವಿಳಂಬ
ಸಾಮಾನ್ಯವಾಗಿ ಜಿ.ಪಂ.ನ ಚುನಾಯಿತ ಅವಧಿ ಮುಕ್ತಾಯಗೊಳ್ಳುವುದರೊಳಗೆ ಚುನಾವಣೆ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಚುನಾವಣ ಆಯೋಗ ಸಿದ್ಧತೆ ಆರಂಭಿಸಿತ್ತು. ಜಿ.ಪಂ., ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡನೆ ನಡೆದು ಹೊಸ ಕ್ಷೇತ್ರಗಳ ಹೆಸರು, ಕ್ಷೇತ್ರವಾರು ಮತದಾರರ ಸಂಖ್ಯೆ ನಿಗದಿಯೂ ಮುಗಿದು ಕ್ಷೇತ್ರವಾರು ಮೀಸಲಾತಿ ನಿಗದಿ ಮಾತ್ರ ಬಾಕಿಯುಳಿದಿತ್ತು. ಆದರೆ ಈ ಹಂತದಲ್ಲಿ ಕೊರೊನಾ ಅಲೆ ಎದುರಾದ ಹಿನ್ನೆಲೆಯಲ್ಲಿ ಎಲ್ಲ ಚುನಾವಣೆಗಳನ್ನು ಆರು ತಿಂಗಳು ನಡೆಸದಿರಲು ರಾಜ್ಯ ಸರಕಾರ ನಿರ್ಧರಿಸಿತ್ತು.
ಕೊರೊನಾ ಕಡಿಮೆಯಾದ ಬಳಿಕ ಕ್ಷೇತ್ರವಾರು ಮೀಸಲಾತಿ ಪ್ರಕಟಿಸಿ ಚುನಾವಣ ಆಯೋಗ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ರಾಜ್ಯ ಸರಕಾರ ಕ್ಷೇತ್ರ ಪುನರ್‌ವಿಂಗಡನೆಯನ್ನು ವಿಧಾನಸಭಾ ಕ್ಷೇತ್ರವಾರು ನಡೆಸುವ ನಿರ್ಧಾರ ಕೈಗೊಂಡದ್ದರಿಂದ ಚುನಾವಣೆ ಸಂಬಂಧಿ ಪ್ರಕ್ರಿಯೆಗಳು ಸ್ಥಗಿತಗೊಂಡವು. ಇದೇ ಸಂದರ್ಭದಲ್ಲಿ ಒಬಿಸಿ ಮೀಸಲಾತಿ ಕುರಿತ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಚುನಾವಣೆ ಅನಿಶ್ಚಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.