ಬೈಕಂಪಾಡಿ ಕೈಗಾರಿಕೆ ಪ್ರದೇಶದ 2 ಲೇನ್, ಜೋಕಟ್ಟೆಗೆ ಟ್ಯಾಂಕರ್ ನೀರೇ ಗತಿ!
Team Udayavani, Jan 8, 2023, 6:45 AM IST
ಬೈಕಂಪಾಡಿ: ಬೈಕಂಪಾಡಿ ಕೈಗಾರಿಕೆ ಪ್ರದೇಶದ ಪಣಂಬೂರು ಪೊಲೀಸ್ ಠಾಣೆ ಹಿಂಭಾಗದ ಎರಡು ಲೇನ್ ಹಾಗೂ ಜೋಕಟ್ಟೆ ರಸ್ತೆಯ ಬೈಕಂಪಾಡಿ ನಾಗಬನ ಸುತ್ತಮುತ್ತ ನೀರಿನ ಸಮಸ್ಯೆ ಉಂಟಾಗಿದ್ದು, ಇದುವರೆಗೂ ಸರಿಪಡಿಸುವ ಕಾಯಕದಲ್ಲೇ ಕುಡ್ಸೆಂಪ್ ನಿರತವಾಗಿದೆ.
ಈ ಭಾಗದಲ್ಲಿ ಜಲಸಿರಿ ಯೋಜನೆಯ ಅಂಗವಾಗಿ ಹೊಸ ಪೈಪ್ ಲೈನ್ ಅಳವಡಿಸಲು ಎಲ್ಲೆಡೆ ಅಗೆಯಲಾಗಿತ್ತು. ಈ ವೇಳೆ ಹಳೆಯ ಕಾಲದ ಪೈಪ್‌ಗ್ಳಿಗೆ ಹಾನಿಯಾಗಿ ನೀರಿನ ಸಂಪರ್ಕವೇ ಕಡಿತಗೊಂಡಿದೆ.
ಗ್ಯಾಲನ್ ಗಟ್ಟಲೆ ನೀರು ಕಂಪೆನಿಗೆ ಹಾಗೂ ಕೆಲಸ ಮಾಡುವ ನೂರಾರು ಕಾರ್ಮಿಕರ ಬಳಕೆಗೆ ನೀರು ಅಗತ್ಯ ವಿರುವ ಹಿನ್ನೆಲೆಯಲ್ಲಿ 6 ವಾರಗಳಿಂದ ನೀರಿಲ್ಲದೆ ಕಷ್ಟ ಪಡು ವಂತಾಗಿದೆ. ದುಬಾರಿ ಹಣ ತೆತ್ತು ಖಾಸಗಿ ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಈ ನಡುವೆ ನೀರಿನ ಸಂಪರ್ಕ ಕಡಿತವಾದ ಸ್ಥಳವನ್ನು ಹಲವು ಬಾರಿ ಹುಡುಕಾಡ ನಡೆಸಿದ್ದರೂ ಮೂಲ ಪತ್ತೆಯಾಗಿಲ್ಲ. ಜಲಸಿರಿಯ ಪೈಪ್‌ಲೈನ್ ವಿವಿಧೆಡೆ ಯಾಂತ್ರಿಕವಾಗಿ ಸಣ್ಣ ರಂಧ್ರ ದ ಮೂಲಕ ಗುಂಡಿ ತೋಡಿ ಪೈಪ್ ಎಳೆಯುವ ಕಾರಣ ಯಾವ ಭಾಗದಲ್ಲಿ ನೀರಿನ ಕೊಳವೆಗಳಿಗೆ ಹಾನಿಯಾಗಿದೆ ಎಂಬುದು ತಿಳಿಯುವುದೇ ಸವಾಲಿನ ಕೆಲಸವಾಗಿದೆ. ಹೀಗಾಗಿ ಇದುವರೆಗೂ ಈ ಎರಡು ಪ್ರಮುಖ ಲೇನ್‌ಗಳಿಗೆ ನೀರು ಇಲ್ಲದೆ ಪರದಾಡುವಂತಾಗಿದೆ.
ಹೊಸ ಪೈಪ್ ಅಳವಡಿಕೆಗೆ ಸೂಚನೆ
ಕೈಗಾರಿಕೆ ಪ್ರದೇಶದ 2 ಮುಖ್ಯ ಭಾಗಗಳಲ್ಲಿ ಕಂಪೆನಿಗಳಿಗೆ ನೀರಿಲ್ಲದೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ. ಪಾಲಿಕೆ ಅಧಿಕಾರಿಗಳಿಗೆ ಈ ಕುರಿತು ಸ್ಥಳ ಪರಿಶೀಲನೆ ಮಾಡಿ, ಜಲಸಿರಿ ವಿಭಾಗದಿಂದಲೇ ಹೊಸ ಪೈಪ್ ಹಾಕಿ ನೀರಿನ ಸಂಪರ್ಕ ಜೋಡಿಸಲು ಸೂಚಿಸಿದ್ದೇನೆ. ಇದಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ.
-ಸುಮಿತ್ರಾ ಕರಿಯ, ಸ್ಥಳೀಯ ಮನಪಾ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.