ನೆಲ್ಯಾಡಿ: ಟ್ಯಾಂಕರ್ ಢಿಕ್ಕಿ; ಬೈಕ್ ಸವಾರ ಸಾವು
Team Udayavani, Nov 24, 2018, 9:55 AM IST
ನೆಲ್ಯಾಡಿ : ನೆಲ್ಯಾಡಿಯ ಆರ್ಲದಲ್ಲಿ ಶುಕ್ರವಾರ ಸಂಜೆ ಎಲ್‌ಪಿಜಿ ಟ್ಯಾಂಕರ್ ಬೈಕ್‌ಗೆ ಢಿಕ್ಕಿಯಾಗಿ ಸವಾರ ಕೋಲ್ಪೆ ನಿವಾಸಿ, ಗೋಳಿತ್ತೂಟ್ಟು ಪೇಟೆಯ ಟೈಲರ್ ಜಗದೀಶ್ ಪೂಜಾರಿ (44) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳೂರಿನಿಂದ ಗ್ಯಾಸ್ ತುಂಬಿಸಿಕೊಂಡು ಬೆಂಗಳೂರು ಕಡೆಗೆ ತೆರಳುತ್ತಿದ್ದ ಬುಲೆಟ್ ಟ್ಯಾಂಕರ್ ಗೋಳಿತ್ತೂಟ್ಟು – ನೆಲ್ಯಾಡಿ ನಡುವಣ ಆರ್ಲದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಬೈಕ್ ಸವಾರ ಟ್ಯಾಂಕರ್‌ನ ಅಡಿಗೆ ಬಿದ್ದಿದ್ದು ದೇಹ ಛಿದ್ರವಾಗಿದೆ. ಟ್ಯಾಂಕರ್ ಹೆದ್ದಾರಿಗೆ ಅಡ್ಡ ಬಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಸಂಚಾರ ಅಸ್ತವ್ಯಸ್ತವಾಯಿತು. ಜಗದೀಶ್ ಪೂಜಾರಿ ಅವರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕುಟುಂಬದ ಆಧಾರ ಸ್ತಂಭ
ಜಗದೀಶ್ ಪೂಜಾರಿ ಕುಟುಂಬ ನಿರ್ವಹಣೆಗೆ ಟೈಲರಿಂಗ್ ವೃತ್ತಿ ನಡೆಸುತ್ತಿ ದ್ದರು. ನೆಲ್ಯಾಡಿ ಪೇಟೆಯಿಂದ, ಬೆಳ್ಳಾರೆಯಿಂದ ವಸ್ತ್ರ ತಂದು ಗೋಳಿತೊಟ್ಟಿನ ತನ್ನ ಮನೆಯಲ್ಲಿ ಹೊಲಿದು ಕೊಡುತ್ತಿದ್ದರು. ಶುಕ್ರವಾರ ನೆಲ್ಯಾಡಿಯಿಂದ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅವಘಡ ಸಂಭವಿಸಿತು. ಇದರಿಂದಾಗಿ ಕುಟುಂಬದ ಆಧಾರಸ್ತಂಭವೇ ಕುಸಿದಂತಾಗಿದೆ.
3 ದಿನಗಳಲ್ಲಿ 2ನೇ ಟ್ಯಾಂಕರ್ ಪಲ್ಟಿ
ಮಂಗಳೂರಿನ ನಂತೂರಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದು ಎರಡು ದಿನ ಕಳೆಯುವಷ್ಟರಲ್ಲಿ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ಇನ್ನೊಂದು ಟ್ಯಾಂಕರ್ ಪಲ್ಟಿಯಾಗಿದೆ. 2013ರಲ್ಲಿ ಪೆರ್ನೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 8 ಮಂದಿ ಮೃತಪಟ್ಟ ಬಳಿಕ ಜಿಲ್ಲಾಡಳಿತ ಅನಿಲ ಸಾಗಾಟಕ್ಕೆ 10 ಮಾರ್ಗಸೂಚಿ ಸಿದ್ಧಪಡಿಸಿತ್ತು. ಆದರೆ ಇದನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರುವುದು ಇಂತಹ ಅವಘಡಕ್ಕೆ ಕಾರಣವೆಂದು ಹೇಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.