Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ
Team Udayavani, Oct 1, 2024, 11:46 PM IST
ಮಂಗಳೂರು: ಮಂಗಳೂರು ಸೇರಿದಂತೆ ಕರಾವಳಿಯ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಸಮಗ್ರ ಸುಧಾರಣೆಗಾಗಿ ಈ ಪ್ರದೇಶದ ಐಟಿ ಉದ್ದಿಮೆಯ ಪ್ರಮುಖರಿರುವ ಐಟಿ ಕಾರ್ಯಪಡೆಯೊಂದನ್ನು ರಚಿಸುವುದು, ಈ ಭಾಗದ ಆವಶ್ಯಕತೆಗಳ ಬಗ್ಗೆ ನಿರಂತರ ಸಮಾಲೋಚನೆ ನಡೆಸಿ, ಮುಂದಿನ ಹೆಜ್ಜೆಗಳನ್ನಿರಿಸುವುದು ಅತ್ಯವಶ್ಯಕ ಎಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟರು.
ನಗರದ ಐಟಿ ಉದ್ದಿಮೆಗಳು, ಐಟಿ ವೃತ್ತಿಪರರೊಂದಿಗೆ ಮಂಗಳವಾರ ಆಯೋಜಿಸ ಲಾಗಿದ್ದ “ಮಂಗಳೂರ್ ಐಟಿ ವೇವ್-ಸರ್ಚಿಂಗ್ ಟುವರ್ಡ್ಸ್ ಸಿಲಿಕಾನ್ ಬೀಚ್ ಆಫ್ ಇಂಡಿಯಾ’ ಎಂಬ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ಐಟಿ ಹಬ್‌ಗ ಪ್ರಸ್ತಾವನೆ: ಮಂಗಳೂರಿನಲ್ಲಿ 50 ಎಕರೆಯಷ್ಟು ಜಾಗ ಸಿಕ್ಕಿದರೆ ಐಟಿ ಹಬ್ ಸ್ಥಾಪಿಸಿ ಆ ಮೂಲಕ ಐಟಿ ಕ್ಷೇತ್ರಕ್ಕೆ ಉತ್ತೇಜನ ಕೊಡಬಹುದು ಎಂಬ ಅಭಿಪ್ರಾಯ ಕೇಳಿಬಂದಿದ್ದು, ಅದಕ್ಕೆ ಉತ್ತರಿಸಿದ ಕ್ಯಾ| ಚೌಟ, ಈ ಕುರಿತು ಕಾರ್ಯಪಡೆ ಮೂಲಕ ಚರ್ಚಿಸಿ ಪ್ರಸ್ತಾವನೆ ಸಿದ್ಧಪಡಿಸೋಣ ಎಂದರು.
ನೊವಿಗೂ ಸೊಲ್ಯೂಷನ್ಸ್‌ನ ಪ್ರವೀಣ್ ಕಲಾºವಿ ಸಂವಾದ ನಿರ್ವಹಿಸಿದರು. ಶಶಿರ್ ಶೆಟ್ಟಿ ಸಂಯೋಜಿಸಿದರು. ರೋಬೋಸಾಫ್ಟ್‌ನ ರೋಹಿತ್ ಭಟ್, ಕೆನರಾ ಚೇಂಬರ್ಸ್ ಅಧ್ಯಕ್ಷ ಆನಂದ್ ಜಿ. ಪೈ ಮುಂತಾದವರು ಪ್ರತಿಕ್ರಿಯಿಸಿದರು.
ಶಿರಾಡಿಘಾಟಿಯಲ್ಲಿ ರೈಲ್ವೇ-ಹೆದ್ದಾರಿ ಜತೆ ಜತೆಗೆ: ಶಿರಾಡಿಘಾಟಿಯಲ್ಲಿ ಈಗಿರುವ ಹೆದ್ದಾರಿಗೆ ಸಮಾಂತರವಾಗಿ ವಯಡಕ್ಟ್(ದೀರ್ಘ ಸೇತುವೆ) ರೀತಿಯಲ್ಲಿ ಇನ್ನೆರಡು ಲೇನ್ ಹೆದ್ದಾರಿ ನಿರ್ಮಿಸುವ ಬಗ್ಗೆ ಯೋಜನೆಗಳು ಚರ್ಚೆ ಹಂತದಲ್ಲಿವೆ, ಇದರ ಜತೆಗೆ ರೈಲ್ವೇ ಮಾರ್ಗವನ್ನೂ ಸೇರಿಸುವಂತೆ ಸಲಹೆ ನೀಡಿದ್ದೇನೆ, ಆ ಮೂಲಕ ಘಾಟಿ ಸೆಕ್ಷನ್‌ನಲ್ಲಿ ಹೆಚ್ಚು ಸಮಯ ರೈಲ್ವೇಯಲ್ಲಿ ವ್ಯರ್ಥವಾಗುವುದಕ್ಕೆ ಕೂಡ ಪರಿಹಾರ ಸಿಗಬಹುದು ಎಂದು ಚೌಟ ಹೇಳಿದರು.
ಮಂಗಳೂರು-ಬೆಂಗಳೂರು ಮಧ್ಯೆ ಸಂಪರ್ಕ ಸುಧಾರಣೆವಾಗಿ ಮುಖ್ಯಮಂತ್ರಿಯವರಿಗೂ ವಿವರಿಸಿದ್ದೇನೆ, ಈ ಭಾಗದಲ್ಲಿ ಬಂದರು, ಕೈಗಾರಿಕೆಗಳ ಸುಧಾರಣೆ ಸಾಧ್ಯ, ಆ ಮೂಲಕ ರಾಜ್ಯದ ಜಿಡಿಪಿಗೆ ದೊಡ್ಡ ಕೊಡುಗೆ ಸಿಗಲಿದೆ ಎನ್ನುವುದನ್ನು ಅವರಿಗೂ ತಿಳಿಸಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.