‘ರಸ್ತೆ ವಿಸ್ತರಣೆಗೆ ಜಾಗ ನೀಡಿದವರಿಗೆ ಟಿಡಿಆರ್’
Team Udayavani, Oct 30, 2017, 12:44 PM IST
ಕೊಟ್ಟಾರ ಚೌಕಿ: ಮೂಲ ಸೌಕರ್ಯ ಪ್ರತಿಯೊಬ್ಬರಿಗೂ ಆವಶ್ಯಕವಾಗಿದ್ದು, ಪಾಲಿಕೆಯ ಜತೆ ಜನರೂ ಕೈ ಜೋಡಿಸಿದಲ್ಲಿ ಅದನ್ನು ಸುಲಭವಾಗಿ ಸಾಧಿಸಬಹುದು ಎಂದು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಹೇಳಿದರು.
ಕೊಟ್ಟಾರಚೌಕಿ ಮಾಲೆಮಾರ್ ಅಯ್ಯಪ್ಪ ಗುಡಿ ಮುಂಭಾಗದ ಕಾಲನಿಯಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ, ಕಾಂಕ್ರೀಟ್, ಒಳಚರಂಡಿ ಮತ್ತಿತರ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಟಿಡಿಆರ್ ನೀಡಲಾಗಿದೆ. ಈ
ವ್ಯವಸ್ಥೆಯಲ್ಲಿ ಪಾಲಿಕೆಯ ಅನುಮತಿಯೊಂದಿಗೆ 400ರಿಂದ 800 ಚದರ ಅಡಿವರೆಗೆ ಕೊಠಡಿ ಮತ್ತಿತರ ವ್ಯವಸ್ಥೆ ನಿರ್ಮಿಸಲು ಇದರಿಂದ ಸಾಧ್ಯವಿದೆ. ಇತರರಿಗೂ ಪರಭಾರೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಶುಚಿತ್ವ ಕಾಪಾಡಿ
ಒಂದು ಕಾಲದಲ್ಲಿ ಮಾಲೆಮಾರ್ ಮೂಲ ಸೌಕರ್ಯವಿಲ್ಲದೆ ನೆರೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಪ್ರದೇಶವಾಗಿತ್ತು. ಈಗ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಾನಗರ ಪಾಲಿಕೆ ಶುಚಿತ್ವ ಕಾಪಾಡಲು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಮನೆ ಮನೆ ತ್ಯಾಜ್ಯ ಸಂಗ್ರಹ ಮಾಡಿ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಬಡಾವಣೆಯ ರಸ್ತೆ ಪಕ್ಕ ಹಾಗೂ ಖಾಲಿ ಜಾಗಗಳಲ್ಲಿ ಕಸ ಎಸೆಯದೆ, ಶುಚಿತ್ವ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮ್ಮಾನ
ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಭೂಮಿ ಬಿಟ್ಟು ಸಹಕರಿಸಿದ ಪಾರ್ವತಿ, ಚಂದ್ರಾವತಿ, ಹಿರಿಯ ಕಾರ್ಯಕರ್ತ ಲೋಕನಾಥ್, ಅರುಣ್ ಕುಮಾರ್, ಮೈಕಲ್ ಅವರನ್ನು ಸಮ್ಮಾನಿಸಲಾಯಿತು. ಮುಖಂಡರಾದ ಶಕುಂತಳಾ ಕಾಮತ್, ಶೇಖರ್ ಶೆಟ್ಟಿ, ಲ್ಯಾನ್ಸಿ ಮೊಂತೆರೋ, ಆಶಾ ಶೆಟ್ಟಿ, ದಿನೇಶ್ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಾಲೆಮಾರ್ – ಆಕಾಶ ಭವನ ರಸ್ತೆಗೆ ಡಾಮರು
ಮುಂದಿನ ಹಂತದಲ್ಲಿ ಮಾಲೆಮಾರ್ ಆಕಾಶ ಭವನ ರಸ್ತೆಗೆ ಡಾಮರು ಕಾಮಗಾರಿಗೆ ಯೋಜನೆ ರೂಪಿಸಿದ್ದು, ಅಂದಾಜು 30 ಲಕ್ಷ ರೂ. ವೆಚ್ಚ ತಗುಲಲಿದೆ. ಮುಂದಿನ ವರ್ಷ ಕಾಮಗಾರಿ ಆರಂಭಿಸಲು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಶಿಧರ ಹೆಗ್ಡೆ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.