ಶಾಲಾರಂಭಕ್ಕೆ ಮಕ್ಕಳ, ಶಿಕ್ಷಕರ ಕೊರತೆಯ ದುಗುಡ!
Team Udayavani, May 29, 2018, 4:20 AM IST
ಸುರತ್ಕಲ್ : ಸುರತ್ಕಲ್ ಮಾ. ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಮಕ್ಕಳ ಪ್ರವೇಶ ಒಂದೆರಡು. ನೇರವಾಗಿ ಅಂಗನವಾಡಿಯಿಂದ ಒಂದನೇ ತರಗತಿಗೆ ಪ್ರವೇಶಾತಿ ಪಡೆದ 13 ಮಕ್ಕಳು. ಇಲ್ಲಿ ಗಣಿತ, ಇಂಗ್ಲಿಷ್ ಶಿಕ್ಷಕರಿಗೆ ನಿವೃತ್ತಿಯಾಗಿದೆ. ಇರುವ ಶಿಕ್ಷಕರ ಸಂಖ್ಯೆ ಎರಡು. ಓರ್ವರು ದೈಹಿಕ ಶಿಕ್ಷಣ ಶಿಕ್ಷಕರು. ಆದರೆ ಇಲ್ಲಿ ಸುಸಜ್ಜಿತ ಕಟ್ಟಡವಿದೆ. ಬಾವಿ ನೀರು, ಶೌಚಾಲಯ, ಆಡಲು ಸ್ವಲ್ಪ ಜಾಗವಿದೆ. ಸುಂದರ ಕೈತೋಟ ಮಾಡಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಇಲ್ಲ ಎಂಬುದೇ ಕೊರತೆ!
NITK ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಏಳೆಂಟು. ಇಲ್ಲಿಯೂ ಹಸಿರು ಹೊದ್ದ ಪರಿಸರದಲ್ಲಿ ಶಾಲೆಯಿದೆ. ಶಿಕ್ಷಕರು ಮೂವರು. ಕಾನ ಕಟ್ಲ ಶಾಲೆಯಲ್ಲಿ ಬಹುತೇಕ ಏಕೋ ಪಾಧ್ಯಾಯ ಶಾಲೆ. ಇದು ಸರಕಾರಿ ಶಾಲೆಗಳಲ್ಲಿ ಶಾಲಾರಂಭಕ್ಕೆ ಸಿದ್ಧತೆ ಆಗಿದ್ದರೂ ವಿದ್ಯಾರ್ಥಿಗಳಿಗಾಗಿ ಎದುರು ನೋಡುವಂತಾಗಿದೆ.
ಶೋಚನೀಯ ಸ್ಥಿತಿ
ಕನ್ನಡ ಮಾಧ್ಯಮ ಮಾದರಿ, ಸರಕಾರಿ, ಜಿ. ಪಂ. ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಒಂದು ಅಂಕೆಗೆ ತಲುಪಿದೆ. ಶಿಕ್ಷಕರ ನೇಮಕಾತಿಗೆ ಸರಕಾರ ಮನಸ್ಸು ಮಾಡಿಲ್ಲ. ಹೀಗಾಗಿ ಖಾಸಗಿ ಶಾಲೆಗಳಿಗಿಂತ ಶ್ರೀಮಂತ ಸೌಲಭ್ಯ ಹೊಂದಿರುವ ಸರಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗುತ್ತಿದೆ. ಶಿಕ್ಷಕರು, SDMC, ಸ್ಥಳೀಯ ಸರಕಾರೇತರ ಸಂಸ್ಥೆಗಳು ಕಾರ್ಮಿಕ ವರ್ಗದ ಮನೆ ಮನೆ ತೆರಳಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿ, ನಾವು ಸೌಲಭ್ಯ ಒದಗಿಸುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ಕಟ್ಟಡ, ಪುಸ್ತಕ, ಶೌಚಾಲಯ ಮತ್ತಿತರ ಸೌಲಭ್ಯ ಒದಗಿಸಿದರೂ ಮಕ್ಕಳ ಪ್ರವೇಶ ಮಾತ್ರ ಆಗುತ್ತಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ಕನಿಷ್ಠ ಮಾನದಂಡವನ್ನು ಸರಕಾರ ನಿಗದಿಪಡಿಸಿದೆ. ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಬೈಕಂಪಾಡಿ ಸಹಿತ ವಿವಿಧೆಡೆ ಆಟದ ಮೈದಾನ, ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಎಲ್ಲವೂ ಇವೆ. ಸಮರ್ಪಕ ಗ್ರಂಥಾಲಯ, ಬೋಧನ ಕಲಿಕಾ ಉಪಕರಣ, ಆಟದ ಸಾಮಗ್ರಿಗಳು ಅಗತ್ಯವಿರುವಷ್ಟು ಇಲ್ಲದಿದ್ದರೂ ಮಕ್ಕಳ ದೈಹಿಕ ವ್ಯಾಯಾಮಕ್ಕೆ ಪ್ರೋತ್ಸಾಹ ನೀಡುವಷ್ಟು ಇದೆ. ಆದರೆ ಆಂಗ್ಲ ಮಾಧ್ಯಮದ ಪ್ರಭಾವದಿಂದ ಕನ್ನಡ ಸರಕಾರಿ ಶಾಲೆಗಳಿಗೆ ಪ್ರವೇಶಾತಿ ಮಾತ್ರ 2018-19ನೇ ಸಾಲಿನಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯಲಿದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ಸಂಪನ್ಮೂಲ ಒದಗಿಸಿ
ಯಾವುದೇ ಭೇದಭಾವ ಇಲ್ಲದೆ ಸಮಾನತೆಯ ನೆಲೆಯಲ್ಲಿ ಶಿಕ್ಷಣ ನೀಡುವ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಪನ್ಮೂಲ ಒದಗಿಸಬೇಕಿದೆ. ಸ್ಥಳೀಯ ದಾನಿಗಳ ನೆರವಿನಿಂದ ಬರುವ ಅನುದಾನ ಗುಣಮಟ್ಟದ ಶಿಕ್ಷಣ ನೀಡುವಷ್ಟು ಸಾಲುವುದಿಲ್ಲ. ಹೀಗಾಗಿಯೇ ಸರಕಾರಿ ಶಾಲೆಗಳ ಪ್ರವೇಶಕ್ಕೆ ಮಕ್ಕಳ ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಆಂಗ್ಲ ಮಾಧ್ಯಮ ಪ್ರಭಾವ ಕೂಡ ಕನ್ನಡ ಶಾಲೆಯ ಹಿನ್ನಡೆಗೆ ಕಾರಣ ಎಂಬುದನ್ನು ಒಪ್ಪಿಕೊಳ್ಳಲೇಬೇಕಿದೆ.
– ಪ್ರಮೋದ್ ಆಚಾರ್ಯ, ಬೈಕಂಪಾಡಿ
ಸ್ವಾಗತಿಸಲು ಸಿದ್ಧತೆ
ಮಕ್ಕಳ ಪ್ರವೇಶಾತಿ ಜೂನ್ ಶಾಲಾರಂಭದ ಸಮಯದಲ್ಲೇ ನಡೆಯುತ್ತದೆ. ಜೂನ್ 30ರ ವರೆಗೆ ಇರುತ್ತದೆ. ಹೀಗಾಗಿ ಎಷ್ಟು ಮಕ್ಕಳು ಬರುತ್ತಾರೆ ಎಂದು ನಿಖರವಾಗಿ ಹೇಳಲು ಕಷ್ಟ. ಶಿಕ್ಷಕರ ಕೊರತೆ ಆಗದಂತೆ ಶಾಲಾರಂಭದ ಸಂದರ್ಭ ವ್ಯವಸ್ಥೆ ಮಾಡಲಾಗಿದೆ. ಶಾಲೆಗಳನ್ನು ಅಂದಚಂದಗೊಳಿಸಿ, ಜಾಥಾ ಮೂಲಕ ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿದ್ದೇವೆ.
– ಮಂಜುಳಾ, BEO ಮಂಗಳೂರು ಉತ್ತರ
— ಲಕ್ಷ್ಮೀನಾರಾಯಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.