ತಾಂತ್ರಿಕ ಸಮಸ್ಯೆ: ಒಂದು ವಿಮಾನ ರದ್ದು, ಇನ್ನೊಂದು ವಿಳಂಬ
Team Udayavani, Nov 11, 2022, 6:34 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬಯಿ, ಬೆಂಗಳೂರಿಗೆ ಬುಧವಾರ ತೆರಳಲಿದ್ದ ವಿಮಾನಗಳು ಹಲವು ತಾಸು ಕಾಲ ತಡವಾದದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ.
ಮುಂಬಯಿಗೆ ತೆರಳಬೇಕಿದ್ದ ವಿಮಾನ ಸುಮಾರು 6 ತಾಸು ತಡವಾಗಿದೆ. ಎರಡೂ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿತ್ತು. ಬೆಂಗಳೂರಿಗೆ ಮಧ್ಯಾಹ್ನ 1.50ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಪ್ರಯಾಣಿಕರು ಸಿದ್ಧರಾಗಿ ಕುಳಿತಿದ್ದರು, ಕೊನೇ ನಿಮಿಷದಲ್ಲಿ ಇಳಿಯುವಂತೆ ಸೂಚಿಸಲಾಯಿತು. 2 ತಾಸುಗಳ ಬಳಿಕ ಮತ್ತೆ ವಿಮಾನ ವೇರುವಂತೆ ತಿಳಿಸಲಾಯಿತು. ಆದರೆ ಮತ್ತೆ ಇಳಿಯಲು ಹೇಳಲಾಯಿತು. ಕೊನೆಗೆ ಸಮಸ್ಯೆ ಬಗೆಹರಿಯದೆ ಹಾರಾಟ ರದ್ದಾಗಿರುವುದಾಗಿ ತಿಳಿದುಬಂದಿದೆ. ಈ ವಿಮಾನದಲ್ಲಿ ಸಚಿವ ಸುನಿಲ್‌ಕುಮಾರ್ ಬೆಂಗಳೂರಿಗೆ ತೆರಳಲಿದ್ದರು. ವಿಮಾನ ರದ್ದಾದ ಹಿನ್ನೆಲೆಯಲ್ಲಿ ಅವರು ರಾತ್ರಿ 10ರ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಿದರು.
ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ವಿಳಂಬವಾಗಿರು ವುದು ನಿಜ. ಅನಿವಾರ್ಯ ಕಾರಣಗಳಿಂದ ಇಂತಹ ಸನ್ನಿವೇಶ ಉಂಟಾಗುತ್ತದೆ ಎಂದು ಈ ಕುರಿತು ಇಂಡಿಗೊ ವಿಮಾನ ಸಂಸ್ಥೆಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.