ದೇಗುಲ ನವೀಕರಣ ದೇವಿಯ ಸಂಕಲ್ಪ
Team Udayavani, Mar 6, 2019, 1:00 AM IST
ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವನ ಸಂಕಲ್ಪದಿಂದಲೇ ಪೊಳಲಿ ದೇವಸ್ಥಾನವು ನವೀಕರಣಗೊಂಡಿದೆ. ದೇವಿಯ ಸಾಮ್ರಾಜ್ಯದಲ್ಲಿ ಮಾತೆಯ ಸೇವೆಯ ಭಾಗ್ಯ ಲಭಿಸಿರುವುದು ಭಕ್ತರಾದ ನಮ್ಮ ಪುಣ್ಯ. ಅನ್ಯರ ಆಕ್ರಮಣ-ದಾಳಿಗಳಿಂದ ಹಲವಾರು ದೇವಸ್ಥಾನಗಳು ನಾಶಗೊಂಡಿದ್ದು, ಅವುಗಳ ನವೀಕರಣವೂ ನಡೆಯಬೇಕು ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಂಗಳವಾರ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ 2ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವಿಹಿಂಪ ಪ್ರಾಂತ್ಯ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಧಾರ್ಮಿಕ ಉಪನ್ಯಾಸ ನೀಡಿದರು. ಶಾಸಕ ಡಾ| ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್, ಗಣ್ಯರಾದ ಬಾಲಕೃಷ್ಣ ಕೊಟ್ಟಾರಿ, ಉಳ್ಳಾಲ ಚಂದ್ರಹಾಸ ಉಳ್ಳಾಲ, ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪದ್ಮನಾಭ ಕೊಟ್ಟಾರಿ, ಡಾ| ಎ. ರಾಮಕೃಷ್ಣ ಶೆಟ್ಟಿ ಅಮ್ಮುಂಜೆಗುತ್ತು, ರಮಾನಾಥ ರೈ, ಯು. ತಾರಾನಾಥ ಆಳ್ವ, ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಯಶವಂತ ಕೋಟ್ಯಾನ್ ಉಪಸ್ಥಿತರಿ ದ್ದರು. ಡಿ.ಎನ್. ಖಂಡಿಗೆ ನಿರ್ವಹಿಸಿದರು.
ಸಮ್ಮಾನ: ಗುತ್ತಿಗೆದಾರ ಮಹಾಬಲ ಶೆಟ್ಟಿ, ದಾರುಶಿಲ್ಪಿಗಳಾದ ಗಣೇಶ್ ಆಚಾರ್ಯ, ಲಕ್ಷ್ಮಣ್ ಶರ್ಮ, ಮಂಗಳೂರು ಗೋವರ್ಧನ್ ಮೆಟಲ್ಸ್‌ನ ಶಿವಪ್ರಸಾದ್, ಸುರಭಿ ಫ್ಯಾಬ್ರಿಕೇಶನ್ಸ್ ವರ್ಕ್ಸ್ನ ನವೀನ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.