ಸೋಮಾವತಿ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಾಣ
Team Udayavani, Jan 11, 2019, 4:17 AM IST
ಬೆಳ್ತಂಗಡಿ: ಪ್ರತಿವರ್ಷವೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಇಲ್ಲಿನ ಸೋಮಾವತಿ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸಿ ಬಳಿಕ ಅದನ್ನು ಶುದ್ಧೀಕರಿಸಿ ಜನತೆಗೆ ಕುಡಿಯುವ ನೀರನ್ನು ಒದಗಿ ಸುತ್ತಿದ್ದು, ಈ ವರ್ಷದ ಮುಂದಿನ ವಾರ ಅಂದರೆ ಜ. 15ರ ವೇಳೆಗೆ ಸುಮಾರು 1.75 ಲಕ್ಷ ರೂ.ವೆಚ್ಚದಲ್ಲಿ ಕಟ್ಟ ನಿರ್ಮಾಣದ ಕಾರ್ಯ ನಡೆಯಲಿದೆ.
ಕಳೆದ ಮಳೆಗಾಲದಲ್ಲಿ ಆರಂಭದಲ್ಲಿ ಸಾಕಷ್ಟು ಮಳೆ ಬಂದಿದ್ದರೂ ಸೆಪ್ಟಂಬರ್ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಗಣ ನೀಯ ಇಳಿಕೆಯಾಗಿದ್ದು, ಜನತೆ ಯನ್ನು ಆತಂಕಕ್ಕೀಡು ಮಾಡಿತ್ತು. ಬೇಸಗೆ ಯಲ್ಲಿ ಬೆಳ್ತಂಗಡಿ ಜನತೆಗೆ ನೀರು ಕೊಡುವುದಕ್ಕಾಗಿ ಆ ಸಂದರ್ಭದಲ್ಲೇ ಕಟ್ಟ ನಿರ್ಮಿಸಬೇಕೇ ಎಂಬ ಆತಂಕವೂ ಸೃಷ್ಟಿಯಾಗಿತ್ತು.
ಆದರೆ ಬಳಿಕ ಮತ್ತೆ ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ಪ್ರಸ್ತುತ ನದಿಯಲ್ಲಿ ನೀರಿನ ಸ್ಥಿತಿ ಉತ್ತಮ ಮಟ್ಟದಲ್ಲಿದ್ದು, ಈ ಹಿಂದಿನಂತೆ ಜನವರಿಯಲ್ಲೇ ಕಟ್ಟ ನಿರ್ಮಿ ಸುವ ಸ್ಥಿತಿ ನಿರ್ಮಾಣವಾಗಿದೆ.
1.05 ಎಂಎಲ್‌ಡಿ ಬೇಡಿಕೆ
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,415 ನೀರಿನ ಸಂಪರ್ಕಗಳಿದ್ದು, ಪ್ರತಿನಿತ್ಯ ಸುಮಾರು 1.05 ಎಂಎಲ್‌ಡಿ ನೀರಿನ ಬೇಡಿಕೆ ಇದೆ. ಸುಮಾರು 0.6 ಎಂಎಲ್‌ಡಿ ನೀರನ್ನು ನದಿಯಿಂದ ಹಾಗೂ 0.45 ಎಂಎಲ್‌ಡಿ ನೀರನ್ನು 9 ಕೊಳವೆಬಾವಿಗಳ ಮೂಲಕ ಪಡೆಯಲಾಗುತ್ತಿದೆ.
ಹೀಗಿರುತ್ತದೆ ಕಟ್ಟ
ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸುವ ಸಂದರ್ಭದಲ್ಲಿ ಹಿಚಾಚಿ ಮೂಲಕ 1 ಮೀಟರ್‌ನಷ್ಟು ನದಿಯ ಚರಳನ್ನು ತೆಗೆದು, ಅದಕ್ಕೆ ಮರಳು ಚೀಲಗಳನ್ನು ಇಟ್ಟು ಅಡಿಪಾಯವನ್ನು ಮಾಡಲಾಗುತ್ತದೆ. ಬಳಿಕ 2 ಮೀಟರ್‌ನಷ್ಟು ಎತ್ತರಕ್ಕೆ ಮಣ್ಣು ಹಾಕಲಾಗುತ್ತದೆ.
ಬಳಿಕ ಗೋಣಿ ಚೀಲದಲ್ಲಿ ಮಣ್ಣನ್ನು ತುಂಬಿಸಿ ಚಾನೆಲ್ ರೀತಿ ಮಾಡಲಾಗುತ್ತದೆ. ಅಂದರೆ ಓವರ್‌ಫ್ಲೋ ಆದ ನೀರು ಇದರ ಮೂಲಕ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ಮಳೆ ಬಂದು ನೀರು ಹೆಚ್ಚಾದರೂ ಇದರ ಮೂಲಕ ಹರಿದು ಹೋಗುತ್ತದೆ. ತಾತ್ಕಾ ಲಿಕ ಕಟ್ಟ ನಿರ್ಮಿಸುವ ಕಾರಣದಿಂದ ಮುಂದಿನ ವರ್ಷಕ್ಕೆ ಏನೂ ಸಿಗುವುದಿಲ್ಲ. ಮಳೆಗಾಲದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ.
ಮಿತವಾಗಿ ಬಳಸಿ
ಪ್ರಸ್ತುತ ದಿನಗಳಲ್ಲಿ ಇತರ ನಗರ ಭಾಗಗಳಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ಕಾಡುತ್ತಿದ್ದು, ಬೆಳ್ತಂಗಡಿಯ ಜನತೆಯೂ ನೀರನ್ನು ಮಿತವಾಗಿ ಬಳಸಬೇಕು ಎಂದು ಇಲ್ಲಿನ ಪ.ಪಂ.ಮನವಿ ಮಾಡುತ್ತಿದೆ. ಅಂದರೆ ತಮ್ಮ ದಿನಗಳ ಬಳಕೆಗೆ ಅಲ್ಲದೆ ಹೂವಿನ ಗಿಡಗಳು, ಕೃಷಿಗೆ ಈ ನೀರು ಬಳಕೆ ಮಾಡಬಾರದು ಎಂದು ಮನವಿ ಮಾಡುತ್ತಿದೆ.
ಮುಂದಿನ ವಾರ ನಿರ್ಮಾಣ
ಮುಂದಿನ ವಾರ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಾಣ ಕಾರ್ಯ ನಡೆಯಲಿದ್ದು, ಸುಮಾರು 1.75 ಲಕ್ಷ ರೂ.ಗಳನ್ನು ಅದಕ್ಕಾಗಿ ಮೀಸಲಿಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಯಾವುದೇ ತೊಂದರೆ ಇಲ್ಲದಾಗಿದ್ದು, ಜನರೂ ನೀರಿನ ಮಿತ ಬಳಕೆಯ ಕುರಿತು ಹೆಚ್ಚಿನ ಗಮನಹರಿಸಬೇಕಿದೆ.
– ಮಹಾವೀರ ಅರಿಗ ಎಂಜಿನಿಯರ್,
ಪ.ಪಂ. ಬೆಳ್ತಂಗಡಿ 
•ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.